ಉಪ ನೋಂದಣಿ ಕಚೇರಿ ಅವಸ್ಥೆ: ಸರಿಪಡಿಸುವ ಭರವಸೆ
Team Udayavani, Feb 17, 2021, 4:30 AM IST
ಕುಂದಾಪುರ: ಇಲ್ಲಿನ ಉಪನೋಂದಣಿ ಕಚೇರಿಯಲ್ಲಿ ಉಪ ನೋಂದಣಿ ಅಧಿಕಾರಿ ಇಲ್ಲದಿರು ವುದು, ಸರ್ವರ್ ದೋಷ, ಇತರ ತಾಂತ್ರಿಕ ದೋಷಗಳ ಕುರಿತು ಪತ್ರಿಕೆಯಲ್ಲಿ ಪ್ರಕಟವಾದ ವರದಿಗೆ ಶೀಘ್ರ ಸ್ಪಂದಿಸುವ ಭರವಸೆ ಜನಪ್ರತಿನಿಧಿಗಳಿಂದ ದೊರೆತಿದೆ.
ಉಪನೋಂದಣಾಧಿಕಾರಿಗಳ ಕಚೇರಿಯ ಅವ್ಯವಸ್ಥೆ ಕುರಿತು “ಉದಯವಾಣಿ’ “ಸುದಿನ’ ಫೆ.16ರಂದು ಪ್ರಕಟಿಸಿದ ವಾಸ್ತವ ವರದಿ “ನೋಂದಣಾಧಿಕಾರಿಯೂ ಪ್ರಭಾರ, ಜನರಿಗೆ ತಲೆಭಾರ’ ವರದಿಗೆ ಸಾರ್ವಜನಿಕರಿಂದಲೂ ವ್ಯಾಪಕ ಸ್ಪಂದನ ವ್ಯಕ್ತವಾಗಿದೆ.
ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು, ಪರಿಶೀಲಿಸುವುದಾಗಿ ತಿಳಿಸಿದ್ದಾರೆ. ಬೈಂದೂರು ಶಾಸಕ ಬಿ.ಎಂ.
ಸುಕುಮಾರಶೆಟ್ಟಿ ಅವರು, ಸಂಬಂಧಪಟ್ಟವರ ಗಮನಕ್ಕೆ ತರುವುದಾಗಿ ಹೇಳಿದ್ದಾರೆ. ಜಿಲ್ಲಾಧಿಕಾರಿ ಜಿ. ಜಗದೀಶ್ ಸಹ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳೊಂದಿಗೆ ಸಮಸ್ಯೆಯನ್ನು ಪ್ರಸ್ತಾವಿಸುವುದಾಗಿ ತಿಳಿಸಿದ್ದಾರೆ.
ಅಗತ್ಯ ಕ್ರಮ ಕೈಗೊಳ್ಳುವೆ
ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು, “ಸುದಿನ’ ವರದಿ ಗಮನಿಸಿದೆ. ಕುಂದಾಪುರದ ಉಪ ನೋಂದಣಾಧಿಕಾರಿ ವರ್ಗವಾದುದು ಗಮನಕ್ಕೆ ಬಂದಿರಲಿಲ್ಲ. ಈ ಕುರಿತು ಪರಿಶೀಲಿಸಲಾಗುವುದು ಎಂದು ತಿಳಿಸಿದ್ದಾರೆ.
ಬೈಂದೂರು ಶಾಸಕ ಬಿ.ಎಂ. ಸುಕುಮಾರ್‌ಶೆಟ್ಟಿ ಅವರು, ಬೈಂದೂರು ವಿಧಾನಸಭಾ ಕ್ಷೇತ್ರದ ಗ್ರಾಮಗಳಿಗೆ ಬೈಂದೂರು, ಕುಂದಾಪುರ ಹಾಗೂ ಶಂಕರನಾರಾಯಣ ಉಪನೋಂದಣಿ ಕಚೇರಿ ವ್ಯಾಪ್ತಿಗಳಿವೆ. ಶಂಕರನಾರಾಯಣ ಉಪನೋಂದಣಿ ಕಚೇರಿಗೆ ನೂರು ವರ್ಷಗಳಾಗಿದ್ದು ಕಂದಾಯ ಸಚಿವ ಆರ್. ಅಶೋಕ್ ಅವರಿಗೆ ಮನವಿ ಮಾಡಿದ್ದೆ. ಅವರ ಸೂಚನೆಯಂತೆ ಮುಖ್ಯಮಂತ್ರಿಗಳಿಗೂ ಮನವಿ ಮಾಡಿ ಕಟ್ಟಡ ಮಂಜೂರಿಗೆ ಪ್ರಯತ್ನಿಸಿದ್ದೇನೆ. ಕುಂದಾಪುರದ ಸಮಸ್ಯೆಯೂ ಗಮನಕ್ಕೆ ಬಂದಿದ್ದು ಸಂಬಂಧಪಟ್ಟವರ ಗಮನಕ್ಕೆ ತರುತ್ತೇನೆ ಎಂದಿದ್ದಾರೆ.
ಜಿಲ್ಲಾಧಿಕಾರಿ ಜಿ. ಜಗದೀಶ್: “ಉದಯವಾಣಿ” “ಸುದಿನ’ ವರದಿಯನ್ನು ಓದಿದ್ದೇನೆ. ರಾಜ್ಯಾದ್ಯಂತ ಉಪನೋಂದಣಾಧಿಕಾರಿಗಳ ಹುದ್ದೆ ಖಾಲಿ ಇವೆ. ಈ ವರದಿ ಕುರಿತು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಹಾಗೂ ಸ್ಟಾಂಪ್ಸ್ ಆಂಡ್ ರಿಜಿಸ್ಟ್ರೇಶನ್ ಇಲಾಖೆ ಮುಖ್ಯಸ್ಥರ ಬಳಿ ಮಾತನಾಡುವೆ ಎಂದು ಪ್ರತಿಕ್ರಿಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Belagavi: ಮಹಿಳೆಯರ ಸಬಲರಾಗಿಸುವ ಗೃಹಲಕ್ಷ್ಮಿ ಯೋಜನೆ ನಿಲ್ಲಿಸುವ ಮಾತೇ ಇಲ್ಲ: ಸಿದ್ದರಾಮಯ್ಯ
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.