![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Aug 5, 2020, 8:08 PM IST
ಲುಧಿಯಾನಾ: ಕೋವಿಡ್ ಸಂಕಷ್ಟದಿಂದಾಗಿ ಸೋಂಕಿತರಿರುವ ಪ್ರದೇಶವನ್ನು ಸರಕಾರ ಲಾಕ್‌ಡೌನ್ ಮಾಡುವುದು ಸಮಾಜದ ಆರೋಗ್ಯದ ದೃಷ್ಟಿಯಿಂದ ಅತ್ಯಗತ್ಯ. ಆದರೆ ಲಾಕ್‌ಡೌನ್‌ನಲ್ಲಿನ ಖನ್ನತೆ, ಹಣಕಾಸಿನ ಸಂಕಷ್ಟ, ಇನ್ನಿತರ ಕಾರಣಗಳಿಗಾಗಿ ಕನಿಷ್ಠ 120 ಮಂದಿ ಲುಧಿಯಾನಾ ಪ್ರದೇಶ ವ್ಯಾಪ್ತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ನಗರ ಪೊಲೀಸರ ಅಂಕಿಅಂಶಗಳು ಶ್ರುತಪಡಿಸಿವೆ.
ಲಾಕ್‌ಡೌನ್ ಅವಧಿಯಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚಳಗೊಳ್ಳುತ್ತಿರುವ ಬಗ್ಗೆ ಪೊಲೀಸರಿಂದ ಮಾಹಿತಿ ನೀಡಿದ್ದು, ಅನೇಕ ಮಂದಿ ಖನ್ನತೆಯಿಂದ ಬಳಲುತ್ತಿದ್ದಾರೆ ಮತ್ತು ಲಾಕ್‌ಡೌನ್ ಹಲವರ ಜೀವನವನ್ನು ಸಂಕಷ್ಟಕ್ಕೀಡು ಮಾಡಿದೆ. ಅಂತೆಯೇ, ಕನಿಷ್ಠ ಹದಿನಾರು ಪ್ರಕರಣಗಳಲ್ಲಿ ಗೃಹ ಹಿಂಸೆ ಮತ್ತು ಮನೆಯಲ್ಲಿನ ಇತರ ಸಮಸ್ಯೆಗಳು ಕಾರಣವಾದರೆ, ಐದು ಪ್ರಕರಣಗಳಲ್ಲಿ ಆರ್ಥಿಕ ಸಮಸ್ಯೆ ಕಾರಣವಾಗಿದೆ ಮತ್ತು ಲಾಕ್ ಡೌನ್ ಸಮಯದಲ್ಲಿ ಐದು ವಿದ್ಯಾರ್ಥಿಗಳೂ ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದಾರೆ. 9ರಿಂದ 80ರ ವಯಸ್ಸಿನರು ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದಾಗಿ ತಿಳಿಸಿದ್ದಾರೆ.
ಕೋವಿಡ್ ಬಂದಾಗಿನಿಂದ ಎಲ್ಲೆಡೆ ಸಮಸ್ಯೆ ಹೆಚ್ಚಾಗಿದೆ. ಆತ್ಮಹತ್ಯೆಗೆ ನಿರ್ದಿಷ್ಟ ಕಾರಣಗಳನ್ನು ಹೆಸರಿಸಬಹುದಾದರೂ ಲಾಕ್‌ಡೌನ್ ಚಿಂತೆಯನ್ನು, ಸಂಕಷ್ಟವನ್ನು ಬಿಗಡಾಯಿಸುವಂತೆ ಮಾಡಿದ್ದು ಸುಳ್ಳಲ್ಲ.
ಪಡಿತರ ಸಮಸ್ಯೆ: ಆತ್ಮಹತ್ಯೆ
ಲುಧಿಯಾನಾದ ರಾಜೀವ್ ಗಾಂಧಿ ಕಾಲನಿಯಲ್ಲಿ ವಾಸಿಸುತ್ತಿದ್ದ ಅಜಿತ್‌ಕುಮಾರ್ ಎಂಬಾತ ಲಾಕ್ ಡೌನ್ ಸಮಯದಲ್ಲಿ ಪಡಿತರವನ್ನು ಪಡೆಯಲು ಸಾಧ್ಯವಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಾನಾ ಕೆಲಸವಿಲ್ಲದೆ ಮನೆಯಲ್ಲೇ ಇದ್ದದ್ದು, ಪತ್ನಿ ಕೆಲಸ ಮಾಡುತ್ತಿದ್ದ ಕಾರ್ಖಾನೆ ಲಾಕ್‌ಡೌನ್‌ನಿಂದಾಗಿ ಸ್ಥಗಿತಗೊಂಡಿದ್ದು ದಿನನಿತ್ಯದ ರೇಷನ್‌ಗೂ ಪರದಾಡುವಂತೆ ಮಾಡಿತ್ತು. ಇದರಿಂದ ಮನನೊಂದ ಅವರು ಮೇ 9ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು.
