![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, May 14, 2024, 12:35 AM IST
ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದ ಕಟ್ಟಡವೊಂದರ ಮಹಡಿಯಲ್ಲಿ ಗಾಂಜಾ ಗಿಡ ಪತ್ತೆಯಾಗಿದೆ ಎನ್ನಲಾಗಿದ್ದು, ಅಲ್ಲಿಯದ್ದೇ ಎನ್ನಲಾದ ಗಾಂಜಾ ಗಿಡದ ಫೋಟೋ ವೈರಲ್ ಆಗಿದೆ.
ಆದಿ ಸುಬ್ರಹ್ಮಣ್ಯದ ಕಲ್ಯಾಣ ಮಂಟಪದ ಮೇಲ್ಛಾವಣಿಯಲ್ಲಿ ಗಾಂಜಾ ಗಿಡ ಪತ್ತೆಯಾಗಿದೆ ಎಂಬ ಸುದ್ದಿ ವೈರಲ್ ಆಗಿತ್ತು. ಅದಕ್ಕೆ ಪುಷ್ಟಿ ನೀಡುವಂತೆ ಕಟ್ಟಡದ ಮೇಲ್ಛಾವಣಿಯಲ್ಲಿ ಗಾಂಜಾ ಗಿಡ ಬೆಳೆಯ ಫೋಟೋ ವೈರಲ್ ಆಗಿತ್ತು. ಜತೆಗೆ ನೀರಿನ ಪೈಪ್ ಕೂಡ ಕಂಡುಬಂದಿತ್ತು.
ಅರಣ್ಯಾಧಿಕಾರಿಗಳನ್ನು ಸಂಪರ್ಕಿಸಿದ ವೇಳೆ, ಗಾಂಜಾ ಗಿಡ ಪತ್ತೆಯಾಗಿದೆ ಎಂಬ ಸುದ್ದಿ ವೆಬ್‌ಸೈಟ್ ನ್ಯೂಸ್‌ನಿಂದ ತಿಳಿದುಬಂದಿದೆ.
ಆದರೆ ಯಾವುದೇ ಅಧಿಕೃತ ದೂರು ನಮಗೆ ಬಂದಿಲ್ಲ. ಅಂತಹ ಪ್ರಕರಣವನ್ನು ಪೊಲೀಸರೇ ತನಿಖೆ ನಡೆಸುತ್ತಾರೆ ಎಂದು ತಿಳಿಸಿದ್ದಾರೆ. ವೆಬ್‌ಸೈಟ್‌ನಲ್ಲಿ ಪ್ರಕಟಗೊಂಡ ಸುದ್ದಿಯ ಹಿನ್ನೆಲೆಯಲ್ಲಿ ನಾವು ಆದಿ ಸುಬ್ರಹ್ಮಣ್ಯದ ಕಟ್ಟಡದ ಬಳಿಗೆ ತೆರಳಿ ಪರಿಶೀಲನೆ ನಡೆಸಿದ್ದೇವೆ. ಆದರೆ ಅಲ್ಲಿ ಯಾವುದೇ ಗಾಂಜಾ ಗಿಡ ಪತ್ತೆಯಾಗಿಲ್ಲ. ಇದೊಂದು ಸುಳ್ಳು ಸುದ್ದಿಯಾಗಿದೆ ಎಂದು ಕುಕ್ಕೆ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಡಾ| ನಿಂಗಯ್ಯ ಪ್ರತಿಕ್ರಿಯಿಸಿದ್ದಾರೆ.
You seem to have an Ad Blocker on.
To continue reading, please turn it off or whitelist Udayavani.