ಬಿಸಿಲಿನ ರುದ್ರನರ್ತನ ; ಉತ್ತರ,ವಾಯವ್ಯದಲ್ಲಿ ಉಷ್ಣ ಹವೆ ಮುಂದುವರಿಕೆ
ಬಿಸಿಲ ಧಗೆಯಿಂದ ಸುರಿದ ಮಳೆಗೆ ಪಶ್ಚಿಮ ಬಂಗಾಲದಲ್ಲಿ 3 ಸಾವು
Team Udayavani, May 2, 2022, 7:44 AM IST
ಹೊಸದಿಲ್ಲಿ: ದೇಶದಲ್ಲಿ ಹೆಚ್ಚುತ್ತಿರುವ ಬಿಸಿಲ ಧಗೆ ಏರುಗತಿಯಲ್ಲೇ ಸಾಗಿದೆ. ರಾಷ್ಟ್ರ ರಾಜಧಾನಿ ಹೊಸದಿಲ್ಲಿ, ಹಿಮಾಚಲ ಪ್ರದೇಶ, ಪಂಜಾಬ್, ಹರಿಯಾಣ, ಚಂಡೀಗಢ, ಉತ್ತರ ಪ್ರದೇಶದ ದಕ್ಷಿಣ ಭಾಗ, ಗುಜರಾತ್‌ನ ಕಛ… ಮತ್ತು ರಾಜಸ್ಥಾನದ ಪೂರ್ವಭಾಗಗಳಲ್ಲಿನ ಹಲವಾರು ಪ್ರಾಂತಗಳಲ್ಲಿ 45 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಟಿದೆ. ರವಿವಾರದಂದು, ದಿಲ್ಲಿಯ ಉಷ್ಣಾಂಶ 43 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ವಾಯವ್ಯ ಭಾಗದಲ್ಲಿ 2010ರಲ್ಲಿ 35.4 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗುವ ಮೂಲಕ, 1973ರಲ್ಲಿ ಈ ಪ್ರಾಂತದಲ್ಲಿ ದಾಖಲಾಗಿದ್ದ 37.5 ಡಿಗ್ರಿ ಸೆಲ್ಸಿಯಸ್‌ನ ದಾಖಲೆಯನ್ನು ಮುರಿದಿತ್ತು. ಈಗ ಈ ಪ್ರಾಂತ್ಯದಲ್ಲಿ 45 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶ ದಾಖಲಾಗುತ್ತಿದ್ದು ಹಿಂದಿನ ಎಲ್ಲ ದಾಖಲೆಗಳನ್ನು ಮುರಿದಿದೆ. ದೇಶದ ವಾಯವ್ಯ ಹಾಗೂ ಮಧ್ಯಭಾಗ ಗಳಲ್ಲಿ ಇನ್ನೂ ಕೆಲವು ದಿನ ಬಿಸಿಲ ಝಳ ಹೀಗೆಯೇ ಮುಂದುವರಿಯುವ ಸಾಧ್ಯತೆಗಳಿವೆ ಎಂದು ಭಾರ ತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.
“ಮಹಾರಾಷ್ಟ್ರದ ವಿದರ್ಭ ಪ್ರಾಂತದಲ್ಲಿ ಮೇ 1ರಿಂದ 3ರ ವರೆಗೆ, ಮಧ್ಯಪ್ರದೇಶ, ಛತ್ತೀಸ್‌ಗಢ, ತೆಲಂಗಾಣ ಹಾಗೂ ಪಶ್ಚಿಮ ಬಂಗಾಲ ಮೇ 1 ಮತ್ತು 2, ಹಿಮಾಚಲ ಪ್ರದೇಶ, ಚಂಡೀಗಢ, ದಿಲ್ಲಿ, ಉತ್ತರ ಪ್ರದೇಶದ ದಕ್ಷಿಣ ಭಾಗ, ಗುಜರಾತ್, ರಾಜಸ್ಥಾನದ ಪೂರ್ವ ಭಾಗದಲ್ಲಿ ಮಂಗಳವಾರದ ವರೆಗೆ ಬಿಸಿಲ ಧಗೆ ಅಧಿಕವಾಗಿರಲಿದೆ’ ಎಂದು ಐಎಂಡಿ ಹೇಳಿದೆ.