ಭವಿಷ್ಯದ ಚಿಂತೆ
ಸಾಹೀಲ್ ಅರೋರಾ ಎಂಬ 22ರ ಯುವಕ ಬ್ಯಾಡ್ಡೋವಲ್‌ನ ಪಂಜಾಬ್ ತಾಂತ್ರಿಕ ಶಿಕ್ಷಣ ಮಹಾವಿದ್ಯಾಲಯದಲ್ಲಿ (ಪಿಸಿಟಿಇ) ಫಾರ್ಮಸಿಯಲ್ಲಿ ಪದವಿ ಪಡೆದ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದ. ಅಂತಿಮ ಪರೀಕ್ಷೆಗಳು ಮುಗಿದು ಉದ್ಯೋಗ ಪಡೆಯುವ ನಿರೀಕ್ಷೆಯಲ್ಲಿದ್ದರು. ಕೋವಿಡ್ ಎಲ್ಲ ಆಸೆಗೂ ತಿಲಾಂಜಲಿ ಇಟ್ಟಿತ್ತು. ಉದ್ಯೋಗ ಮತ್ತು ಅನಿಶ್ಚಿತ ಭವಿಷ್ಯದ ಬಗ್ಗೆ ಯೋಚಿಸುತ್ತಾ ಖನ್ನತೆಗೆ ಒಳಗಾದ ಅವರು ಮೇ 9ರಂದು ಅಬ್ದುಲ್ಲಾಪುರ ಬಸ್ತಿಯಲ್ಲಿದ್ದ ನಿವಾಸದಲ್ಲಿ ಆತ್ಮಹತಯೆ ಮಾಡಿಕೊಂಡಿದ್ದರು.
ವೀಡಿಯೋ ಕರೆಯಲ್ಲಿ ಮಾತಾಡುವಾಗಲೇ ಆತ್ಮಹತ್ಯೆ
ಮೇ 14ರಂದು ಖಾಸಗಿ ಶಾಲೆಯ ಉದ್ಯೋಗಿಯೊಬ್ಬರು ಪತ್ನಿಯೊಂದಿಗೆ ವೀಡಿಯೋ ಕರೆಯಲ್ಲಿ ಮಾತನಾಡುತ್ತಿ¨ªಾಗ ಆತ್ಮಹತ್ಯೆ ಮಾಡಿಕೊಂಡರು. ಹೌಸಿಂಗ್ ಬೋರ್ಡ್ ಕಾಲೋನಿ ನಿವಾಸಿ ಸಂತ್ರಸ್ತೆ ಖಾಸಗಿ ಶಾಲೆಯೊಂದರಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದಳು. ಅವರು ಯಾರೊ ಒಬ್ಬರಿಂದ 2 ಲಕ್ಷ ರೂ.ಗಳನ್ನು ಸಾಲ ಪಡೆದಿದ್ದರು. ಆದರೆ ಸಮಯಕ್ಕೆ ಅದನ್ನು ಹಿಂದಿರುಗಿಸಲು ವಿಫಲರಾಗಿ ಖನ್ನತೆಗೆ ಒಳಗಾಗಿದ್ದ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೊಬೈಲ್‌ನಲ್ಲಿ ಅಣ್ಣನ ಆಟ; ತಂಗಿಯ ಆತ್ಮಹತ್ಯೆ
ಅಣ್ಣ ಮೊಬೈಲ್‌ನಲ್ಲಿ ವಿಪರೀತ ಆಟವಾಡುತ್ತಾನೆ. ತನ್ನೊಂದಿಗೆ ಯಾರೂ ಇಲ್ಲವೆಂದು 9 ವರ್ಷದ ಬಾಲಕಿ ಮೇ 16 ರಂದು ಧಂಧಾನ್ ಎನ್‌ಕ್ಲೇವ್‌ಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಸಾಲ ಮರು ಪಾವತಿ ಸಂಕಷ್ಟ
