ವಿವಿದ ಬೇಡಿಕೆಗೆ ಒತ್ತಾಯಿಸಿ ಕಾರ್ಮಿಕರಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭ
Team Udayavani, Jul 1, 2022, 10:50 AM IST
ಕುಣಿಗಲ್: ಪುರಸಭೆಯಲ್ಲಿ ಕೆಲಸ ಮಾಡುತ್ತಿರುವ ಕಸದ ವಾಹನ ಚಾಲಕರನ್ನು ಹಾಗೂ ಹೊರ ಗುತ್ತಿಗೆ ನೌಕರರನ್ನು ಪೌರ ಕಾರ್ಮಿಕ ರೀತಿಯಲ್ಲಿ ನೇಮಕ ಮಾಡಿಕೊಂಡು ನೇರ ವೇತನ ಜಾರಿಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ನಗರಸಭೆ, ನಗರಪಾಲಿಕೆ, ಪುರಸಭೆ, ಪಟ್ಟಣ ಪಂಚಾಯ್ತಿ ಹೊರಗುತ್ತಿಗೆ ನೌಕರರ ಸಂಘದ ಪದಾಧಿಕಾರಿಗಳು ಹಾಗೂ ನೌಕರರು ಕೆಲಸವನ್ನು ಸ್ಥಗಿತಗೊಳಿಸಿ ಪುರಸಭೆ ಮುಂಭಾಗ ಶಾಮಿಯಾನ ಹಾಕಿಕೊಂಡು ಅನಿರ್ದಿಷ್ಟಾವಧಿ ಮುಷ್ಕರ ಪ್ರಾರಂಭಿಸಿದ್ದಾರೆ.
ಹಲವು ವರ್ಷಗಳಿಂದ ಕಸದ ಗಾಡಿ ಚಾಲಕರು, ವಾಟರ್ ಮ್ಯಾನ್, ಡಾಟಾ ಎಂಟ್ರಿ ಅಪರೇಟರ್ ಗಳು, ಒಳಚರಂಡಿ ಕಾರ್ಮಿಕರು, ಸ್ಮಶಾಣ ಕಾವಲುಗಾರರು ಸೇರಿದಂತೆ, ನಾನಾ ವಿಭಾಗದಲ್ಲಿ ಪೌರ ಕಾರ್ಮಿಕರೊಟ್ಟಿಗೆ ದುಡಿಯುತ್ತಿದ್ದಾರೆ. ಆದರೆ ಪೌರಕಾರ್ಮಿಕನ್ನು ಖಾಯಂಗೋಳಿಸಿ, ಇತರನ್ನು ಹೊರಗುತ್ತಿಗೆ ನೌಕರರೆಂದು ಗುರುತಿಸಿ ಅನ್ಯಾಯ ಮಾಡಿದೆ ಎಂದು ಆರೋಪಿಸಿ ಸ್ವಚ್ಛತೆ ಕೆಲಸವನ್ನು ಸ್ಥಗಿತಗೊಳಿಸಿ ಸಂಘದ ಅಧ್ಯಕ್ಷ ಲೋಕೇಶ್ ಹಾಗೂ ಉಪಾಧ್ಯಕ್ಷ ಕೆ.ವೈ ಕೃಷ್ಣಮೂರ್ತಿ ಅವರ ನೇತೃತ್ವದಲ್ಲಿ ಕಚೇರಿ ಮುಂಭಾಗ ಮುಷ್ಕರ ಆರಂಭವಾಗಿದೆ.
ಸಂಘದ ಅಧ್ಯಕ್ಷ ಲೋಕೇಶ್ ಮಾತನಾಡಿ, 2017ರಲ್ಲಿ ಅಂದಿನ ಸರ್ಕಾರ ಪೌರಕಾರ್ಮಿಕರನ್ನು ಖಾಯಂಗೊಳಿಸಲು ನಿರ್ಧರಿಸಿದೆ. 30 ವರ್ಷಗಳಿಂದ ಪೌರಕಾರ್ಮಿಕರ ಜೊತೆ ಕೆಲಸ ಮಾಡುತ್ತಿರುವ ಕಸದ ಗಾಡಿ ಚಾಲಕರು, ಸ್ಮಶಾಣ ಕಾವಲುಗಾರರು ಹಾಗೂ ಕಚೇರಿ ಡಾಟಾ ಎಂಟ್ರಿ ನೌಕರರು ನೀರಗಂಟಿಗಳನ್ನು ಖಾಯಂ ಮಾಡದೇ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದರು. ಇದರಿಂದ ನಮಗೆ ಸಾಕಷ್ಟು ತೊಂದರೆಯಾಗುತ್ತಿದ್ದು, ತಕ್ಷಣ ನಮ್ಮನು ಖಾಯಂಗೊಳಿಸಿ ನೇರ ವೇತನ ನೀಡಬೇಕೆಂದು ಒತ್ತಾಯಿಸಿದರು.
ಮುಷ್ಕರದಲ್ಲಿ ನೌಕರರಾದ ಕಲ್ಲೇಶ್, ಜಗದೀಶ್, ನಾಗರಾಜು, ಜಯರಾಮಯ್ಯ, ನಾರಾಯಣ್, ಸಾಗರ್,ಶಾಂತ, ಗೌರಮ್ಮ, ಕೊಟ್ರಮ್ಮ, ರತ್ನಮ್ಮ, ಶ್ರೀಕೃಷ್ಣ, ಶಿವರಾಜು ಇನ್ನಿತರರು ಭಾಗವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dinner Meeting: ಸಭೆ ಮಾಡಬೇಡಿ ಎನ್ನಲು ಇವರೇನು ಪರಿಶಿಷ್ಟ ಸಮುದಾಯದ ವಿರೋಧಿಗಳಾ?: ಸಚಿವ
Tumakuru: ಬಾಲ ಹಿಡಿದು ಚಿರತೆ ಸೆರೆ ಹಿಡಿದ ಯುವಕ; ಅರಣ್ಯ ಸಿಬ್ಬಂದಿ ಶಾಕ್!
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
Koratagere; ಲಾರಿ- ಕಾರಿನ ನಡುವೆ ಭೀಕರ ಅಪಘಾ*ತ: ಯುವಕರಿಬ್ಬರ ಸಾ*ವು
ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ವಾಹನ ಪಲ್ಟಿಯಾದ ಪ್ರಕರಣ: ಇಬ್ಬರು ಶಿಕ್ಷಕರು ಅಮಾನತು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.