ಮಹಾರಾಷ್ಟ್ರದ ವಿದರ್ಭ, ಛತ್ತೀಸ್‌ಗಢ, ತೆಲಂ ಗಾಣ, ಪಶ್ಚಿಮ ರಾಜಸ್ಥಾನಗಳಲ್ಲಿ ಸೋಮವಾರಂದು ಉಷ್ಣಹವೆ ಬೀಸಲಿದೆ ಎಂದು ಐಎಂಡಿ ಹೇಳಿದೆ.
ಬಂಗಾಲದಲ್ಲಿ 3 ಸಾವು: ಬಿಸಿಲಿನ ಬೇಗೆಯ ನಡು ವೆಯೇ ದೇಶದ ಕೆಲವು ಪ್ರಾಂತಗಳಲ್ಲಿ ಮಳೆ ಸುರಿ ದಿದೆ. ಪಶ್ಚಿಮ ಬಂಗಾಲದ ರಾಜಧಾನಿ ಕೋಲ್ಕತ್ತಾ ಸೇರಿದಂತೆ ದಕ್ಷಿಣ ಭಾಗದಲ್ಲಿ ಸುರಿದ ಮಳೆಯಿಂದಾಗಿ ಮೂವರು ಮೃತಪಟ್ಟಿದ್ದಾರೆ. ಪೂರ್ಬ ಮೇದಿನಿಪುರ್ ಜಿಲ್ಲೆಯಲ್ಲಿ ಸಿಡಿಲು ಬಡಿದು ತಾಯಿ ಮತ್ತು ಆಕೆಯ ಮಗ ಮೃತಪಟ್ಟಿದ್ದರೆ, ಪಶ್ಚಿಮ್ ಮೇದಿನಿಪುರ್ ಜಿಲ್ಲೆ ಯಲ್ಲಿ ಬಿದಿರಿನ ಗೇಟ್ ಒಂದು ಮೇಲೆ ಬಿದ್ದ ಕಾರಣ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾನೆ.
ಇದಲ್ಲದೆ ಬಿಸಿಲಿನ ಧಗೆಯಿಂದಾಗಿ ಎಪ್ರಿಲ್ ತಿಂಗ ಳಲ್ಲಿ ಅಸ್ಸಾಂನ ಅಲ್ಲಲ್ಲಿ ಸುರಿದ ಮಳೆಯ ಪರಿಣಾಮ, ಒಟ್ಟು 18 ಮಂದಿ ಸಾವನ್ನಪ್ಪಿದ್ದಾರೆ. ಹಲವಾರು ಮನೆ ಗಳು, ಕಟ್ಟಡಗಳಿಗೆ ಹಾನಿಯಾಗಿದೆ.
ಬಂಗಾಲ ಕೊಲ್ಲಿಯಲ್ಲಿ ಚಂಡಮಾರುತ?: ಪಶ್ಚಿಮ ಬಂಗಾಲದಲ್ಲಿ ಬೀಸುತ್ತಿದ್ದ ಗಾಳಿಯು ಉಷ್ಣ ಹವಾ ಮಾನದ ಪರಿಣಾಮ ತನ್ನ ಪಥವನ್ನು ಬದಲಿಸಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ. ಇದರಿಂ ದಾಗಿ ಬಂಗಾಲ ಕೊಲ್ಲಿಯಲ್ಲಿ ವಾಯುಭಾರ ಕುಸಿತ ವಾಗಿ ಚಂಡಮಾರುತ ಏಳುವ ಸಾಧ್ಯತೆಗಳು ದಟ್ಟವಾ ಗಿವೆ. ಹಾಗಾಗಿ ಈ ಇಡೀ ವಿದ್ಯಮಾನವನ್ನು ಕೂಲಂ ಕಷವಾಗಿ ಗಮನಿಸಲಾಗುತ್ತಿದೆ ಎಂದು ತಜ್ಞರು ಹೇಳಿದ್ದಾರೆ.
