Punjalkatte ಬಿರುಗಾಳಿ: ಇರ್ವತ್ತೂರು ಪರಿಸರದಲ್ಲಿ ಅಪಾರ ಹಾನಿ
ಮರಗಳು, ವಿದ್ಯುತ್ ಕಂಬ ಧರೆಗೆ, ಸಿಡಿಲಾಘಾತದಿಂದ ಮೂವರಿಗೆ ಗಾಯ
Team Udayavani, Jun 4, 2024, 12:14 AM IST
ಪುಂಜಾಲಕಟ್ಟೆ: ಸೋಮವಾರ ಸಂಜೆ ಬಂಟ್ವಾಳದಾದ್ಯಂತ ಸಿಡಿಲು, ಮಿಂಚಿನ ಅಬ್ಬರದ ಜೊತೆಗೆ ಬೀಸಿದ ಸುಂಟರಗಾಳಿಗೆ ತಾಲೂಕಿನ ಇರ್ವತ್ತೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಅಡಿಕೆ ಮರ, ತೆಂಗಿನ ಮರಗಳು, ವಿದ್ಯುತ್ ಕಂಬಗಳು ಧರಾಶಾಯಿಯಾಗಿವೆ. ಸಿಡಿಲು ಬಡಿದು ಮೂವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕೆಲವು ಕಡೆಗಳಲ್ಲಿ ಮನೆಗಳ ಮೇಲೂ ಮರಗಳು ಬಿದ್ದಿದ್ದಲ್ಲದೆ ಅಡಿಕೆ, ಬಾಳೆ, ತೆಂಗಿನ ಮರಗಳು ಮುರಿದು ಬಿದ್ದಿದ್ದು ಅಪಾರ ಪ್ರಮಾಣ ಹಾನಿಯಾಗಿದೆ.
ಮೂವರಿಗೆ ಗಾಯ
ಎರಡು ಕಡೆಗಳಲ್ಲಿ ಮನೆಗೆ ಸಿಡಿಲು ಬಡಿದ ಮೂವರು ಗಾಯಗೊಂಡಿದ್ದರೆ ಮತ್ತೆರಡು ಕಡೆ ಮನೆಗೆ ಸಿಡಿಲು ಬಡಿದು ಹಾನಿಯಾಗಿದೆ. ಕುಡಂಬೆಟ್ಟು ಗ್ರಾಮದ ಸುಬ್ಬೊಟ್ಟು ನಿವಾಸಿಯಾದ ಅನಿತಾ, ರಾಮಯ್ಯ ಗುರಿ ನಿವಾಸಿಗಳಾದ ಲೀಲಾವತಿ ಹಾಗೂ ಮೋಹಿನಿ ಅವರು ಸಿಡಿಲು ಬಡಿದು ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಬಂಟ್ವಾಳ ತಾಲೂಕು ಆಸ್ಪತ್ರೆಗೆ ಸೇರಿಸಲಾಗಿದೆ.
ಅಜ್ಜಿಬೆಟ್ಟು ಗ್ರಾಮದ ಪಚ್ಚೇರಿಪಲ್ಕೆಯಲ್ಲಿ ಅಪ್ಪಿ ಅವರ ಮನೆಗೆ ಸಿಡಿಲು ಬಡಿದು ಭಾಗಶಃ ಹಾನಿ, ಅಜ್ಜಿಬೆಟ್ಟು ಗ್ರಾಮದ ಪಾಂಗಲ್ಪಾಡಿಯಲ್ಲಿ ಶೋಭಾ ಅವರ ಮನೆಗೆ ಸಿಡಿಲು ಬಡಿದು ಭಾಗಶಃ ಹಾನಿಯಾಗಿದೆ.
ಸುಂಟರಗಾಳಿಗೆ ಇರ್ವತ್ತೂರು ಗ್ರಾಮದ ಕುಲಾಲ್ ಎಂಬಲ್ಲಿರುವ ಜಯಲಕ್ಷಿ$¾ ಅವರ ಅಡಿಕೆ ತೋಟದಲ್ಲಿ ಅಡಿಕೆ ಹಾಗೂ ತೆಂಗಿನ ಮರಗಳು ಮುರಿದುಬಿದ್ದುದಲ್ಲದೆ ಕೃಷಿಗೂ ಹಾನಿಯಾಗಿರುತ್ತದೆ. ಇರ್ವತ್ತೂರು ಗ್ರಾಮದ ಪ್ರೇಮಲತಾ ಅವರ ವಾಸ್ತವ್ಯದ ಮನೆಗೆ ತೆಂಗಿನ ಮರ ಬಿದ್ದು ಭಾಗಶಃ ಹಾನಿಯಾಗಿದೆ. ಬಿರುಗಾಳಿಗೆ ಇರ್ವತ್ತೂರು ಗ್ರಾಮದ ಜಾರಿಗೆದಡಿ ಸುಂದರ ನಾಯ್ಕ ಹಾಗೂ ಮಣ್ಣೂರು ರವಿಶಂಕರ ಹೊಳ್ಳ ಅವರ ತೋಟದ ಸುಮಾರು 100ಕ್ಕೂ ಹೆಚ್ಚು ಅಡಿಕೆ ಮರ ಹಾಗೂ ಇರ್ವತ್ತೂರು ಪದವು ಎಂಬಲ್ಲಿನ ಮನೋಜ್ ಹಾಗೂ ಇನಾಸ್ ರೋಡ್ರಿಗಸ್ ಅವರ ರಬ್ಬರ್ ತೋಟಕ್ಕೆ ಹಾನಿಯಾಗಿದೆ.
