ಐಪಿಎಲ್: ಕೋಲ್ಕತಾ ನೈಟ್‌ರೈಡರ್ ವಿರುದ್ಧ ಸನ್‌ರೈಸರ್ ಹೈದರಾಬಾದ್‌ಗೆ ಗೆಲುವು
Team Udayavani, Apr 15, 2022, 11:26 PM IST
ಮುಂಬೈ: ಶುಕ್ರವಾರ ನಡೆದ ಐಪಿಎಲ್ ಪಂದ್ಯದಲ್ಲಿ ಪ್ರಬಲ ಕೋಲ್ಕತಾ ನೈಟ್‌ರೈಡರ್ ತಂಡವನ್ನು ಹೈದರಾಬಾದ್ ಸುಲಭವಾಗಿ ಸೋಲಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತ 20 ಓವರ್‌ಗಳಲ್ಲಿ 8 ವಿಕೆಟಿಗೆ 175 ರನ್ ಗಳಿಸಿ ಸವಾಲೊಡ್ಡಿತು. ಇದನ್ನು ಸರಾಗವಾಗಿ ಬೆನ್ನತ್ತಿದ ಹೈದರಾಬಾದ್ ಕೇವಲ 17.5 ಓವರ್‌ಗಳಲ್ಲಿ 3 ವಿಕೆಟ್ 176 ರನ್ ಗಳಿಸಿತು.
ಕೋಲ್ಕತ ನೀಡಿದ ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿದ ಹೈದರಾಬಾದ್ ಕೈಹಿಡಿದಿದ್ದು ರಾಹುಲ್ ತ್ರಿಪಾಠಿ ಮತ್ತು ಐಡೆನ್ ತ್ರಿಪಾಠಿ ಕೇವಲ 37 ಎಸೆತಗಳಲ್ಲಿ 4 ಬೌಂಡರಿ, 6 ಸಿಕ್ಸರ್ ಸಮೇತ ಅಬ್ಬರದ 71 ರನ್ ಗಳಿಸಿದರು. ಇವರಷ್ಟೇ ಅಬ್ಬರ ತೋರಿದ ಮಾಕ್ರìಮ್ 36 ಎಸೆತಗಳಲ್ಲಿ, 6 ಬೌಂಡರಿ, 4 ಸಿಕ್ಸರ್‌ಗಳೊಂದಿಗೆ 68 ರನ್ ಚಚ್ಚಿದರು. ಈ ಮೂಲಕ 7 ವಿಕೆಟ್‌ಗಳಿಂದ ಜಯ ಸಾಧಿಸಿದರು. ಆಂಡ್ರೆ ರಸೆಲ್ 20 ರನ್ ನೀಡಿ 2 ವಿಕೆಟ್ ಪಡೆದರೂ ಯಾವುದೇ ಪ್ರಯೋಜನವಾಗಲಿಲ್ಲ.
ಕೋಲ್ಕತ ಉತ್ತಮ ಮೊತ್ತ: ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತ ಪರ ಏರಾನ್ ಫಿಂಚ್ ತಾನೆದುರಿಸಿದ 2ನೇ ಎಸೆತವನ್ನೇ ಸಿಕ್ಸರ್‌ಗೆ ಬಡಿದಟ್ಟುವ ಮೂಲಕ ಶುಭಾರಂಭವನ್ನೇ ಮಾಡಿದರು. ಆದರೆ ಇವರ ಆಟ ಏಳೇ ರನ್ನಿಗೆ ಮುಗಿಯಿತು. ಮಾರ್ಕೊ ಜಾನ್ಸೆನ್ ಹೈದರಾಬಾದ್‌ಗೆ ಮೊದಲ ಯಶಸ್ಸು ತಂದಿತ್ತರು. ಮತ್ತೋರ್ವ ಓಪನರ್ ವೆಂಕಟೇಶ್ ಐಯ್ಯರ್ ಕೂಡ ಸಿಡಿದು ನಿಲ್ಲಲಿಲ್ಲ. ಇವರ ಗಳಿಕೆ ಕೇವಲ 6 ರನ್.
