Madikeri ಅರಣ್ಯ ಇಲಾಖೆ ವಾಹನದಲ್ಲಿ ವಿದ್ಯಾರ್ಥಿಗಳು ಮನೆಗೆ….
ಅರೆಕಾಡು ಶಾಲೆ ಸಮೀಪ ಕಾಣಿಸಿಕೊಂಡ ಕಾಡಾನೆ
Team Udayavani, Jun 9, 2024, 10:56 PM IST
ಮಡಿಕೇರಿ: ನಿರೀಕ್ಷೆಯಂತೆ ಕೊಡಗು ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದ್ದು, ವಿದ್ಯಾರ್ಥಿಗಳಿಗೆ ಆತಂಕ ಎದುರಾಗಿದೆ.
ಮಡಿಕೇರಿ ತಾಲೂಕಿನ ಅರೆಕಾಡು ಶಾಲೆಯ ಸಮೀಪ ಶನಿವಾರ ಕಾಡಾನೆ ಗಳು ಕಾಣಿಸಿಕೊಂಡು ಅಪಾಯದ ಮುನ್ಸೂಚನೆ ಕಂಡು ಬಂದಿತ್ತು.
ತತ್‌ಕ್ಷಣ ಎಚ್ಚೆತ್ತುಕೊಂಡ ಸ್ಥಳೀಯರು ಅರಣ್ಯ ಇಲಾಖೆಗೆ ದೂರು ನೀಡಿದರು. ಸ್ಥಳಕ್ಕೆ ಬಂದ ಅರಣ್ಯ ಸಿಬಂದಿ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ನಡೆಸಿದರು. ಅನಂತರ ಮುಂಜಾಗ್ರತಾ ಕ್ರಮವಾಗಿ ಇಲಾಖೆಯ ವಾಹನದಲ್ಲಿ ವಿದ್ಯಾರ್ಥಿಗಳನ್ನು ಮನೆ ಮನೆಗಳಿಗೆ ತಲುಪಿಸಿದರು.
ಸಕಾಲದಲ್ಲಿ ಕಾರ್ಯೋನ್ಮುಖರಾಗಿ ವಿದ್ಯಾರ್ಥಿಗಳ ಬಗ್ಗೆ ಕಾಳಜಿ ತೋರಿದ ಅರಣ್ಯ ಇಲಾಖೆಯ ಸಿಬಂದಿಯ ಕಾರ್ಯವನ್ನು ಸ್ಥಳೀಯ ಗ್ರಾಮಸ್ಥರು ಶ್ಲಾ ಸಿದ್ದಾರೆ.
ಕಾರಿನ ಮೇಲೆ ಕಾಡಾನೆ ದಾಳಿ
ಮಡಿಕೇರಿ: ಕಾಡಾನೆ ದಾಳಿಯಿಂದ ಕಾರೊಂದು ಜಖಂಗೊಂಡಿರುವ ಘಟನೆ ಸುಂಟಿಕೊಪ್ಪ ಸಮೀಪ ಏಳನೇ ಹೊಸಕೋಟೆಯ ಹೆದ್ದಾರಿಯಲ್ಲಿ ಸಂಭವಿಸಿದೆ.
ಕಾಫಿ ತೋಟದೊಳಗಿನಿಂದ ಹೆದ್ದಾರಿಗೆ ದಿಢೀರ್ ಆಗಿ ಬಂದ ಕಾಡಾನೆ ಏಕಾಏಕಿ ಕಾರಿನ ಮೇಲೆ ದಾಳಿ ಮಾಡಿ ಓಡಿಹೋಯಿತು. ಅದರ ಬೆನ್ನಲ್ಲೇ ಮತ್ತೂಂದು ಕಾಡಾನೆ ಕಾಣಿಸಿಕೊಂಡು ಆತಂಕ ಸೃಷ್ಟಿಸಿತು. ಕಾರು ಸವಾರರು ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾದರು.
ನಿರಂತರವಾಗಿ ಸುಂಟಿಕೊಪ್ಪ- ಕುಶಾಲನಗರ ಭಾಗದ ಹೆದ್ದಾರಿಯಲ್ಲಿ ಕಾಡಾನೆಗಳು ಕಾಣಿಸಿಕೊಳ್ಳುತ್ತಿದ್ದು, ವಾಹನ ಸವಾರರು ನಿತ್ಯ ಆತಂಕ ಎದುರಿಸುತ್ತಿದ್ದಾರೆ. ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ವೀರಮಂಗಲ:
ಕಾಡಾನೆ ಹಾವಳಿ
ಪುತ್ತೂರು: ಕಳೆದೊಂದು ವಾರದಿಂದ ಪೆರ್ಲಂಪಾಡಿ, ಪಾಲ್ತಾಡಿ, ಸವಣೂರು ಪರಿಸರದಲ್ಲಿ ಆತಂಕ ಸೃಷ್ಟಿಸಿದ್ದ ಕಾಡಾನೆ ಇದೀಗ ವೀರಮಂಗಲದ ಕಾಯರ್ ಮುಗೇರು, ಪಲ್ಲತ್ತೋಡಿ, ಖಂಡಿಗೆ ಪರಿಸರದಲ್ಲಿ ಕೃಷಿ ತೋಟಗಳಲ್ಲಿ ಬಾಳೆಗಿಡ, ಅಡಿಕೆ ಮರಗಳಿಗೆ ಹಾನಿ ಉಂಟು ಮಾಡುತ್ತಿದೆ. ರವಿವಾರ ರಾತ್ರಿಯೇಆನೆಯನ್ನು ಕಾಡಿಗೆ ಅಟ್ಟುವ ಕಾರ್ಯಾ ಚರಣೆ ನಡೆಯಲಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BBK11: ಕ್ಯಾಪ್ಟನ್ ಹನುಮಂತುಗೆ ನಿಯತ್ತಿನ ಪ್ರಶ್ನೆ ಹಾಕಿ, ರೇಗಾಡಿದ ಚೈತ್ರಾ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.