Dwarka: ಸಮುದ್ರದಡಿಯ ದ್ವಾರಕಾ ನಗರಿ ವೀಕ್ಷಣೆಗೆ ಸಬ್ಮರೀನ್ ಸೇವೆ?
ಮುಂದಿನ ಶ್ರೀಕೃಷ್ಣ ಜನ್ಮಾಷ್ಟಮಿಯಂದು ಆರಂಭ ಸಾಧ್ಯತೆ
Team Udayavani, Dec 27, 2023, 11:58 PM IST
ಗಾಂಧಿನಗರ: ಸಾವಿರಾರು ವರ್ಷಗಳ ಹಿಂದೆ ಭಗವಂತ ಶ್ರೀಕೃಷ್ಣ ನೆಲೆಸಿದ್ದ ದ್ವಾರಕಾ ನಗರವು ಸಮುದ್ರದಲ್ಲಿ ಮುಳುಗಿ ಹೋಯಿತು ಎಂಬುದು ಐತಿಹ್ಯ. ಅಂದಿನ ಅರಮನೆ ಸೇರಿದಂತೆ ನಗರದ ಅವ ಶೇಷಗಳನ್ನು ಪ್ರವಾಸಿಗರು ಕಣ್ಣಾರೆ ಕಾಣುವಂತಾ ಗಲು ಗುಜರಾತ್ ಸರ್ಕಾರವು ಜಲಾಂತರ್ಗಾಮಿ ಪ್ರವಾಸೋದ್ಯಮ ಆರಂಭಿಸಲು ಮುಂದಾಗಿದೆ.
ದ್ವಾರಕಾ ಕರಾವಳಿಯ ಅರಬ್ಬಿ ಸಮುದ್ರದಲ್ಲಿ ಪ್ರವಾಸಿ ಜಲಾಂತರ್ಗಾಮಿ ಕಾರ್ಯಚರಣೆಗಾಗಿ ಗುಜರಾತ್ ಪ್ರವಾಸೋದ್ಯಮ ಇಲಾಖೆಯು ಖಾಸಗಿ ಕಂಪೆನಿಯೊಂದಿಗೆ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಿದೆ.
ಯಾವಾಗ ಆರಂಭ: ಮುಂದಿನ ವರ್ಷ ಶ್ರೀಕೃಷ್ಣ ಜನ್ಮಾಷ್ಟಮಿ ಅಥವಾ ದೀಪಾವಳಿ ಹಬ್ಬದಂದು ಜಲಾಂತರ್ಗಾಮಿ ಪ್ರವಾಸೋದ್ಯಮ ಆರಂಭವಾಗುವ ಸಾಧ್ಯತೆಯಿದೆ. ಗಾಂಧಿನಗರದಲ್ಲಿ ಜ.10 ರಂದು ನಡೆಯಲಿರುವ ವೈಬ್ರೆಂಟ್ ಗುಜರಾತ್ ಜಾಗತಿಕ ಸಮಾವೇಶದಲ್ಲಿ ಈ ಕುರಿತು ಅಧಿಕೃತವಾಗಿ ಘೋಷಣೆ ಹೊರಬೀಳಲಿದೆ.
ಒಮ್ಮೆಗೆ 24 ಪ್ರವಾಸಿಗರು: ಜಲಾಂತ ರ್ಗಾಮಿ ಯು ಒಮ್ಮೆಗೆ 30 ಜನರನ್ನು ಕೊಂಡೊಯ್ಯುವ ಸಾಮರ್ಥ್ಯ ಹೊಂದಿದೆ. ಈ ಪೈಕಿ 24 ಪ್ರವಾಸಿ ಗರು, ಇಬ್ಬರು ಪೈಲಟ್ಗಳು, ಇಬ್ಬರು ಮುಳುಗು ತಜ್ಞರು, ಒಬ್ಬ ತಂತ್ರಜ್ಞ ಹಾಗೂ ಒಬ್ಬ ಗೈಡ್ ಇರಲಿದ್ದಾರೆ.ನೇರವಾಗಿ ಸಮುದ್ರ ಕಾಣುವಂತೆ ಆಸನ ವ್ಯವಸ್ಥೆ ಇರಲಿದೆ. ಪ್ರತಿ ಪ್ರವಾಸಿಗರಿಗೆ ಆಕ್ಸಿಜನ್ ಮಾಸ್ಕ್, ಫೇಸ್ ಮಾಸ್ಕ್ ಮತ್ತು ಸ್ಕೂಬಾ ಸೂಟ್ ಅನ್ನು ಒದಹಿಸಲಾಗುತ್ತದೆ ಎಂದು ಸಂಬಂಧಪಟ್ಟ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Old cars ಬಿಕರಿಗೆ ಶೇ.18 ಜಿಎಸ್ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್ಟಿ ಸಭೆ ತೀರ್ಮಾನ
Maharashtra; ಫಡ್ನವೀಸ್ ಬಳಿ ಗೃಹ, ಶಿಂಧೆಗೆ ನಗರಾಭಿವೃದ್ಧಿ ಸೇರಿ 3 ಪ್ರಮುಖ ಖಾತೆ!
Mumbai; ಚುನಾವಣೆಗೆ ಏಕಾಂಗಿ ಸ್ಪರ್ಧೆ: ಉದ್ಧವ್ ಶಿವಸೇನೆ ಇಂಗಿತ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.