ಸುವರ್ಣ ತ್ರಿಭುಜ ಬೋಟ್: ದುರಂತಕ್ಕೆ ಮೂರು ವರ್ಷ
ಪರಿಹಾರ ಬಂದಿಲ್ಲ ; ಒಬ್ಬರ ಸುಳಿವೂ ಸಿಗದಿರುವುದೇ ಚೋದ್ಯ
Team Udayavani, Dec 15, 2021, 6:10 AM IST
ಉಡುಪಿ: ಸುವರ್ಣ ತ್ರಿಭುಜ ಬೋಟ್ ದುರಂತ ಸಂಭವಿಸಿ 3 ವರ್ಷಗಳೇ ಸಂದರೂ ಘಟನೆ ಹೇಗಾಯಿತು ಎಂಬ ಯಕ್ಷ ಪ್ರಶ್ನೆಯ ಬಗ್ಗೆ ಯಾರೂ ಚಕಾರವೆತ್ತಿಲ್ಲ.
2018ರ ಡಿ. 13ರಂದು ಮಲ್ಪೆ ಕಡಲ ತೀರದಿಂದ ಮೀನುಗಾರಿಕೆಗೆ ಹೊರಟ ಏಳು ಮಂದಿಯ ತಂಡ ಕಾಣ ಸಿಗದೇ ಮರೆಯಾಗಿತ್ತು. ಡಿ. 15ರಂದು ಬೋಟ್ ನಾಪತ್ತೆ ಸುದ್ದಿ ಹರಿದಾಡಿತ್ತು.
ಊಹೆಗೆ ತಕ್ಕಂತೆ ಹೇಳಿಕೆ ಚಂದ್ರಶೇಖರ ಕೋಟ್ಯಾನ್ ತೊಟ್ಟಂ ಮಲ್ಪೆ ಅವರ ಒಡೆತನದ “ಸುವರ್ಣ ತ್ರಿಭುಜ’ ಬೋಟ್ ಆಳ ಸಮುದ್ರದಲ್ಲಿ ಮುಳುಗಿ ಚಂದ್ರ ಶೇಖರ ಕೋಟ್ಯಾನ್ ಸಹಿತ ಏಳು ಮಂದಿ ನಾಪತ್ತೆಯಾಗಿದ್ದರು. ಅಂದಿನ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮ್ ಮುತುವರ್ಜಿಯಿಂದ ಬೋಟ್ ಕಾಣೆಯಾದ ತಾಣದಲ್ಲಿ
ಮುಳುಗು ತಜ್ಞರ ಮೂಲಕ ಶೋಧ ನಡೆಸಿ ಅದು ಮುಳುಗಡೆಯಾಗಿದ್ದು ಹೌದು ಎಂಬುದನ್ನು ಖಚಿತೆ ಮಾಡಿಸಿದರು.
ಆದರೆ ಆ ಬೋಟ್‌ನ ಅನತಿ ದೂರದಲ್ಲಿ ಒಬ್ಬ ವ್ಯಕ್ತಿಯ ಕುರುಹೂ ಪತ್ತೆಯಾಗದೇ ಇದ್ದಾಗ ಅವರವರ ಊಹೆಗೆ ತಕ್ಕಂತೆ ಒಬ್ಬೊಬ್ಬರು ಒಂದೊಂದು ರೀತಿಯ ಹೇಳಿಕೆ ನೀಡತೊಡಗಿದರು.
ಇನ್ನೂ ಯಕ್ಷಪ್ರಶ್ನೆ ಯಾಗಿಯೇ ಉಳಿದ ಈ ದುರಂತ ಕಥೆಗೆ ಅಂದಿನ ಸಮ್ಮಿಶ್ರ ಸರಕಾರ ಹಾಗೂ ಮಾಜಿ
ಮುಖ್ಯಮಂತ್ರಿ ಬಿ.ಎಎಸ್. ಯಡಿಯೂರಪ್ಪ ನೇತೃತ್ವದ ಸರಕಾರದಲ್ಲಿ ರಾಜ್ಯ ಸರಕಾರದ ವತಿ ಯಿಂದ ತಕ್ಕಮಟ್ಟಿನ ಸಹಾಯದ ಚೆಕ್ ಜೀವನೋಪಾಯಕ್ಕಾಗಿ ನೀಡಿತ್ತು. ಆದರೆ ಇದುವರೆಗೆ ಕೇಂದ್ರದಿಂದ ಯಾವುದೇ ಸಹಾಯ ಬಂದಿಲ್ಲ. ಕೇವಲ ಬೋಟ್ ಗುರುತಿಸಿದ್ದು ಬಿಟ್ಟರೆ, ಯಾಕೆ ಅದು ಮುಳುಗಿತು ಎಂಬ ವಿಚಾರ ನಿಗೂಢವಾಗಿಯೇ ಇದೆ.
ಇದನ್ನೂ ಓದಿ:ಖಡಕ್ ಟೀ ಆಗದ್ದಕ್ಕೆ ನೆಟ್ಟಿಗರ ಕೋಪ; ಎನ್‌ಆರ್‌ಐ ವೈದ್ಯ ಸಂಜಯ ಗುಪ್ತಾರಿಂದ ಮಕ್ಕಳಿಗೆ ಪಾಠ
ತುರ್ತು ಜಾರಿಯಾಗಲಿ
ನೊಂದ ಕುಟುಂಬಗಳಿಗೆ ಸರಕಾರದ ವತಿಯಿಂದ ಸಹಾಯಧನ, ದೃಢೀಕರಣ ಪತ್ರ ಹಾಗೂ ಇನ್ನಿತರ ಸೌಲಭ್ಯಗಳನ್ನು ತತ್‌ಕ್ಷಣ ಜಾರಿಮಾಡಬೇಕು. ಸುವರ್ಣ ತ್ರಿಭುಜ 1.10 ಕೋ.ರೂ. ಮೌಲ್ಯ ಹೊಂದಿದ್ದು, ವಿಮೆ ಮೂಲಕ 40 ಲ.ರೂ. ಮಾತ್ರ ಲಭಿಸಿದೆ. ಸರಕಾರದಿಂದ ಪರಿಹಾರ ಸಿಕ್ಕಿಲ್ಲ ಎಂದು ಚಂದ್ರಶೇಖರ್ ಅವರ ಸಹೋದರರಾದ ಗಣೇಶ್ ಕೋಟ್ಯಾನ್, ನಿತ್ಯಾನಂದ ಕೋಟ್ಯಾನ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ
ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ
Gangavathi: 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.