SKF ಎಲಿಕ್ಸರ್‌ ವಿರುದ್ಧದ ದಾವೆ ವಜಾ


Team Udayavani, Dec 16, 2023, 12:28 AM IST

LAW

ಮೂಡುಬಿದಿರೆ: ಎಸ್‌ಕೆಎಫ್ ಎಲಿಕ್ಸರ್‌ ಇಂಡಿಯಾ ಪ್ರೈ.ಲಿ. ಕಂಪೆನಿ ವಿರುದ್ಧದ ಎಲ್ಲ ದೂರುಗಳು ಮತ್ತು ಕ್ಲೇಮ್‌ಗಳನ್ನು ವಜಾಗೊಳಿಸಿ ಬೆಂಗಳೂರಿನ ಮಧ್ಯಸ್ಥಿಕೆ ನ್ಯಾಯಾಲಯ ಆದೇಶ ನೀಡಿದೆ ಎಂದು ಕಂಪೆನಿಯ ಕಾನೂನು ಮತ್ತು ಮ್ಯಾನೇಜ್‌ಮೆಂಟ್‌ ಸಲಹೆಗಾರ ಡಾ| ಲಕ್ಷ್ಮೀಶ ರೈ ತಿಳಿಸಿದ್ದಾರೆ.

ಎಸ್‌ಕೆಎಫ್‌ ಎಲಿಕ್ಸರ್‌ ಇಂಡಿಯಾ ಪ್ರೈ.ಲಿ ಕಂಪೆನಿಯು ರೈಸ್‌ಮಿಲ್‌ ಯಂತ್ರೋಪಕರಣ ಗಳನ್ನು ಉತ್ಪಾದಿ ಸುತ್ತಿದ್ದು ಇದರ ವಿರುದ್ಧ ಎಸ್‌ಕೆಎಫ್‌ ಬಾಯ್ಲರ್ ಆ್ಯಂಡ್‌ ಡ್ರೈಯರ್ ಸಂಸ್ಥೆಯು ಉತ್ಛ ನ್ಯಾಯಲಯದಲ್ಲಿ ದಾವೆ ಹೂಡಿತ್ತು. ನ್ಯಾಯಲಯವು ವಿಚಾರಣೆಗಾಗಿ ಹೈಕೋರ್ಟ್‌ನ ನಿವೃತ್ತ ನ್ಯಾ| ಎಚ್‌.ಜಿ. ರಮೇಶ್‌ ಅವರನ್ನು ನೇಮಿಸಿತ್ತು. ಬೆಂಗಳೂರಿನ ಮಧ್ಯಸ್ಥಿಕೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿದ ನಿವೃತ್ತ ನ್ಯಾಯಾಮೂರ್ತಿ ಎಚ್‌.ಜಿ.ರಮೇಶ್‌ ಅವರು ವಾದ ಪ್ರತಿವಾದವನ್ನು ಪರಿಗಣಿಸಿ ಎಸ್‌ಕೆಎಫ್‌ ಎಲಿಕ್ಸರ್‌ ಇಂಡಿಯಾ ಪ್ರೈ.ಲಿ ವಿರುದ್ಧದ ಎಲ್ಲ ದೂರುಗಳನ್ನು ಹಾಗೂ ಕ್ಲೇಮ್‌ಗಳನ್ನು ವಜಾಗೊಳಿಸಿ ಆದೇಶ ನೀಡಿದ್ದಾರೆ ಎಂದವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

2019ರಲ್ಲಿ ಎಸ್‌ಕೆಎಫ್‌ ಬಾಯ್ಲರ್ ಆ್ಯಂಡ್‌ ಡ್ರೈಯರ್‌ ಪ್ರೈ.ಲಿ ಹಾಗೂ ರಾಮಕೃಷ್ಣ ಆಚಾರ್‌ ಮತ್ತು ಇತರರ ನಡುವೆ ಆದ ಷೇರು ಖರೀದಿ ಒಪ್ಪಂದದ ಷರತ್ತು 8 ಮತ್ತು 9 ಕಾನೂನುಬಾಹಿರವಾಗಿದ್ದು ಇದು ಇಂಡಿಯನ್‌ ಕಾಂಟ್ರಾಕ್ಟ್ ಆ್ಯಕ್ಟ್‌ನ ಸೆಕ್ಷನ್‌ 27ಕ್ಕೆ ವಿರುದ್ಧವಾಗಿದೆ. ಹಾಗಾಗಿ ಎಸ್‌ಕೆಎಫ್‌ ಬಾಯ್ಲರ್ ಆ್ಯಂಡ್‌ ಡ್ರೈಯರ್ ಪ್ರೈ.ಲಿ. ಯಾವುದೇ ಪ್ರತಿಬಂಧಕ ಪರಿಹಾರಗಳಿಗೆ ಅರ್ಹರಲ್ಲ ಎಂದು ಘೋಷಿಸಿ ಅವರು ಸಲ್ಲಿಸಿದ ಮಧ್ಯಂತರ ಅರ್ಜಿಯನ್ನು ಕೂಡ ವಜಾಗೊಳಿಸಿದ್ದಾರೆ.

