ಕೋವಿಡ್ ತೊಲಗಲಿ, ಆಫೀಸು ತೆರೆಯಲಿ…
Team Udayavani, May 5, 2020, 3:14 PM IST
ಸಾಂದರ್ಭಿಕ ಚಿತ್ರ
ಲಾಕ್‌ಡೌನ್ ಶುರುವಾದಾಗ ಬಹಳ ಖುಷಿಯಾಗಿತ್ತು. ಏಕೆಂದರೆ, ಆಫೀಸಿಗೆ ಹೋಗೋದು, ಬರೋದು, ಟ್ರಾಫಿಕ್ ಜಾಮಲ್ಲಿ ಒದ್ದಾಡೋದು… ಇದೆಲ್ಲವನ್ನೂ ನೆನಪಿಸಿಕೊಂಡು, ಇದರಿಂದ ಮುಕ್ತಿ ಸಿಗುತ್ತಲ್ಲಾ ಅಂತ ಖುಷಿಯೋ ಖುಷಿ. ಬೆಳಗ್ಗೆ ತಿಂಡಿ ಮಾಡಿ, ತಿಂದು, ಗಡಿಬಿಡಿಯಲ್ಲಿ ಆಫೀಸಿಗೆ ಓಡುವ ಒತ್ತಡ ಇದೆಯಲ್ಲ; ಆ ಸಂಕಟ ಯಾರಿಗೂ ಬೇಡ.
ನಾಳೆಯಿಂದ ವರ್ಕ್ ಫ್ರಂ ಹೋಮ್ ಅಲ್ವಾ… ಸ್ವಲ್ಪ ನಿಧಾನಕ್ಕೆ ಏಳ್ಳೋಣ. ತಿಂಡಿ ಅರ್ಧ ಗಂಟೆ ಲೇಟಾದರೂ ಪರವಾಗಿಲ್ಲ- ಹೀಗೆಲ್ಲಾ ಲೆಕ್ಕ ಹಾಕಿಕೊಂಡಿದ್ದೆ. ಆದರೆ, ಆದದ್ದೇ ಬೇರೆ… ಈಗ, ಮನೆಯೂ ಆಫೀಸೇ. ಪ್ರತಿದಿನ ಎದ್ದು, ಆಫೀಸಿನ ಸಮಯಕ್ಕೆ ಸರಿಯಾಗಿಯೇ ಕೆಲಸ ಶುರುಮಾಡಬೇಕು. ಆ ಕಡೆಯಲ್ಲಿ ಕ್ಲೈಂಟ್ ಕಾಯುತ್ತಿರುತ್ತಾರೆ. ಪ್ರತಿದಿನದ ಕೊನೆಯಲ್ಲಿ, ಇವತ್ತು
ಏನೇನು ಮಾಡಿದ್ದೇನೆ, ಹೊಸ ಪ್ಲಾನ್ ಏನು, ಎಷ್ಟು ಜನ ಕ್ಲೈಂಟ್ ಅನ್ನು ಬೆಳಗ್ಗೆಯಿಂದ ಅಟೆಂಡ್ ಮಾಡಿದ್ದೇನೆ ಎಂಬ ಮಾಹಿತಿಯನ್ನು ಮ್ಯಾನೇಜರ್‌ಗೆ ಒಪ್ಪಿಸಬೇಕು… ಇದು ಕೆಲಸದ ಶೆಡ್ನೂಲ್ಡ್
