Kasturi Rangan ವರದಿಗೆ ಮತ್ತೆ ರಾಜ್ಯ ತಿರಸ್ಕಾರ?
ಸಂಪುಟದ ಮುಂದೆ 3 ಸಾಧ್ಯತೆ ಮಂಡಿಸಲು ನಿರ್ಧಾರ; ಸಿಎಂ ಜತೆಗೂ ಚರ್ಚೆ ನಡೆಸಲಿರುವ ಅರಣ್ಯ ಸಚಿವರು
Team Udayavani, Sep 21, 2024, 6:55 AM IST
ಬೆಂಗಳೂರು: ರಾಜ್ಯದ 11 ಜಿಲ್ಲೆಗಳ ಜನರಲ್ಲಿ ಆತಂಕ ಮೂಡಿಸಿರುವ ಕಸ್ತೂರಿ ರಂಗನ್ ವರದಿಯನ್ನು ತಿರಸ್ಕರಿಸುವ ಸಾಧ್ಯತೆಯೇ ಅಧಿಕವಾಗಿದೆ.
ವರದಿ ಬಗ್ಗೆ ಅಧ್ಯಯ ನಡೆಸಲು ರಚಿಸಲಾಗಿರುವ ಅರಣ್ಯ ಸಚಿವ ಈಶ್ವರ ಖಂಡ್ರೆ ನೇತೃತ್ವದ ರಾಜ್ಯ ಸಂಪುಟ ಉಪ ಸಮಿತಿ ಸಭೆಯಲ್ಲಿ 3 ಸಾಧ್ಯತೆಗಳ ಬಗ್ಗೆ ಸಂಪುಟ ಸಮಿತಿಗೆ ಸಲ್ಲಿಸಲು ತೀರ್ಮಾನಿಸಿದೆ.
ಮುಂದಿನ ಗುರುವಾರ (ಸೆ.26) ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಉಪಸಮಿತಿ ವರದಿ ಸಲ್ಲಿಕೆಯಾಗಲಿದೆ. ಸಂಪುಟದ ನಿರ್ಣಯ ಆಧರಿಸಿ ಸೆ. 27ರಂದು ಕೇಂದ್ರ ಸರಕಾರಕ್ಕೆ ರಾಜ್ಯ ತನ್ನ ಅಭಿಪ್ರಾಯವನ್ನು ಸಲ್ಲಿಸಲಿದೆ.
ಈ ವಿಷಯಕ್ಕೆ ಸಂಬಂಧಪಟ್ಟಂತೆ ಗುರುವಾರ 11 ಬಾಧಿತ ಜಿಲ್ಲೆಗಳ ಜನಪ್ರತಿನಿಧಿಗಳ ಜತೆಗೆ ರಾಜ್ಯ ಸರಕಾರ ಸಭೆ ನಡೆಸಿ ವರದಿ ಅನುಷ್ಠಾನಕ್ಕೆ ಸಂಬಂಧಪಟ್ಟಂತೆ ಸಾಧ್ಯಾಸಾಧ್ಯತೆಗಳ ಬಗ್ಗೆ ಚರ್ಚೆ ನಡೆಸಿತ್ತು. ಬಹುತೇಕರು ವರದಿಯ ತಿರಸ್ಕಾರಕ್ಕೆ ಸೂಚಿಸಿದ್ದರು. ಆದರೆ ಏಳನೆಯ ಬಾರಿಗೂ ಇದೇ ಕ್ರಮ ಅನುಸರಿಸಿದರೆ ಸುಪ್ರೀಂ ಕೋರ್ಟ್‌ನಲ್ಲಿ ಮುಖಭಂಗವಾಗಬಹುದೆಂಬ ಕಾರಣಕ್ಕೆ ಅರಣ್ಯ ಇಲಾಖೆ ಕೆಲ ಆಯ್ಕೆಗಳನ್ನು ಸೂಚಿಸಿತ್ತು.
ಶುಕ್ರವಾರ ನಡೆದ ಸಂಪುಟ ಉಪಸಮಿತಿ ಸಭೆಯಲ್ಲಿ ಈ ಎಲ್ಲ ವಿಷಯಗಳು ಚರ್ಚೆ ಯಾಗಿವೆ. ಅಂತಿಮವಾಗಿ ಈ ಬಗ್ಗೆ ಸಂಪುಟವೇ ನಿರ್ಧಾರ ತೆಗೆದುಕೊಳ್ಳಲಿ ಎಂದು ವರದಿಯಲ್ಲಿ ಉಲ್ಲೇಖೀಸಲಾಗಿದೆ. 3 ಸಾಧ್ಯತೆಗಳನ್ನು ವರದಿಯಲ್ಲಿ ಸೂಚಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಇವೆಲ್ಲದರ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಜತೆಗೆ ಚರ್ಚೆ ನಡೆಸಲು ಅರಣ್ಯ ಸಚಿವ ಈಶ್ವರ ಖಂಡ್ರೆ ನಿರ್ಧರಿಸಿದ್ದಾರೆ. ಭವಿಷ್ಯದ ದೃಷ್ಟಿಯಿಂದ ಪಶ್ಚಿಮಘಟ್ಟಗಳ ರಕ್ಷಣೆ ಅನಿವಾರ್ಯವಾಗಿದ್ದು, ಕಠಿನ ಕ್ರಮ ಅನುಸರಿಸುವುದು ಅಗತ್ಯ ಎಂದು ಅರಣ್ಯ ಇಲಾಖೆ ಹೇಳಿದೆ. ಹೀಗಾಗಿ ಮಧ್ಯಮ ಮಾರ್ಗದ ಅನ್ವೇಷಣೆಗೆ ಸರಕಾರ ಮುಂದಾಗಿದ್ದು, ಜನ ಪ್ರತಿನಿಧಿಗಳ ಸಲಹೆಯನ್ನು ಗಮನ ದಲ್ಲಿಟ್ಟುಕೊಂಡು ಹೆಜ್ಜೆ ಇಡುವುದು ಅನಿವಾರ್ಯವಾಗಿದೆ.
ಸಾಧ್ಯತೆಗಳೇನು?
1.ಶಾಸಕರ ಆಗ್ರಹದಂತೆ ಕಸ್ತೂರಿರಂಗನ್ ವರದಿ ಅನುಷ್ಠಾನಕ್ಕೆ ಏಕಪಕ್ಷೀಯ ತಿರಸ್ಕಾರ
2.ವಿವಿಧ ಅರಣ್ಯ ಸ್ವರೂಪದಲ್ಲಿ ಇರುವ 16,000 ಚ.ಕೀ. ವ್ಯಾಪ್ತಿಯಲ್ಲಿರುವ ಹಳ್ಳಿಗಳನ್ನು ಹೊರಗಿಟ್ಟು ವರದಿ ಜಾರಿ
3.ಜನವಸತಿ ಪ್ರದೇಶಕ್ಕೆ ವಿಶೇಷ ಪ್ಯಾಕೇಜ್ ಸೇರಿದಂತೆ ಕೆಲ ರಿಯಾಯಿತಿ ಕೋರಿಕೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.