ಮೊದಲ ಟೆಸ್ಟ್ ಪಂದ್ಯಕ್ಕೆ ಬ್ರಾಡ್ ಅನುಮಾನ
Team Udayavani, Jul 7, 2020, 5:45 AM IST
ಸೌತಾಂಪ್ಟನ್: ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ಬುಧ ವಾರದಿಂದ ಇಲ್ಲಿ ಆರಂಭವಾಗ ಲಿರುವ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡಿನ ಪೇಸ್ ಬೌಲರ್ ಸ್ಟುವರ್ಟ್ ಬ್ರಾಡ್ ಆಡುವ ಸಂಭವ ಕಡಿಮೆ.
ಜೇಮ್ಸ್ ಆ್ಯಂಡರ್ಸನ್ ಅವರೊಂದಿಗೆ ಆರ್ಚರ್ ಮತ್ತು ಮಾರ್ಕ್ ವುಡ್ ಇಂಗ್ಲೆಂಡಿನ ಪ್ರಮುಖ ವೇಗಿಗಳಾಗಿ ದಾಳಿಗಿಳಿಯುವ ಸಾಧ್ಯತೆ ಇದೆ ಎಂಬುದಾಗಿ “ಗಾರ್ಡಿಯನ್’ ವರದಿ ಮಾಡಿದೆ.
“ಸ್ಟುವರ್ಟ್ ಬ್ರಾಡ್ 8 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ತವರಿನ ಪ್ರಥಮ ಟೆಸ್ಟ್ ಪಂದ್ಯವನ್ನು ತಪ್ಪಿಸಿಕೊಳ್ಳುವ ಸಾಧ್ಯತೆ ಇದೆ. ಆರ್ಚರ್-ವುಡ್ ಜೋಡಿಯನ್ನು ದಾಳಿಗಿಳಿಸಲು ಇಂಗ್ಲೆಂಡ್ ಗಂಭೀರ ಚಿಂತನೆ ನಡೆಸುತ್ತಿದೆ. ಇದಕ್ಕೆ ಆವರ್ತನ ಪದ್ಧತಿ ಕಾರಣ’ ಎಂದು ವರದಿ ತಿಳಿಸಿದೆ.
2012ರ ಬಳಿಕ…
ಸ್ಟುವರ್ಟ್ ಬ್ರಾಡ್ ತವರಿನ ಸರಣಿಯ ಮೊದಲ ಪಂದ್ಯದಿಂದ ಹೊರಗುಳಿದದ್ದು 2012ರಷ್ಟು ಹಿಂದೆ. ಆ ಪಂದ್ಯವೂ ವಿಂಡೀಸ್ ವಿರುದ್ಧವೇ ನಡೆದಿತ್ತು.
138 ಟೆಸ್ಟ್ ಪಂದ್ಯಗಳ ಅನುಭವಿ ಸ್ಟುವರ್ಟ್ ಬ್ರಾಡ್ 485 ವಿಕೆಟ್ ಹಾರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.