Bike ಕದ್ದು ಹೆಲ್ಮೆಟ್ ಧರಿಸದೆ ಸವಾರಿ: ಮಾಲಕನಿಗೆ ನೋಟಿಸ್!
Team Udayavani, Mar 17, 2024, 12:01 AM IST
ಕಾಸರಗೋಡು: ಕಳ್ಳನೊಬ್ಬ ಕದ್ದ ಬೈಕಿನಲ್ಲಿ ಹೆಲ್ಮೆಟ್ ಧರಿಸದೆ ಸಂಚರಿಸಿದ ಪರಿಣಾಮ ಬೈಕಿನ ಮಾಲಕನಿಗೆ 1 ಸಾವಿರ ರೂ. ದಂಡ ಪಾವತಿಸುವಂತೆ ಮೋಟಾರು ವಾಹನ ಇಲಾಖೆಯಿಂದ ನೋಟಿಸ್ ಬಂದಿದೆ!
ಪಳ್ಳಿಕ್ಕೆರೆ ಗ್ರಾ.ಪಂ. ಅಧ್ಯಕ್ಷ ಎಂ. ಕುಮಾರನ್ ಅವರು ಡಿಸೆಂಬರ್ 29ರಂದು ಪಳ್ಳಿಕ್ಕೆರೆ ಗ್ರಾ.ಪಂ. ಕಚೇರಿ ಪರಿಸರದಲ್ಲಿ ನಿಲ್ಲಿಸಿದ್ದ ಬುಲೆಟ್ ಬೈಕ್ ಕಳವಾಗಿತ್ತು. ಬಳಿಕ ಆ ಬೈಕನ್ನು ಬೇಕಲ ಪೊಲೀಸರು ಕರ್ನಾಟಕದ ಶಿವಮೊಗ್ಗದಿಂದ ಪತ್ತೆಹಚ್ಚಿ ಆರೋಪಿಯನ್ನು ಬಂಧಿಸಿದ್ದರು. ಬೈಕನ್ನು ನ್ಯಾಯಾಲಯದ ಮೂಲಕ ವಾರಸುದಾರರಿಗೆ ಬಿಟ್ಟುಕೊಡಲಾಗಿತ್ತು. ಇದೆಲ್ಲ ಕಳೆದು ಎರಡು ತಿಂಗಳ ಬಳಿಕ ನೋಟಿಸ್ ಜಾರಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.