ಕೊರಟಗೆರೆ: ಸರಕು ವಾಹನದಲ್ಲಿ ಪ್ರಾಣಿಗಳಂತೆ ಪರೀಕ್ಷೆಗೆ ಹೋಗುವ ವಿದ್ಯಾರ್ಥಿಗಳು!
Team Udayavani, Mar 13, 2022, 5:07 PM IST
ಕೊರಟಗೆರೆ: ಸರ್ಕಾರ ನೀಡುವ ಹಣವನ್ನು ದುರುಪಯೋಗ ಮಾಡಿಕೊಳ್ಳಲು ಪರೀಕ್ಷೆಗೆ ಹೋಗುವ 72 ಶಾಲಾ ಮಕ್ಕಳನ್ನು ಚಿಕ್ಕ ಸರಕು ವಾಹನಗಳಲ್ಲಿ ಪ್ರಾಣಿಗಳನ್ನು ತುಂಬುವ ಹಾಗೆ ತುಂಬಿ 16 ಕಿ.ಮೀ ಸಾಗಿಸಿರುವ ಘಟನೆ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದಿದೆ.
ತಾಲ್ಲೂಕಿನ ಹೊಳವನಹಳ್ಳಿ ಹೋಬಳಿಯ ಬೈಚಾಪುರ ಬಳಿ ಇರುವ ಮುರಾರ್ಜಿ ದೇಸಾಯಿ ವಸತಿ ಶಾಲೆಯ 72 ಪಿ.ಯು.ಸಿ ವಿದ್ಯಾರ್ಥಿಗಳು ಪ್ರಯೋಗಿಕ ಪರೀಕ್ಷೆ ಬರೆಯಲು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಬರಬೇಕಿತ್ತು, ಅವರನ್ನು ಜವಾಬ್ದಾರಿಯಿಂದ ಪ್ರಾಯಾಣಿಕ ವಾಹನದಲ್ಲಿ ಕಳುಹಿಸಬೇಕಾಗಿರುವುದು ವಸತಿ ಕಾಲೇಜಿನ ಪ್ರಾಂಶುಪಾಲರ ಜವಾಬ್ದಾರಿಯಾಗಿದೆ. ಇದಕ್ಕಾಗಿ ಸರ್ಕಾರ ಸಾಕಷ್ಟು ಅನುದಾನ ನೀಡುತ್ತದೆ, ಆದರೆ ಕೆಲವು ದಿನಗಳ ಹಿಂದೆ ವಸತಿ ಕಾಲೇಜಿನವರು ಹಣ ಉಳಿಸುವ ದೆಸೆಯಿಂದ ಕಾಲೇಜಿನ 37 ಹೆಣ್ಣು ಮಕ್ಕಳು ಹಾಗೂ 35 ಗಂಡು ಮಕ್ಕಳನ್ನು ಬೈಚಾಪುರದ ಮುರಾರ್ಜಿ ದೇಸಾಯಿ ವಸತಿ ಶಾಲೆಯಿಂದ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವರೆಗೆ 16 ಕಿ.ಮಿ. ನಷ್ಟು ದೂರವನ್ನು ಚಿಕ್ಕ ಸರಕು ವಾಹನದಲ್ಲಿ ಪ್ರಾಣಿಗಳಂತೆ ತುಂಬಿ ನಿಲ್ಲಿಸಿಕೊಂಡು ಬಂದು ಇಳಿಸಿರುತ್ತಾರೆ. ಆ ಮಕ್ಕಳು ದಿನವಿಡೀ ನಿಂತುಕೊಂಡು ಅಂದು ಭೌತ ಶಾಸ್ತ್ರ ರಸಾಯನಶಾಸ್ತ್ರ, ಜೀವಶಾಸ್ತ್ರದ ಪ್ರಯೋಗಾಲಯದಪರೀಕ್ಷೆಯಲ್ಲಿ ಭಾಗಿಯಾಗಿ ಮತ್ತೆ ಕುರಿಗಳ ಹಾಗೆ ನಿಂತು ಕೊಂಡು ಹೋಗಬೇಕು, ಇದನ್ನು ಬೆಳಿಗ್ಗೆ ಗಮನಿಸಿ ಸಂಜೆಯವರೆಗು ಕಾಯ್ದು ಪತ್ರಿಕೆಯವರು ಪ್ರಶ್ನಿಸಿದಾಗ ಆಗ ಪ್ರಾಂಶುಪಾಲರು ಬಸ್ಸಿನಲ್ಲಿ ಕರೆದುಕೊಂಡು ಬರುವಂತೆ ವಿದ್ಯಾರ್ಥಿನಿಯರೊಂದಿಗೆ ಬಂದಿರುವ ಶಿಕ್ಷಕಿಗೆ ದೂರವಾಣಿ ಕರೆ ಮಾಡುತ್ತಾರೆ.
