ರಾಜ್ಯ ವಕ್ಫ್ ಬೋರ್ಡ್ ಆಡಳಿತ ಮತ್ತು ಹಣಕಾಸು ವಿಭಾಗದ ಅಧ್ಯಕ್ಷ ಆಸೀಪ್ ಅಲಿ ದಾಂಡೇಲಿಗೆ
Team Udayavani, Jul 11, 2023, 3:54 PM IST
ದಾಂಡೇಲಿ: ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್ ಇದರ ಸದಸ್ಯರು ಹಾಗೂ ಆಡಳಿತ ಮತ್ತು ಹಣಕಾಸು ವಿಭಾಗದ ಅಧ್ಯಕ್ಷ ಆಸೀಪ್ ಅಲಿ ದಾಂಡೇಲಿ ನಗರಕ್ಕೆ ಭೇಟಿ ನೀಡಿದರು.
ನಗರದ ಪ್ರವಾಸಿ ಮಂದಿರಕ್ಕೆ ಭೇಟಿ ನೀಡಿದ ಆಸೀಪ್ ಆಲಿ ಅಲ್ಲಿ ಮುಸ್ಲಿಂ ಸಮುದಾಯದ ಮುಖಂಡರ ಜೊತೆ ಚರ್ಚೆ ನಡೆಸಿದರು. ಇದೇ ಸಂದರ್ಭದಲ್ಲಿ ವಿವಿಧ ಮಸೀದಿಗಳ ಕುಂದುಕೊರತೆಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು.
ಈ ಸಂದರ್ಭದಲ್ಲಿ ಮುಸ್ಲಿಂ ಮುಖಂಡರು ನಗರದ ಅಂಜುಮನ್ ಫಲಾಹುಲ್ ಮುಸ್ಲಿಂ ಕಮೀಟಿಗೆ ಚುನಾವಣೆ ಪ್ರಕ್ರಿಯೆಯು 10 ವರ್ಷದಿಂದ ನೆನೆಗುದಿಗೆ ಬಿದ್ದಿದ್ದು, ಕೂಡಲೆ ಚುನಾವಣೆ ಪ್ರಕ್ರಿಯೆಗೆ ಮುಂದಾಗಬೇಕೆಂದು ಹಾಗೂ ಸುನ್ನಿ ಜಮಾತ್ನ ಚುನಾವಣೆಯನ್ನು ಸಹ ಆದಷ್ಟು ಶೀಘ್ರ ಮಾಡಬೇಕೆಂದು ವಿನಂತಿಸಿದರು.
ಸಭೆಯಲ್ಲಿ ಮುಸ್ಲಿಂ ಮುಖಂಡರುಗಳಾದ ಇಕ್ಬಾಲ್ ಶೇಖ್, ರಿಯಾಜ್ ಬಾಬು ಸೈಯದ್, ರಫೀಕ್ ಹುದ್ದಾರ್, ಇಮ್ತಿಯಾಜ್ ಅತ್ತಾರ್, ಅಲಿ ಖಾಜಿ, ಇಮ್ತಿಯಾಜ್ ಶೇಖ್, ಜಿಲಾನಿ ಶೇಖ್, ಅಬ್ದುಲ್ ರೆಹಮನ್ ಫಾರೂಕಿ, ಮೆಹಬೂಬು ಹಾಜಿ, ನಾಸೀರ್ ಕೋತ್ವಾಲ್, ಇಕ್ಬಾಲ್ ಖಾನ್, ರಿಯಾಜ್ ಚೌಕಾಡತ್, ಯೂನುಸ್ ಯಲ್ಲಾಪುರ್, ಅನ್ವರ್ ಪಠಾಣ್, ಅಸ್ಲಂ ಬೆಳಗಾಮಿ, ರಾಜೇಸಾಬ್ ಸುಂಕದ್ ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.