ನಟರಾಜನ್ ಅವಳಿ ಆಘಾತ: ಎಡಗೈ ಮಧ್ಯಮ ವೇಗಿ ಟಿ.ನಟರಾಜನ್ ತಮ್ಮ ಮೊದಲ ಓವರ್‌ನಲ್ಲೇ ಅವಳಿ ಆಘಾತವಿಕ್ಕಿದರು. ಮೊದಲ ಎಸೆತದಲ್ಲೇ ಐಯ್ಯರ್ ಅವರನ್ನು ಕ್ಲೀನ್‌ಬೌಲ್ಡ್ ಮಾಡಿ ಪೆವಿಲಿಯನ್ನಿಗೆ ಅಟ್ಟಿದರು. 3ನೇ ಎಸೆತದಲ್ಲಿ ಸುನೀಲ್ ನಾರಾಯಣ್ ಅವರ ವಿಕೆಟ್ ಉರುಳಿಸಿದರು. ನಾರಾಯಣ್ ತಾನೆದುರಿಸಿದ ಮೊದಲ ಎಸೆತವನ್ನೇ ಸಿಕ್ಸರ್‌ಗೆ ಬಡಿದಟ್ಟಿದ್ದರು. ಪವರ್ ಪ್ಲೇ ಮುಕ್ತಾಯಕ್ಕೆ ಕೆಕೆಆರ್ 3 ವಿಕೆಟಿಗೆ ಕೇವಲ 38 ರನ್ ಮಾಡಿ ಪರದಾಡುತ್ತಿತ್ತು.
ಆಗ ನಾಯಕ ಶ್ರೇಯಸ್ ಅಯ್ಯರ್-ನಿತೀಶ್ ರಾಣಾ ಜೋಡಿ ಕ್ರೀಸ್‌ನಲ್ಲಿತ್ತು. ಇಬ್ಬರೂ ತೀವ್ರ ಎಚ್ಚರಿಕೆಯ ಆಟವಾಡುತ್ತ ಇನ್ನಿಂಗ್ಸ್ ಬೆಳೆಸತೊಡಗಿದರು. 10 ಓವರ್ ಮುಕ್ತಾಯಕ್ಕೆ ಇನ್ನೇನು ಒಂದು ಎಸೆತ ಇದೆ ಎನ್ನುವಾಗ ಉಮ್ರಾನ್ ಮಲಿಕ್ ಈ ಜೋಡಿಯನ್ನು ಬೇರ್ಪಡಿಸಲು ಯಶಸ್ವಿಯಾದರು. 28 ರನ್ ಮಾಡಿದ ಶ್ರೇಯಸ್ ಐಯ್ಯರ್ ಬೌಲ್ಡ್ ಆದರು. 25 ಎಸೆತ ಎದುರಿಸಿದ ಕೆಕೆಆರ್ ಕಪ್ತಾನ 3 ಬೌಂಡರಿ ಹೊಡೆದಿದ್ದರು. ಅರ್ಧ ಹಾದಿ ಪೂರ್ತಿಗೊಳ್ಳುವಾಗ ಕೋಲ್ಕತಾ 4 ವಿಕೆಟಿಗೆ 70 ರನ್ ಮಾಡಿತ್ತು.
ಈ ಹಂತದಲ್ಲಿ ನಿತೀಶ್ ರಾಣಾ ತಮ್ಮ ಬ್ಯಾಟಿಂಗ್ ಪ್ರತಾಪ ತೋರಲಾರಂಭಿಸಿದರು. 19ನೇ ಇನಿಂಗ್ಸ್ ಬಳಿಕ ರಾಣಾ ಐಪಿಎಲ್‌ನಲ್ಲಿ ಮೊದಲ ಅರ್ಧಶತಕ ಬಾರಿಸಿದರು. ರಾಣಾಗೆ ಶೆಲ್ಡನ್ ಜಾಕ್ಸನ್ (7) ಅವರಿಂದ ಬೆಂಬಲ ಲಭಿಸಲಿಲ್ಲ. ಡೆತ್ ಓವರ್‌ಗಳಲ್ಲಿ ಆ್ಯಂಡ್ರೆ ರಸೆಲ್ ಕೂಡಿಕೊಂಡರು. 16ನೇ ಓವರ್ ಎಸೆದ ಉಮ್ರಾನ್ ಮಲಿಕ್ ಕೇವಲ 2 ರನ್ ನೀಡಿ ರಸೆಲ್ ಅವರನ್ನು ಕಟ್ಟಿಹಾಕಿದ್ದೊಂದು ವಿಶೇಷ.