ಸುಂಟರಗಾಳಿಯಿಂದಾಗಿ ರಸ್ತೆ ಬದಿಯ ಮರಗಳು ಉರುಳಿ ಬಿದ್ದಿದ್ದಲ್ಲದೆ ಇರ್ವತ್ತೂರು ಗ್ರಾ.ಪಂ. ವ್ಯಾಪ್ತಿಯ ಎಡೂ¤ರು ಪದವು, ಇರ್ವತ್ತೂರು, ಎರ್ಮೆನಾಡು, ಸನಂಗುಳಿ, ಪಂಜೋಡಿ, ಮಣ್ಣೂರು, ಕಲಾಬಾಗಿಲು, ಅರ್ಕೆದೊಟ್ಟು, ಗುಂಪಕಲ್ಲು, ಸೇವಾ, ಎಡೂ¤ರು ಮೊದಲಾದೆಡೆ 15ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಮೆಸ್ಕಾಂಗೆ ಅಪಾರ ನಷ್ಟವುಂಟಾಗಿದೆ.
ಮೂರ್ಜೆ-ವಾಮದಪದವು ರಸ್ತೆಯ ಇರ್ವತ್ತೂರುಪದವು, ಕಲಾಬಾಗಿಲುಗಳಲ್ಲಿ ರಸ್ತೆಗೆ ಮರ ಬಿದ್ದು ಸಂಚಾರಕ್ಕೆ ತೊಡಕುಂಟಾದರೆ, ಇರ್ವತ್ತೂರು, ಮೂಡುಪಡುಕೋಡಿ ಗ್ರಾಮಗಳ ಗ್ರಾಮಾಂತರ ರಸ್ತೆಗಳಾದ ಕಲಾಬಾಗಿಲು, ಸೇವಾ, ಮಣ್ಣೂರು, ಅರ್ಕೆದೊಟ್ಟು ಮೊದಲಾದೆಡೆ ರಸ್ತೆಗೆ ಮರ ಬಿದ್ದು ಸಂಚಾರ ಅಸ್ತವ್ಯಸ್ತಗೊಂಡಿತು. ವಿದ್ಯುತ್ ಕಂಬಗಳು ಉರುಳಿ ಬಿದ್ದ ಪರಿಣಾಮ ತಂತಿಗಳು ರಸ್ತೆಗೆ ಬಿದ್ದಿವೆ.
ತೆಂಗಿನ ಮರ ಬಿದ್ದು ಮನೆಗೆ ಹಾನಿ
ನಡ್ವಂತಾಡಿ ಮಠ ಎಂಬಲ್ಲಿ ಆನಂದ ಅವರ ಮನೆಗೆ ತೆಂಗಿನ ಮರ ಬಿದ್ದು ಹಾನಿಯಾಗಿದೆ. ಕೆಲವೆಡೆ ಗಾಳಿಗೆ ಮನೆಯ ಹೆಂಚುಗಳು ಹಾರಿ ಹೋಗಿವೆ. ಮಣ್ಣೂರುನಲ್ಲಿಯೂ ವಿದ್ಯುತ್ ಕಂಬಗಳು, ಮರಗಳು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದು ಸಂಪರ್ಕ ಕಡಿತಗೊಂಡಿದೆ. ಮೆಸ್ಕಾಂ ಸಿಬಂದಿ, ಸ್ಥಳೀಯರು, ಪಂಚಾಯತ್ ಸದಸ್ಯರ ಸಹಕಾರದಲ್ಲಿ ರಸ್ತೆಗೆ ಬಿದ್ದ ಮರಗಳನ್ನು ತೆರವುಗೊಳಿಸುವ ಕಾರ್ಯ ಭರದಿಂದ ಸಾಗುತ್ತಿದೆ.
ಇರ್ವತ್ತೂರು ಗ್ರಾಮಕರಣಿಕ ಪ್ರವೀಣ್ ಮತ್ತು ಸಿಬಂದಿ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ನಷ್ಟದ ಮಹಜರು ನಡೆಸಿದ್ದಾರೆ. ಇನ್ನು ಹಲವೆಡೆ ಅಪಾರವಾಗಿ ಅಡಿಕೆ, ತೆಂಗಿನ ಮರಗಳು ಮುರಿದಿವೆ. ಮನೆಗಳಿಗೆ ಹಾನಿಯಾಗಿದೆ. ಪೂರ್ಣ ಪ್ರಮಾಣದ ಹಾನಿಯ ವಿವರ ಇನ್ನಷ್ಟೇ ಸಿಗಬೇಕಾಗಿದೆ.
ಇದೇ ಮೊದಲಿಗೆ ಭಯಂಕರವಾದ ಸುಂಟರಗಾಳಿ ಬೀಸಿದೆ ಎಂದು ಸ್ಥಳೀಯ ಹಿರಿಯರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.