ಈಗಾಗಲೇ ಅಂತಿಮ ಹಂತದ ಪರೀಕ್ಷೆ ಬರೆಯಲು ಸಜ್ಜಾಗಿರುವ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಈ ಸರಕು ತುಂಬಿರುವ ಚಿಕ್ಕವಾಹನಗಳಲ್ಲಿ ತಕ್ಷಣ ಬ್ರೇಕ್ ಹೊಡೆದರೆ, ಇಲ್ಲ ಆಯ ತಪ್ಪಿ ಉರುಳಿದರೆ ಆ ಮಕ್ಕಳ ಗತಿ ಮತ್ತು ಭವಿಷ್ಯವೇನು ? ಅವರಿಗೆ ಕಾನೂನು ರಕ್ಷಣೆ ಹೇಗೆ ಎನ್ನುವ ಪರಿಜ್ಞಾನವೂ ಪ್ರಾಂಶುಪಾಲರಿಗೆ ಇಲ್ಲವೇ ಎನ್ನುವಂತಾಗಿದೆ. ಈ ಘಟನೆ ಬಗ್ಗೆ ವಸತಿ ಶಾಲೆಯ ಪ್ರಾಂಶುಪಾಲರು ಇದರಿಂದ ತಪ್ಪಿಸಿಕೊಳ್ಳಲು ಕುಂಟು ನೆಪ ಹೇಳುತ್ತಿದ್ದಾರೆ.
ತಾಲ್ಲೂಕಿನ ಬಹುತೇಕ ವಸತಿ ಶಾಲೆಗಳು ಪಟ್ಟಣ ಮತ್ತು ಗ್ರಾಮಗಳ ಹೊರಬಾದಲ್ಲಿದೆ. ಅವರುಗಳಿಗಿಲ್ಲದ ಅವ್ಯವಸ್ಥೆ ಈ ಕಾಲೇಜಿನ ಪ್ರಾಂಶುಪಾಲರಿಗೆ ಬಂದಂತಾಗಿದೆ. ಸರ್ಕಾರವು ವಸತಿ ಶಾಲೆಗಳ ವಿದ್ಯಾಭ್ಯಾಸಕ್ಕೆ, ವಿದ್ಯಾರ್ಥಿಗಳ ಆರೋಗ್ಯ ಮತ್ತು ರಕ್ಷಣೆಗೆ ಸಾಕಷ್ಟು ಹಣವನ್ನು ನೀಡುತ್ತಿದೆ. ಆದರೆ ಬೈಚಾಪುರದ ಮುರಾರ್ಜಿ ದೇಸಾಯಿ ವಸತಿಶಾಲೆಯ ಪ್ರಾಂಶುಪಾಲರಂಥಹ ವ್ಯಕ್ತಿಗಳು ಅದರಲ್ಲಿ ಬರುವ ಹಣವನ್ನು ಈ ತರಹದ ದುರುಪಯೋಗ ಮಾಡಿಕೊಳ್ಳುತ್ತಾರೆ. ಒಂದುವೇಳೆ ಇಂತಹ ಪರಿಸ್ಥಿತಿಗಳಲ್ಲಿ ಅಪಘಾತ ಮತ್ತು ಅವಗಡಗಳಾದರೆ ಮಕ್ಕಳ ಭವಿಷ್ಯಕ್ಕೆ ಜವಾಬ್ದಾರಿ ಯಾರು ಎನ್ನುವುದು ಪ್ರಶ್ನೆಯಾಗಿದೆ. ಕ್ಷೇತ್ರದ ಶಾಸಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಈ ಘಟನೆ ಬಗ್ಗೆ ಪರಿಶೀಲಿಸಿ ತನಿಖೆ ನಡೆಸಿ ಸಂಬಂಧಪಟ್ಟವರ ವಿರುದ್ದ ಶಿಸ್ತುಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಮತ್ತೊಂದು ಕಾಲೇಜಿನ ಪ್ರಾಂಶುಪಾಲರು ಈ ರಿತಿಯ ಬೇಜವಾಬ್ದಾರಿ ಕರ್ತವ್ಯ ಲೋಪವನ್ನು ಮಾಡುತ್ತಾರೆ.