ಈ ತೀರ್ಪಿನಿಂದಾಗಿ ಎಸ್‌ಕೆಎಫ್‌ ಎಲಿಕ್ಸರ್‌ ಸಂಸ್ಥೆಯು ರೈಸ್‌ಮಿಲ್‌ ಯಂತ್ರೋಪಕರಣಗಳನ್ನು ಉತ್ಪಾದಿಸಿ ಭಾರತ ಮಾತ್ರವಲ್ಲದೆ ವಿದೇಶಗಳಲ್ಲಿ ತನ್ನ ಗ್ರಾಹಕರಿಗೆ ನೀಡುವಲ್ಲಿ ಯಾವುದೇ ತೊಂದರೆ ಇರುವುದಿಲ್ಲ ಎಂದು ಡಾ| ಲಕ್ಷ್ಮೀಶ ರೈ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಎಸ್‌ಕೆಎಫ್‌ ಎಲಿಕ್ಸರ್‌ ಇಂಡಿಯಾ ಪ್ರೈ.ಲಿ ಅಧ್ಯಕ್ಷ ಡಾ| ರಾಮಕೃಷ್ಣ ಆಚಾರ್‌, ಎಂ.ಡಿ ಪ್ರಜ್ವಲ್‌ ಆಚಾರ್‌, ಜಿ.ಎಂ.ಡಿ ತೇಜಸ್‌ ಆಚಾರ್‌, ಸಿಇಒ ಶ್ರೀನಿಧಿ ಅಯ್ಯಂಗಾರ್‌, ಹಿರಿಯ ಮಾರುಕಟ್ಟೆ ನಿರ್ದೇಶಕ ದೇವರಾಜ್‌ ಉಪಸ್ಥಿತರಿದ್ದರು.

ಟಾಪ್ ನ್ಯೂಸ್

IND-W vs WI: ವನಿತೆಯರ ಏಕದಿನ ಮುಖಾಮುಖಿ

IND-W vs WI: ವನಿತೆಯರ ಏಕದಿನ ಮುಖಾಮುಖಿ

GST

Old cars ಬಿಕರಿಗೆ ಶೇ.18 ಜಿಎಸ್‌ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್‌ಟಿ ಸಭೆ ತೀರ್ಮಾನ

fadnavis

Maharashtra; ಫ‌ಡ್ನವೀಸ್‌ ಬಳಿ ಗೃಹ, ಶಿಂಧೆಗೆ ನಗರಾಭಿವೃದ್ಧಿ ಸೇರಿ 3 ಪ್ರಮುಖ ಖಾತೆ!

BJP 2

BJP; ಬಣ ರಾಜಕೀಯ ತಪ್ಪಿಸಲು ತೃತೀಯ ಬಣ ಸಭೆ?

1-srrrr

English ತರಬೇತಿ ಮಾಧ್ಯಮವಷ್ಟೇ ಆಗಲಿ: ಗೊ.ರು.ಚನ್ನಬಸಪ್ಪ

Sheik Hasina

Sheikh Hasina ಅವಧಿಯಲ್ಲಾದ ಅಪಹರಣಗಳಿಗೆ ಭಾರತ ಕುಮ್ಮಕ್ಕು: ಬಾಂಗ್ಲಾ ವರದಿ

Uddav-2

Mumbai; ಚುನಾವಣೆಗೆ ಏಕಾಂಗಿ ಸ್ಪರ್ಧೆ: ಉದ್ಧವ್‌ ಶಿವಸೇನೆ ಇಂಗಿತ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11

Puttur: ಎರಡು ಕಡೆ ಚಿನ್ನಾಭರಣ ಕಳವು; ಮೂವರ ಸೆರೆ

10

Sullia: ಬಸ್‌ ನಿಲ್ದಾಣದಲ್ಲಿ ಮಲಗಿದ್ದ ಪ್ರಯಾಣಿಕನ ಬ್ಯಾಗ್‌, ಶೂ ಕಳವು

6

ಮಮ್ತಾಜ್‌ ಅಲಿ ಆತ್ಮಹತ್ಯೆಗೆ ಪ್ರಚೋದನೆ ಆರೋಪ: ಜಾಮೀನು ವಿಚಾರಣೆ ಅರ್ಜಿ ಮುಂದೂಡಿಕೆ

Traine-Spl

Special Trains: ಬೆಂಗಳೂರು -ಮಂಗಳೂರು ವಿಶೇಷ ಎಕ್ಸ್‌ಪ್ರೆಸ್‌ ರೈಲು

Cap-Brijesh-Chowta

Praveen Nettaru Case: ಮಂಗಳೂರಿನಲ್ಲಿ ಎನ್‌ಐಎ ಘಟಕಕ್ಕೆ ಶಕ್ತಿಮೀರಿ ಪ್ರಯತ್ನ: ಸಂಸದ ಚೌಟ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

IND-W vs WI: ವನಿತೆಯರ ಏಕದಿನ ಮುಖಾಮುಖಿ

IND-W vs WI: ವನಿತೆಯರ ಏಕದಿನ ಮುಖಾಮುಖಿ

11

Puttur: ಎರಡು ಕಡೆ ಚಿನ್ನಾಭರಣ ಕಳವು; ಮೂವರ ಸೆರೆ

Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ

Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ

10

Sullia: ಬಸ್‌ ನಿಲ್ದಾಣದಲ್ಲಿ ಮಲಗಿದ್ದ ಪ್ರಯಾಣಿಕನ ಬ್ಯಾಗ್‌, ಶೂ ಕಳವು

GST

Old cars ಬಿಕರಿಗೆ ಶೇ.18 ಜಿಎಸ್‌ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್‌ಟಿ ಸಭೆ ತೀರ್ಮಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.