ಟ್ರಾವೆಲ್ ಏಜೆಂಟ್ ಆಗಿ ಹರ್ಜಿತ್ ಸಿಂಗ್ ಉತ್ತಮ ಆದಾಯ ಗಳಿಸುತ್ತಿದ್ದರು. 42 ವರ್ಷದ ಅವರ ಜೀವನ ಖುಷಿಯಿಂದ ಕೂಡಿತ್ತು. ಈ ಸಂದರ್ಭ ಮಕ್ಕಳನ್ನು ವಿದೇಶಕ್ಕೆ ಕಳುಹಿಸಲು ಹೆಚ್ಚು ಹಣದ ಅಗತ್ಯವಿದ್ದುದರಿಂದ ಕೆಲವರಿಂದ ಸಾಲ ಪಡೆದಿದ್ದರು. ಆದರೆ ಕೋವಿಡ್ -19 ಜೀವನ ಮಟ್ಟವನ್ನು ಬಿಗಡಾಯಿಸುವಂತೆ ಮಾಡಿತು. ಜುಲೈ 12ರಂದು ಮನೆ ಬಿಟ್ಟು ನಾಪತ್ತೆಯಾದರು. ಅನಂತರ ಸಿಕ್ಕಿದ್ದು 19 ದಿನಗಳ ಬಳಿಕ. ಮೊಗಾದ ಘೋಲಿಯಾ ಖುದ್ì ಬಳಿಯ ಕಾಲುವೆಯಿಂದ ಜುಲೈ 28 ರಂದು ಅವನ ಕೊಳೆತ ದೇಹವನ್ನು ಹೊರತೆಗೆಯಲಾಯಿತು. ಸಾಲ ವಾಪಸು ನೀಡಲು ಕಿರುಕುಳ ನೀಡಿದ್ದ ನಾಲ್ವರನ್ನು ಬಂಧಿಸಲಾಗಿತ್ತು.
ಪ್ರತಿದಿನ ಜಗಳ
ಇಸ್ತ್ರಿ ಹಾಕುವ ಕೆಲಸ ಮಾಡುತ್ತಿದ್ದ ರಾಕೇಶ್ ಶರ್ಮ ಲಾಕ್‌ಡೌನ್ ಅವಧಿಯಲ್ಲಿ ಗುರುದೇವ್ ನಗರದಲ್ಲಿರುವ ಮನೆಯಲ್ಲೇ ಇದ್ದರು. ಪತ್ನಿ ಜ್ಯೋತಿಗೂ ಇವರಿಗೂ ಹಣಕಾಸು ಮತ್ತು ಇತರ ಕಾರಣಗಳಿಗಾಗಿ ಪ್ರತಿದಿನವೂ ಜಗಳವಾಗುತ್ತಿತ್ತು. ಜೂ. 23ರಂದು ಜಗಳ ತಾರಕಕ್ಕೇರಿ ಪತ್ನಿಗೆ ಕೊಡಲಿಯಿಂದ ಹಲ್ಲೆ ಮಾಡಿದ್ದಾರೆ. ಗಂಭೀರ ಗಾಯಗೊಂಡ ಪತ್ನಿ ಸಾವನ್ನಪ್ಪಿದ್ದನ್ನು ಕಂಡು ಈತನೂ ಕೂಡ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ.
ಖನ್ನತೆ, ಸಾಲ, ಆರ್ಥಿಕ ಸಮಸ್ಯೆಗಳು, ಉದ್ಯೋಗ ಕಳೆದುಕೊಳ್ಳುವುದು ಮುಂತಾದ ಹಲವಾರು ಸಮಸ್ಯೆಗಳಿಂದಾಗಿ ಜನರ ಮಾನಸಿಕ ಸಾಮರ್ಥ್ಯ ಕುಗ್ಗುವುದರಿಂದ ಲಾಕೌಡೌನ್ ಸಮಯದಲ್ಲಿ ಆತ್ಮಹತ್ಯೆಗಳು ಹೆಚ್ಚಾಗಿವೆ. ಜನರನ್ನು ಸಂವೇದನಾಶೀಲಗೊಳಿಸಲು ಮತ್ತು ಆನ್‌ಲೈನ್ ಕೌನ್ಸೆಲಿಂಗ್ ಸೆಷನ್‌ಗಳನ್ನು ನಡೆಸುವ ಮೂಲಕ ಜನರನ್ನು ಮಾನಸಿಕವಾಗಿ ಗಟ್ಟಿಗೊಳಿಸುವ ಕಾರ್ಯವನ್ನು ಮಾಡುತ್ತಿದ್ದೇವೆ ಎಂದು ಲುಧಿಯಾನಾ ಪೊಲೀಸ್ ಆಯುಕ್ತ ರಾಕೇಶ್ ಅಗ್ರವಾಲ್ ಹೇಳಿದ್ದಾರೆ.
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.