ಶಾಲಾ ಮತ್ತು ಕಾಲೇಜಿನ ವಿದ್ಯಾರ್ಥಿಗಳನ್ನು ಸರಕು ವಾಹನದಲ್ಲಿ ತುಂಬಿಕೊಂಡು ಬರುವುದು ತಪ್ಪು. ಈ ಘಟನೆಯನ್ನು ಪರಿಶೀಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶಿಸುತ್ತೇನೆ. – ಡಾ.ಜಿ. ಪರಮೇಶ್ವರ, ಶಾಸಕ
ಎಂಡಿಆರ್‌ಎಸ್ ಬೈಚಾಪುರ ಕಾಲೇಜಿನ ೩೭ ವಿದ್ಯಾರ್ಥಿನಿಯರನ್ನು ಚಿಕ್ಕ ಸರಕು ವಾಹನದಲ್ಲಿ ೧೬ ಕಿ.ಮೀ ಪ್ರಯಾಣಮಾಡಿಸಿರುವುದು ನನ್ನ ಗಮನಕ್ಕೆ ಬಂದಿದ್ದು, ವಿದ್ಯಾರ್ಥಿನಿಯರ ಸುರಕ್ಷತೆಯಿಂದ ತಪ್ಪಾಗಿದ್ದು ಈ ಸಂಬಂಧ ಸದರಿ ವಸತಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ ಮಾಡುತ್ತೇನೆ.– ನಾಹಿದಾ ಜಮ್ ಜಮ್, ತಹಶೀಲ್ದಾರ್
ಈ ಸಂಬಂಧ ಪ್ರಾಂಶುಪಾಲರಿಗೆ ಕಾರಣ ಕೇಳಿ ನೋಟೀಸ್ ನೀಡಲಾಗುವುದು. ಜಿಲ್ಲೆಯ ಎಲ್ಲಾ ವಸತಿ ಶಾಲೆಯ ಪ್ರಾಂಶುಪಾಲರಿಗೆ ಇನ್ನು ಮುಂದೆ ಈರೀತಿ ನಡೆದಲ್ಲಿ ಕಾನೂನು ಕ್ರಮ ಕೈಗೊಳ್ಳುತ್ತೇನೆ. – ಪ್ರೇಮಾ ಟಿ.ಎಲ್. ಜಂಟಿ ನಿರ್ದೇಶಕಿ, ಸಮಾಜ ಕಲ್ಯಾಣ ಇಲಾಖೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Koratagere: ಗೃಹ ಸಚಿವರ ಸ್ವ ಕ್ಷೇತ್ರದಲ್ಲೇ ಮಲ ಹೊತ್ತ 10 ವರ್ಷದ ಬಾಲಕ!
Kunigal: ಬೈಕ್, ಕ್ಯಾಂಟರ್ ಮುಖಾಮುಖಿ ಢಿಕ್ಕಿ; ಇಬ್ಬರು ಸ್ಥಳದಲ್ಲೇ ಮೃತ್ಯು
Gubbi: ಮೀಟರ್ ಬಡ್ಡಿ ದಂಧೆಕೋರರ ಕಿರುಕುಳಕ್ಕೆ ಬೇಸತ್ತು ಪೌರ ಕಾರ್ಮಿಕ ಆತ್ಮಹತ್ಯೆ
Koratagere: ವೃದ್ದೆ ಮೇಲೆ ಕೆಎಸ್ಆರ್ಟಿಸಿ ಬಸ್ ಹರಿದು ಸಾವು
Hunasur: ವರದಕ್ಷಿಣೆ ಕಿರುಕುಳಕ್ಕೆ ಬಲಿಯಾದ ತಿಪಟೂರಿನ ಮಹಿಳೆ!
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.