Stock Market ಜಿಗಿತ: 72000 ಗಡಿ ದಾಟಿ ಸೆನ್ಸೆಕ್ಸ್- ನಿಫ್ಟಿಯೂ 21000 ದಾಖಲೆ
ಮತ್ತೆ ಸಾರ್ವಕಾಲಿಕ ದಾಖಲೆ
Team Udayavani, Dec 27, 2023, 11:54 PM IST
ಹೊಸದಿಲ್ಲಿ/ಮುಂಬಯಿ: ಇದೇ ಮೊದಲ ಬಾರಿಗೆ ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ (ಸೆನ್ಸೆಕ್ಸ್) 72 ಸಾವಿರ ಪಾಯಿಂಟ್ಸ್ ದಾಟಿ ದಾಖಲೆ ಬರೆ ದಿದೆ. ಇದರ ಜತೆಗೆ ನಿಫ್ಟಿ ಸೂಚ್ಯಂಕ ಕೂಡ 21 ಸಾವಿರ ದಾಟಿ ಇತಿಹಾಸ ನಿರ್ಮಾಣ ಮಾಡಿದೆ. ಇದರಿಂದಾಗಿ ಬಿಎಸ್‌ಇನಲ್ಲಿರುವ ಹೂಡಿಕೆ ದಾರರು ನಾಲ್ಕು 11.11 ಲಕ್ಷ ಕೋಟಿ ರೂ. ಲಾಭ ಗಳಿಸಿದ್ದರೆ, ಬುಧವಾರ ಒಂದೇ ದಿನ 2 ಲಕ್ಷ ಕೋಟಿ ರೂ. ಬಾಚಿಕೊಂಡಿದ್ದಾರೆ.
ಮಧ್ಯಂತರದಲ್ಲಿ ಬಿಎಸ್‌ಇ ಸೆನ್ಸೆಕ್ಸ್ 783.05 ಪಾಯಿಂಟ್ಸ್ ವರೆಗೆ ಏರಿಕೆಯಾಗಿ 72,119.85 ವರೆಗೆ ಸೆನ್ಸೆಕ್ಸ್ ಜಿಗಿಯಿತು. ದಿನಾಂತ್ಯಕ್ಕೆ ಅದು 72,038.43ರಲ್ಲಿ ಮುಕ್ತಾಯವಾಯಿತು. ಒಟ್ಟಾರೆಯಾಗಿ 701.63 ಪಾಯಿಂಟ್ಸ್ ಬುಧ ವಾರ ಏರಿಕೆಯಾಗಿದೆ. ಒಟ್ಟು ನಾಲ್ಕು ದಿನಗಳ ಅವಧಿಯಲ್ಲಿ (ಡಿ.21, ಡಿ.22) ಮಂಗಳವಾರ ಮತ್ತು ಬುಧವಾರದಂದು ಬಿಎಸ್‌ಇ ಸೂಚ್ಯಂಕ 1,532.12 ಪಾಯಿಂಟ್ಸ್ ಏರಿಕೆಯಾಗಿದೆ.
ಕಳೆದ ಹಲವು ತ್ತೈಮಾಸಿಕಗಳಿಂದ ದೇಶದ ಒಟ್ಟು ಅರ್ಥ ವ್ಯವಸ್ಥೆಯಲ್ಲಿ ಉಂಟಾಗಿರುವ ಧನಾತ್ಮಕ ಚಟುವಟಿಕೆಗಳಿಂದ ಈ ಏರಿಕೆ ಉಂಟಾ ಗಿದೆ ಎಂದು ಮಾರುಕಟ್ಟೆ ಕ್ಷೇತ್ರದ ತಜ್ಞರು ಹೇಳಿದ್ದಾರೆ. ಇದರಿಂದಾಗಿ ಬಿಎಸ್‌ಇ ಲಿಸ್ಟೆಡ್ ಕಂಪೆನಿಗಳ ಮೌಲ್ಯ 11.11 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. 12 ದಿನಗಳ ಹಿಂದೆ ಬಿಎಸ್‌ಇ ಸೂಚ್ಯಂಕ 71 ಸಾವಿರಕ್ಕೆ ಏರಿಕೆ ಯಾದದ್ದು ಇದು ವರೆಗಿನ ದಾಖಲೆಯಾಗಿತ್ತು. ಇನ್ನು ನಿಫ್ಟಿ ಸೂಚ್ಯಂ ಕ ಕೂಡ 213.40 ಪಾಯಿಂ ಟ್ಸ್ ಏರಿಕೆಯಾಗಿ 21, 654.75ರಲ್ಲಿ ಮುಕ್ತಾಯವಾಗಿದೆ. ಮಧ್ಯಂ ತರದಲ್ಲಿ 234. 4 ಪಾಯಿಂ ಟ್ಸ್ ಏರಿಕೆಯಾಗಿ 21,675.75ರ ವರೆಗೆ ಜಿಗಿ ದಿತ್ತು. ಏಷ್ಯಾದ ಇತರ ಮಾರು ಕಟ್ಟೆಗಳಾದ ಸಿಯೋಲ್, ಟೋಕಿಯೋ, ಶಾಂಘೈ, ಹಾಂಕಾಂಗ್ ಮಾರುಕಟ್ಟೆ ಯಲ್ಲಿಯೂ ವಹಿವಾಟು ಉತ್ತಮ ವಾಗಿತ್ತು.
ರೂಪಾಯಿ ಕುಸಿತ: ಅಮೆರಿಕದ ಡಾಲರ್ ಎದುರು 16 ಪೈಸೆ ಕುಸಿತಗೊಂಡು 83.35 ರೂ.ಗೆ ದಿನ ವಹಿವಾಟು ಮುಕ್ತಾಯಗೊಳಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.