ಆಫೀಸಿನಲ್ಲಿ ಮಾಡ್ತಾ ಇದ್ದರಲ್ಲ, ಅದಕ್ಕಿಂತ ಹೆಚ್ಚು ಕೆಲಸವನ್ನು ಮನೆಯಲ್ಲಿ ಇದ್ದಾಗಲೇ ಮಾಡಿಸಬಹುದು ಎಂಬುದು ನಮ್ಮ ಬಾಸ್ ನಂಬಿಕೆ- ನಿರೀಕ್ಷೆ. ವರ್ಕ್ ಫ್ರಂ ಹೋಮ್ ಆದ್ದರಿಂದ, ಕೆಲಸಕ್ಕೆ ನಿಗದಿತ ಸಮಯ ಕೂಡ ಇರಲಿಲ್ಲ. ನಮ್ಮದು ಟೆಲಿ ಬೇಸ್ಡ್ ಕೆಲಸಗಳಾದ್ದರಿಂದ, ಇಂಥ ಕಡೆಯಿಂದಲೇ ಕೆಲಸ ಮಾಡಬೇಕು ಅಂತಿಲ್ಲ. ಹೇಗಿದ್ದರೂ ಮನೆಯಲ್ಲಿ ಕೂತಿರ್ತಾರಲ್ಲ ಅಂತ
ಹೆಚ್ಚುವರಿ ಕಾಲ್‌ಗಳನ್ನು, ರಜೆ ಹಾಕಿದವರ ಕೆಲಸವನ್ನು, ಈ ಕಡೆ ತಳ್ಳಿಬಿಡುತ್ತಿದ್ದರು. ಕೆಲಸದ ಒತ್ತಡದಲ್ಲಿ ಅಡುಗೆ ಮಾಡಲಿಕ್ಕೂ ಪುರುಸೊತ್ತು ಸಿಗ್ತಿಲ್ಲ ಈಗ. ಅನ್ನುವಂತಿಲ್ಲ, ಅನುಭವಿಸುವಂತಿಲ್ಲ, ಹಾಗಾಗಿದೆ ನಮ್ಮ ಪಾಡು. ನನ್ನ ಕೆಲಸ ಏನೆಂದರೆ, ಜಪಾನಿ ಭಾಷೆಯನ್ನು ಕನ್ನಡಕ್ಕೆ ಅಥವಾ ಇಂಗ್ಲಿಷ್‌ಗೆ ತರ್ಜುಮೆ ಮಾಡಿ ಹೇಳುವುದು. ಮೊನ್ನೆ ಹೀಗಾಯ್ತು… ಬೆಳಗ್ಗೆ 10 ಗಂಟೆಗೆ ಮೀಟಿಂಗ್ ಶುರುವಾಯಿತು. 12ಕ್ಕೆ ಇನ್ನೊಂದು ಮೀಟಿಂಗ್, ಮಾತುಕತೆ. ಇದು ಹೀಗೇ ಮುಂದೆ ಹೋಗಿ ಹೋಗಿ, ಸಂಜೆ ಐದು ಗಂಟೆ ಆಯಿತು. ಆದರೂ ಕೆಲಸ ಮುಗಿಯಲಿಲ್ಲ. ಹೊಟ್ಟೆ ಪೂರ್ತಿ ತಾಳ ಹಾಕುತ್ತಿದೆ. ವೈದ್ಯರು, ಹೊಟ್ಟೆ ಖಾಲಿ ಬಿಡಬೇಡಿ ಅಂತ ಹೇಳಿದ್ದಾರೆ. ನನ್ನ ಊಟದ ಟೈಮ್ ಮಧ್ಯಾಹ್ನದ ಒಂದೂವರೆ ಗಂಟೆ. ಈಗ ನೋಡಿದರೆ ಸಂಜೆ ಐದು ಗಂಟೆ. ಈಗೇನು ಮಾಡೋದು?