ಅಂತಿಮ ಓವರ್ ಎಸೆಯಲು ಬಂದ ನಟರಾಜನ್ ಇಲ್ಲಿಯೂ ದೊಡ್ಡ ಯಶಸ್ಸು ಸಂಪಾದಿಸಿದರು. ನಿತೀಶ್ ರಾಣಾ ಆಟಕ್ಕೆ ತೆರೆ ಎಳೆದರು. ರಾಣಾ ಗಳಿಕೆ 36 ಎಸೆತಗಳಿಂದ 54 ರನ್ (6 ಬೌಂಡರಿ, 2 ಸಿಕ್ಸರ್). ಪ್ಯಾಟ್ ಕಮಿನ್ಸ್ ಗಳಿಕೆ ಕೇವಲ 3 ರನ್. ಆದರೆ ರಸೆಲ್ ತಮ್ಮ ಛಾತಿಗೆ ತಕ್ಕ ಪ್ರದರ್ಶನ ನೀಡಿ 49 ರನ್ ಬಾರಿಸಿ ಅಜೇಯರಾಗಿ ಉಳಿದರು. 25 ಎಸೆತ ಎದುರಿಸಿದ ರಸೆಲ್ 4 ಸಿಕ್ಸರ್, 4 ಫೋರ್ ಬಾರಿಸಿದರು. ಹೈದರಾಬಾದ್ ಪರ ಟಿ.ನಟರಾಜನ್ 3, ಉಮ್ರಾನ್ ಮಲಿಕ್ 2 ವಿಕೆಟ್ ಉಡಾಯಿಸಿದರು.
ಫಿಂಚ್, ಅಮಾನ್ ಆಟ: ಕೆಕೆಆರ್ ಪರ ಏರಾನ್ ಫಿಂಚ್ ಮತ್ತು ಅಮಾನ್ ಖಾನ್ ಪದಾರ್ಪಣೆಗೈದರು. ಜತೆಗೆ ಶೆಲ್ಡನ್ ಜಾಕ್ಸನ್ ಕೂಡ ಅವಕಾಶ ಪಡೆದರು. ಇವರಿಗಾಗಿ ಜಾಗ ಬಿಟ್ಟವರು ಅಜಿಂಕ್ಯ ರಹಾನೆ, ಸ್ಯಾಮ್ ಬಿಲ್ಲಿಂಗ್ಸ್ ಮತ್ತು ರಾಸಿಖ್ ಸಲಾಂ. ಇದು ಏರಾನ್ ಫಿಂಚ್ ಪಾಲ್ಗೊಳ್ಳುತ್ತಿರುವ 9ನೇ ಐಪಿಎಲ್ ತಂಡವೆಂಬುದೊಂದು ದಾಖಲೆ. ಹೈದರಾಬಾದ್ ತಂಡದಲ್ಲಿ ಗಾಯಾಳು ವಾಷಿಂಗ್ಟನ್ ಸುಂದರ್ ಬದಲು ಕರ್ನಾಟಕದ ಜಗದೀಶ್ ಸುಚಿತ್ ಕಾಣಿಸಿಕೊಂಡರು.
ಸಂಕ್ಷಿಪ್ತ ಸ್ಕೋರ್: ಕೋಲ್ಕತ 20 ಓವರ್, 175/8 (ನಿತೀಶ್ ರಾಣಾ 54, ಆಂಡ್ರೆ ರಸೆಲ್ 49, ಟಿ.ನಟರಾಜನ್ 37ಕ್ಕೆ 3, ಉಮ್ರಾನ್ ಮಲಿಕ್ 27ಕ್ಕೆ 2). ಹೈದರಾಬಾದ್ 17.5 ಓವರ್, 176/3 (ರಾಹುಲ್ ತ್ರಿಪಾಠಿ 71, ಐಡೆನ್ 68, ಆಂಡ್ರೆ ರಸೆಲ್ 20ಕ್ಕೆ 2).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Police Raid: ಮಾದಕವಸ್ತು, ಅಕ್ರಮ ಮದ್ಯಮಾರಾಟದ ವಿರುದ್ಧ ವಿಶೇಷ ಕಾರ್ಯಾಚರಣೆ: ಪ್ರಕರಣ ದಾಖಲು
IPL Mega Auction: ಮೊದಲ ದಿನದ ಹರಾಜಿನ ಬಳಿಕ ಎಲ್ಲಾ 10 ತಂಡಗಳು ಹೀಗಿವೆ ನೋಡಿ
Rashmika Mandanna: ಸಾವಿರಾರು ಜನರ ಮುಂದೆ ಮದುವೆ ಆಗುವ ಹುಡುಗನ ಬಗ್ಗೆ ಮಾತನಾಡಿದ ರಶ್ಮಿಕಾ
Stock Market: ಷೇರುಪೇಟೆ ಸೂಚ್ಯಂಕ 1,300 ಅಂಕ ಜಿಗಿತ; ಅದಾನಿ ಗ್ರೂಪ್ ಷೇರು ಮೌಲ್ಯ ಏರಿಕೆ
Bidar: ವಕ್ಫ್ ಹೋರಾಟ ಆರಂಭಿಸಿದ ಯತ್ನಾಳ್- ಜಾರಕಿಹೊಳಿ ತಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.