ಶಿರಾಡಿ ಪರಿಸರದಲ್ಲಿ ಬಿರುಗಾಳಿ; ನೂರಾರು ಅಡಿಕೆ ಮರ ನೆಲಸಮ
Team Udayavani, Jun 9, 2024, 11:41 PM IST
ಉಪ್ಪಿನಂಗಡಿ: ಶಿರಾಡಿ ಗ್ರಾಮದ ಕಡೆಂಬುರ ಪರಿಸರದಲ್ಲಿ ಬಿರುಗಾಳಿಯಿಂದಾಗಿ ಕೃಷಿ ಬೆಳೆಗಳಿಗೆ ಹಾನಿಯಾಗಿದೆ.
ಕಡೆಂಬುರ ನಿವಾಸಿ ವೆಂಕಟರಮಣ ಗೌಡ ಅವರ ತೋಟದಲ್ಲಿ ಬಿರುಗಾಳಿ ಭಾರೀ ಹಾನಿಯನ್ನುಂಟು ಮಾಡಿದ್ದು, 100ಕ್ಕೂ ಮಿಕ್ಕಿದ ಅಡಿಕೆ ಮರಗಳು ಮುರಿದು ಬಿದ್ದಿವೆ. ಅಡಿಕೆ ಒಣಗಿಸಲೆಂದು ಮಾಡಿರುವ ಸೋಲಾರ್ ಗೂಡು ಸಂಪೂರ್ಣ ಧ್ವಂಸವಾಗಿದೆ. 1 ಲಕ್ಷ ರೂಪಾಯಿಗೂ ಅಧಿಕ ನಷ್ಟ ಅಂದಾಜಿಸಲಾಗಿದೆ.
ಪರಿಸರದ ಹಲವೆಡೆ ಇದೇ ರೀತಿ ಹಾನಿಯಾಗಿದ್ದು ಸ್ಥಳಗಳಿಗೆ ಕಂದಾಯ ಇಲಾಖಾಧಿಕಾರಿಗಳು ಭೇಟಿ ನೀಡಿ ನಷ್ಟದ ಮಾಹಿತಿ ಕಲೆಹಾಕಿದ್ದಾರೆ.
ರಸ್ತೆಗೆ ಉರುಳಿದ ಮರ
ಬೆಳ್ತಂಗಡಿ: ತಾಲೂಕಿನೆಲ್ಲೆಡೆ ರವಿವಾರವೂ ಉತ್ತಮ ಮಳೆಯಾಗಿದೆ. ಶನಿವಾರ ಕೊಯ್ಯೂರು ಪಿಜಕಳದಲ್ಲಿ ರಸ್ತೆಗೆ ಅಡ್ಡಲಾಗಿ ಮರ ಬಿದ್ದ ಪರಿಣಾಮ ವಾಹನ ಸಂಚಾರಕ್ಕೆ ಅಡಚಣೆಯುಂಟಾಯಿತು. ತತ್‌ಕ್ಷಣ ಸ್ಥಳೀಯರ ಸಹಕಾರದೊಂದಿಗೆ ತೆರವು ಮಾಡಲಾಯಿತು.
ಬರೆ ಕುಸಿದು ಮನೆಗೆ ಅಪಾಯ
ಬಂಟ್ವಾಳ: ನಿರಂತರ ಮಳೆಯ ಪರಿಣಾಮ ನರಿ ಕೊಂಬು ಗ್ರಾಮದ ನೆಹರೂ ನಗರದಲ್ಲಿ ಬರೆ ಕುಸಿದು ರಾಜು ಕೋಟ್ಯಾನ್ ಅವರ ಮನೆ ಅಪಾಯಕ್ಕೆ ಸಿಲುಕಿದೆ.
ಬರೆಯೊಂದಿಗೆ ಮನೆಯ ಆವರಣ ಗೋಡೆಯೂ ಕೂಡ ಕುಸಿ ದಿದ್ದು, ಇನ್ನಷ್ಟು ಕುಸಿದರೆ ಮನೆ ಕೂಡ ಅಪಾಯಕ್ಕೆ ಸಿಲುಕುವ ಸಾಧ್ಯತೆ ಇದೆ ಎನ್ನಲಾಗಿದೆ. ನರಿಕೊಂಬು ಗ್ರಾಮ ಆಡಳಿತ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಗ್ರಾಮ ಸಹಾಯಕರು ಭೇಟಿ ನೀಡಿ ಪರಿಶೀಲಿಸಿದ್ದಾರೆ.ಬಂಟ್ವಾಳ ತಾಲೂಕಿನಾದ್ಯಂತ ರವಿವಾರವೂ ಉತ್ತಮ ಮಳೆಯಾಗಿದೆ.