ಈಶಾನ್ಯದಲ್ಲಿ ಧಾರಾಕಾರ ಮಳೆ ಸಾಧ್ಯತೆ: ದೇಶದ ಕೇಂದ್ರ ಭಾಗದಲ್ಲಿನ ಉಷ್ಣ ಹವೆಯಿಂದಾಗಿ ಹಾಗೂ ಹಲವಾರು ಕಡೆ ಬಿಸಿಲ ಧಗೆ ಆವರಿಸಿರುವ ಪರಿಣಾಮದಿಂದಾಗಿ ಈಶಾನ್ಯ ರಾಜ್ಯಗಳಲ್ಲಿ ಮಳೆ ಸುರಿಯಬಹುದು ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ. ಅರುಣಾಚಲ ಪ್ರದೇಶ, ಪಶ್ಚಿಮ ಬಂಗಾಲದ ಹಿಮಾಲಯ ಪರ್ವತಗಳಿಗೆ ಹತ್ತಿರ ವಾಗಿರುವ ಪ್ರಾಂತಗಳು, ಸಿಕ್ಕಿಂನಲ್ಲಿ ಸೋಮ ವಾರದಂದು ಮಳೆ ಸುರಿಯುವ ಸಾಧ್ಯತೆಗಳಿವೆ. ಅಸ್ಸಾಂ, ಮೇಘಾಲಯದಲ್ಲಿ ಸೋಮವಾರ ಹಾಗೂ ಬುಧವಾರದಂದು; ನಾಗಾಲ್ಯಾಂಡ್, ಮಣಿಪುರ, ಮಿಜೋರಂ ಹಾಗೂ ತ್ರಿಪುರಾದಲ್ಲಿ ಬುಧವಾರದಂದು ವ್ಯಾಪಕವಾಗಿ ಮಳೆ ಬೀಳುವ ಸಾಧ್ಯತೆಗಳಿವೆ ಎಂದು ಇಲಾಖೆ ತಿಳಿಸಿದೆ.
ಕೇಂದ್ರದಿಂದ ಮಾರ್ಗಸೂಚಿ
ದೇಶಾದ್ಯಂತ ಉಷ್ಣ ಹವೆ ಆವರಿಸಿರುವ ಹಿನ್ನೆಲೆಯಲ್ಲಿ ದೇಶದ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರಕಾರ, “ಉಷ್ಣ ಸಂಬಂಧಿತ ಅನಾರೋಗ್ಯ ಕುರಿತಾದ ರಾಷ್ಟ್ರೀಯ ಕಾರ್ಯಸೂಚಿ’ಯನ್ನು ರವಾನಿಸಿದ್ದು, ಕೆಲವು ಸೂಚನೆಗಳು ಹಾಗೂ ಕೈಗೊಳ್ಳಬೇಕಾದ ಮುನ್ನೆಚ್ಚರಿಕ ಕ್ರಮಗಳನ್ನು ತಿಳಿಸಿದೆ.
ಇಂಟಗ್ರೇಟೆಡ್ ಡಿಸೀಸ್ ಸರ್ವೈಯಲನ್ಸ್ ಪ್ರೋಗ್ರಾಂ (ಐಡಿಎಸ್‌ಪಿ) ಯೋಜನೆಯಡಿ ಪ್ರತಿದಿನ ಸರ್ವೇ ಮೂಲಕ ಉಷ್ಣದಿಂದ ಅನಾರೋಗ್ಯಕ್ಕೀಡಾದ ಜನರನ್ನು ಪತ್ತೆ ಮಾಡಬೇಕು.
ಇದರ ವರದಿಯನ್ನು ಪ್ರತಿದಿನವೂ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರಕ್ಕೆ (ಎನ್‌ಸಿಡಿಸಿ) ರವಾನಿಸಬೇಕು.
ಎರಡು-ಮೂರು ದಿನಗಳವರೆಗಿನ ಉಷ್ಣಹವೆಯ ಸ್ಥಿತಿಗತಿಗಳ ಬಗ್ಗೆ ಪ್ರತಿದಿನವೂ ಭಾರತೀಯ ಹವಾಮಾನ ಇಲಾಖೆ, ಎನ್‌ಸಿಡಿಸಿ ನೀಡುವ ಮಾಹಿತಿಯನ್ನು ಜಿಲ್ಲಾ ಮಟ್ಟದ ಆಸ್ಪತ್ರೆಗಳಿಗೆ ರವಾನಿಸಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.