ಸಮಯ ಜಾರಿದಂತೆಲ್ಲಾ ನನ್ನ ತಾಳ್ಮೆ ಕಡಿಮೆಯಾಗುತ್ತಾ ಬಂತು. ಆ ತುದಿಯಲ್ಲಿ ಕ್ಲೈಂಟ್ ಜಪಾನಿ ಭಾಷೆಯಲ್ಲಿ ಏನೇ ಹೇಳುತ್ತಿದ್ದಾರೆ. ನನಗೆ ಕೇಳುವ ವ್ಯವಧಾನವಿಲ್ಲ. ಕೊನೆಗೆ, ಇಲ್ಲಿ ನೆಟ್‌ವರ್ಕ್ ಸರಿ ಇಲ್ಲ. ಏನೂ ಕೇಳ್ತಾ ಇಲ್ಲ ಅಂತ ಎರಡು ಮೂರು ಸಲ ಹೇಳಿ, ಕಟ್‌ಮಾಡಿ, ಸುಮ್ಮನೆ ಕೂತೆ. ಅಷ್ಟರಲ್ಲಿ, ಮನೆಯವರು ಜ್ಯೂಸ್ ತಂದುಕೊಟ್ಟರು. ಕುಡಿದೆ. ಸ್ವಲ್ಪ
ಸುಧಾರಿಸಿಕೊಂಡು ಮತ್ತೆ ಕಾರ್ಯನಿರತವಾದೆ. ಇಂಥ ಸಂದರ್ಭದಲ್ಲಿ ಮನೆಯವರ ಅಸಹಕಾರ ಇದ್ದರೆ, ಮಹಿಳೆಯರು ಹೇಗೆ ಕೆಲಸ ಮಾಡಬೇಕು, ಅಲ್ವಾ? ಪುಣ್ಯಕ್ಕೆ, ನಮ್ಮ ಮನೆಯವರೆಲ್ಲರೂ ನೆರವು ನೀಡಿದರು. ಹಾಗಾಗಿ ಬಚಾವ್. ಬೇಗ ಕೊರೊನಾ ತೊಲಗಿ, ಮತ್ತೆ ಆಫೀಸು ತೆರೆಯಲಿ ಅಂತ ನಾನೀಗ ಕಾಯುತ್ತಿದ್ದೇನೆ.
ನೀವೂ ಬರೆಯಿರಿ
ಜೋಶ್ ಪುರವಣಿಗೆ ಚೆಂದದ ಬರಹಗಳು ಬೇಕು, ಕಾಲೇಜಿನಲ್ಲಿ ಕಳೆದ ಮಧುರ ಕ್ಷಣಗಳು | ಗೆಳೆಯರಿಂದ ಕಲಿತ ಪಾಠಗಳು | ಓದುವ ದಿನಗಳಲ್ಲಿ ಆಡಿದ ಆಟಗಳು | ಮಾಡಿದ ಕೀಟಲೆಗಳು | ಟ್ರೆಕಿಂಗ್‌ಹೋದಾಗ ಆದ ಫಜೀತಿಗಳು | ಕನಸೆಂಬ ಕುದುರೆಯನೇರಿ ಜೀಕಿದ ಸಂದರ್ಭಗಳು | ಪ್ರೀತಿಯ ಸೆಳವಿಗೆ ಸಿಕ್ಕು ಪತರಗುಟ್ಟಿದ ದಿನಗಳು | ಪ್ರಪೋಸ್ ಮಾಡಲು ಧೈರ್ಯವಿಲ್ಲದೆ
ಪೆಚ್ಚಾಗಿ ನಿಂತ ಕ್ಷಣಗಳು | ಕಾಲೇಜಿನ ಆವರಣ-ಹಾಸ್ಟೆಲಿನ ಅಂಗಳದಲ್ಲಿ ಮಾಡಿದ ಕಿತಾಪತಿಗಳು | ಮರೆಯಲಾಗದ ಗುರುಗಳು | ಮರೆತುಹೋಗದ ಮಾತುಗಳು | ಎವರ್‌ಗ್ರೀನ್ ಅನ್ನುವಂಥ ಪ್ರೇಮಪತ್ರ…
ಇಂಥವೇ ಘಟನೆಗಳಿಗೆ ಸಂಬಂಧಿಸಿದ ಚೆಂದದ ಬರಹಗಳು ಬೇಕು…
ನಿಮ್ಮ ಬರಹಗಳು ನುಡಿ, ಯೂನಿಕೋಡ್ ಅಥವಾ ಬರಹದಲ್ಲಿ ಇರಲಿ. ಬರಹಗಳನ್ನು ಕಳಿಸಬೇಕಾದ ಇಮೇಲ್ ವಿಳಾಸ-
uvani.josh@ gmail.com
ಪ್ರತಿಭಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್ ಯತ್ನಾಳ್
NH Highway Works: ಬಿ.ಸಿ.ರೋಡು: ಟ್ರಾಫಿಕ್ ಜಾಮ್
Rain: ಪುತ್ತೂರು, ಸುಳ್ಯ; ವಿವಿಧೆಡೆ ಲಘು ಮಳೆ
ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ
Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.