ಎಂಟು ವಿದ್ಯುತ್ ಕಂಬಗಳಿಗೆ ಹಾನಿ
ಪುತ್ತೂರು: ತಾಲೂಕಿನಲ್ಲಿ ರವಿವಾರ ಸುರಿದ ಮಳೆಗೆ ಬಪ್ಪಳಿಗೆಯಲ್ಲಿ ರಸ್ತೆ ಬದಿಯ ಭಾರೀ ಗಾತ್ರದ ಮರವೊಂದು ಧರೆಗುರುಳಿ 8 ವಿದ್ಯುತ್ ಕಂಬಗಳು ಹಾನಿಗೀಡಾಗಿವೆ.
ಶಾಸಕ ಅಶೋಕ್ ಕುಮಾರ್ ರೈ ಸ್ಥಳ ಪರಿಶೀಲನೆ ನಡೆಸಿದರು. ಮೆಸ್ಕಾಂ ಮತ್ತು ಅರಣ್ಯ ಅಧಿಕಾರಿಗಳನ್ನು ಕರೆಸಿ ರಸ್ತೆ ಬದಿಯಲ್ಲಿರುವ ಅಪಾಯಕಾರಿ ಮರಗಳನ್ನು ತೆರವು ಮಾಡುವಂತೆ ಸೂಚಿಸಿದರು.
ಲಾೖಲ: ರಸ್ತೆ ಬದಿಯ ತಡೆಗೋಡೆ ಕುಸಿತ
ಬೆಳ್ತಂಗಡಿ: ತಾಲೂಕಿನಾದ್ಯಂತ ರವಿವಾರ ಸಂಜೆ ಬಳಿಕ ಉತ್ತಮ ಮಳೆಯಾಗಿದ್ದು ಲಾೖಲ ಗ್ರಾಮದ ಬಜಕ್ರೆಸಾಲು ಎಂಬಲ್ಲಿ ಲಾೖಲ – ಮುಂಡೂರು ಸಡಕ್ ರಸ್ತೆಯ ಬದಿ ಕಟ್ಟಿದ್ದ ತಡೆಗೋಡೆ ಕುಸಿದು ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ಸ್ಥಳೀಯರು ರಸ್ತೆಯಿಂದ ಕಲ್ಲನ್ನು ಬದಿಗೆ ಸರಿಸಿ ವಾಹನ ಸಂಚಾರಕ್ಕೆ ಅನುವು ಮಾಡಿ ಕೊಟ್ಟರು.
ಬಿಳಿನೆಲೆ: ರಸ್ತೆಗೆ ಉರುಳಿದ ಮರ
ಸುಬ್ರಹ್ಮಣ್ಯ/ಸುಳ್ಯ: ಭಾರೀ ಗಾಳಿ – ಮಳೆಯಿಂದಾಗಿ ಉಪ್ಪಿನಂಗಡಿ-ಕಡಬ-ಸುಬ್ರಹ್ಮಣ್ಯ ಹೆದ್ದಾರಿಯ ನೆಟ್ಟಣ-ಸುಂಕದಕಟ್ಟೆ ನಡುವೆ ಬಿಳಿನೆಲೆ ಸಮೀಪ ಶನಿವಾರ ಅಪರಾಹ್ನ ಹಾಲುಮಡ್ಡಿ ಮರ ರಸ್ತೆಗೆ ಬಿದ್ದು 1 ಗಂಟೆಗೂ ಅಧಿಕ ಸಮಯ ರಸ್ತೆ ತಡೆ ಉಂಟಾಯಿತು. ನಾಲ್ಕು ವಿದ್ಯುತ್ ಕಂಬಗಳು ಮುರಿದಿವೆ.
ರವಿವಾರ ಬೆಳಗ್ಗೆ ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಬದಿಬಾಗಿಲು ಸಮೀಪ ವಿಜಯಕುಮಾರಿ ಅವರ ಮನೆಗೆ ರಬ್ಬರ್ ಮರ ಬಿದ್ದಿದೆ. ಮನೆ ಮಂದಿಗೆ ಯಾವುದೇ ಅಪಾಯ ಸಂಭವಿಸಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್: ಫೋಟೋ ಸಾಕ್ಷ್ಯ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ
Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್
Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.