ರಾಜ್ಯ ಸರಕಾರದ ಕಮಿಷನ್ ಶೇ.80ಕ್ಕೆ: ಟ್ವೀಟ್ ಮೂಲಕ ಕುಟುಕಿದ ಕಾಂಗ್ರೆಸ್
Team Udayavani, Feb 1, 2023, 9:35 PM IST
ಬೆಂಗಳೂರು: ಅಧಿಕಾರಾವಧಿ ಮುಗಿಯುವ ಹಂತಕ್ಕೆ ಬರುತ್ತಿರುವಂತೆಯೇ ಬಿಜೆಪಿ ಕರ್ನಾಟಕ ಸರಕಾರದ ಕಮಿಷನ್ ದರ ಶೇ.40ರಿಂದ ಶೇ. 80 ಆಗಿದೆಯೇ ಬಸವರಾಜ ಬೊಮ್ಮಾಯಿ ಅವರೇ? ಮತ್ತೆ ಅಧಿಕಾರ ಸಿಗದು, ಈಗಲೇ ಸಾಧ್ಯವಾದಷ್ಟು ಲೂಟಿ ಮಾಡುವ ತುರಾತುರಿಯೇ ಎಂದು ಪ್ರಶ್ನಿಸಿ ಕಾಂಗ್ರೆಸ್ ಟ್ವೀಟ್ ಮೂಲಕ ಬಿಜೆಪಿಯನ್ನು ಕುಟುಕಿದೆ.
ಕಾಮಗಾರಿ ನಡೆದು ಮೂರೇ ತಿಂಗಳಲ್ಲಿ ಕಿತ್ತು ಹೋಗಿರುವ ಕಳಸ ತಾಲೂಕಿನ ಕಾಂಕ್ರೀಟ್ ರಸ್ತೆ ಕಮಿಷನ್ ದರ ಏರಿಕೆಯ ಕತೆ ಹೇಳುತ್ತಿದೆ. ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆ ನಡೆಯುತ್ತಿರುವುದು ಬೆಳಗಾವಿಯಲ್ಲೋ ಅಥವಾ ಉತ್ತರ ಪ್ರದೇಶದಲ್ಲೋ ? ಬಿಜೆಪಿಯದ್ದು ಹಿಂದಿ ಪ್ರೇಮವೋ, ಅಥವಾ ಹೈಕಮಾಂಡಿನ ಹಿಂದಿ ಹೇರಿಕೆಯೋ, ಕನ್ನಡದ ಕಗ್ಗೊಲೆ ಮಾಡಿ ಶತಾಯ ಗತಾಯ ಕರ್ನಾಟಕವನ್ನು ಹಿಂದಿ ರಾಜ್ಯ ಮಾಡುವುದು ಬಿಜೆಪಿಯ ಗುಪ್ತ ಅಜೆಂಡಾದಲ್ಲೊಂದು ಎಂದು ಕಾಂಗ್ರೆಸ್ ಗುರುತರ ಆರೋಪ ಮಾಡಿದೆ.
ಧಾರವಾಡದ ಕೃಷಿ ವಿವಿಯ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ರೈತರ ಪ್ರತಿಭಟನೆ ಎದುರಿಸಿದ್ದಾರೆ. ಡಬಲ್ ಎಂಜಿನ್ ಸರಕಾರ ಎನ್ನುವ ಬಿಜೆಪಿ ಇದುವರೆಗೂ ಬೆಳೆ ಹಾನಿ ಪರಿಹಾರ ನೀಡದೆ ರೈತರನ್ನು ವಂಚಿಸಿದೆ. ವಿಫಲ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ, ಇದು ಆರಂಭವಷ್ಟೇ. ಇನ್ನು ಮುಂದೆ ನೀವು ಹೋದಲ್ಲೆಲ್ಲ ಜನಾಕ್ರೋಶ ಎದುರಿಸುವುದು ನಿಶ್ಚಿತ. ರೈತ ವಿರೋಧಿ ಬಿಜೆಪಿ ಎಂದು ಟೀಕಿಸಿದೆ.
ಹೈಕೋರ್ಟ್ ಛೀಮಾರಿ:
ಉತ್ಸವಗಳಿಗೆ ಕೋಟಿ ಕೋಟಿ ರೂ. ಖರ್ಚು ಮಾಡುವ ಸರಕಾರ ಮಕ್ಕಳಿಗೆ ಶೂ, ಸಮವಸ್ತ್ರ ನೀಡುವುದಿಲ್ಲ ಎಂದು ಹೈಕೋರ್ಟ್ ಛೀಮಾರಿ ಹಾಕಿರುವುದನ್ನು ತನ್ನ ಟ್ವೀಟ್ ಖಾತೆಯಲ್ಲಿ ಉಲ್ಲೇಖೀಸಿರುವ ಕಾಂಗ್ರೆಸ್,
ಶಾಲೆ ಗೋಡೆಗಳಿಗೆ ಕೇಸರಿ ಬಣ್ಣ ಹೊಡೆಯಲು ಇರುವ ಹಣ ಮಕ್ಕಳಿಗೆ ಶೂ, ಸಾಕ್ಸ್ ನೀಡಲು ಇಲ್ಲವೇ ಬಸವರಾಜ ಬೊಮ್ಮಾಯಿ ಅವರೇ? ಒಂದೂ ಜನಪರ ಯೋಜನೆ ರೂಪಿಸಲಿಲ್ಲ, ನಮ್ಮ ಸರಕಾರದ ಜನಪರ ಯೋಜನೆಗಳನ್ನೂ ಉಳಿಸಲಿಲ್ಲ. ಬಿಜೆಪಿಯ ಸಾಧನೆಯಾದರೂ ಏನು ಎಂದು ಕಾಂಗ್ರೆಸ್ ಗಂಭೀರವಾಗಿ ಪ್ರಶ್ನಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್.ಅಶೋಕ್
BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?
Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?
High Court: ನಕ್ಸಲ್ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್ ಮನವಿ ಮರು ಪರಿಶೀಲನೆಗೆ ನಿರ್ದೇಶ
ಕಸ್ತೂರಿಂಗನ್ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.