ರೋಗ ನಿರೋಧಕ ಶಕ್ತಿ ವೃದ್ಧಿಗೆ ಟಿ ಸೆಲ್ಸ್
Team Udayavani, Jul 26, 2020, 2:24 PM IST
ಲಂಡನ್: ಕೋವಿಡ್ ಸೋಂಕು ಹರಡುವಿಕೆ ಪ್ರಾರಂಭವಾದ ದಿನದಿಂದ ಪ್ರತಿಕಾಯ (ಆ್ಯಂಟಿಬಾಡಿ) ಎನ್ನುವ ಪದ ಬಳಕೆ ಹೆಚ್ಚಾಗಿದ್ದು, ದೇಹವನ್ನು ಸೋಂಕಿನಿಂದ ರಕ್ಷಿಸುವಲ್ಲಿ ಇದು ಉತ್ತಮವಾಗಿ ಕೆಲಸ ಮಾಡುತ್ತದೆ ಎಂದು ಅಧ್ಯಯನ ವರದಿಗಳು ತಿಳಿಸಿವೆ.
ಆದರೆ ಇದೀಗ ಟಿ ಸೆಲ್ಸ್ ಎನ್ನುವ ಪದ ಆ್ಯಂಟಿಬಾಡಿ ಪದಕ್ಕಿಂತ ಹೆಚ್ಚು ಚಾಲ್ತಿಯಲ್ಲಿದ್ದು, ಸೋಂಕಿತ ಕೋಶಗಳನ್ನು ನೇರವಾಗಿ ಈ ಟಿ ಸೆಲ್ಸ್ ನಾಶ ಮಾಡಲಿದೆ ಎಂದು ಅಧ್ಯಯನ ವರದಿ ತಿಳಿಸಿದೆ.
ಏನಿದು ಟಿ ಸೆಲ್ಸ್ ?
ದೇಹಕ್ಕೆ ಸೋಂಕು ತಗಲಿದಾಗ ರಚನೆಯಾಗುವ ಪ್ರತಿರೋಧಕ ಶಕ್ತಿಯ ಭಾಗವಾಗಿ ಟಿ ಸೆಲ್ಸ್ ಮತ್ತು ಆ್ಯಂಟಿಬಾಡಿ ವೃದ್ಧಿ ಆಗಲಿದೆ. ಟಿ ಸೆಲ್ಸ್ ಎಂಬುದು ಬಿಳಿ ರಕ್ತ ಕಣವಾಗಿದ್ದು ವೈರಾಣುವಿನಿಂದ ಸೋಂಕಿತವಾದ ಕೋಶಗಳನ್ನು ಇದು ನೇರವಾಗಿ ನಾಶ ಮಾಡುತ್ತದೆ ಎಂದು ತಜ್ಞರು ಹೇಳಿದ್ದಾರೆ.
ಇನ್ನು ಕೋವಿಡ್ ಲಸಿಕೆ ಕುರಿತಾದ ವರದಿಯಲ್ಲಿ ಈ ಟಿ ಸೆಲ್ಸ್‌ಗಳ ಕುರಿತು ಮಾಹಿತಿ ನೀಡಲಾಗಿದ್ದು, ಆಸ್ಟ್ರಾಜೆನೆಕಾ, ಪಿಫೈಜರ್, ಬಯೋ ಎನ್ ಟೆಕ್ ಹಾಗೆಯೇ ಚೀನದ ಕ್ಯಾನ್ಸಿನೋ ಬಯೋಲಾಜಿಕಲ್ಸ್ ಇಂಕ್ ಈ ಎಲ್ಲ ಲಸಿಕೆಗಳಲ್ಲಿ ಬಿಳಿ ರಕ್ತಕಣಗಳಿವೆ.
ಇವುಗಳು ಕೋವಿಡ್ ಗುಣಪಡಿಸುವ ಭರವಸೆಯನ್ನು ನೀಡುತ್ತಿವೆ. ಅಲ್ಲದೇ ಸೋಂಕಿತರ ದೇಹದಲ್ಲಿ ಈ ಟಿ ಸೆಲ್ಸ್‌ಗಳು ಸೋಂಕಿನ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡಲಿದ್ದು, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ.
ಲಸಿಕೆಯು ಪ್ರಯೋಗವಾದ ವ್ಯಕ್ತಿಗಳ ದೇಹದಲ್ಲಿ ಪ್ರಬಲ ಪ್ರತಿಕಾಯ (Antibody) ಮತ್ತು ಟಿ ಸೆಲ್ಸ್ ಗಳ ಸೃಷ್ಟಿಯಾಗಿದ್ದು, ಲಸಿಕೆಯನ್ನು ಹಾಕಿದ 14 ದಿನದೊಳಗೆ ಟಿ ಸೆಲ್ಸ್ ಗಳು ಸ್ಪಂದಿಸತೊಡಗಿವೆ. ಹಾಗೆಯೇ, 28 ದಿನದೊಳಗೆ ಪ್ರತಿಕಾಯ ಸ್ಪಂದನೆಯಾಗಿದೆ ಎಂದು ದಿ ಲ್ಯಾನ್ಸೆಟ್ ಜರ್ನಲ್ ಟಿ ಸೆಲ್ಸ್ ಕುರಿತು ವರದಿ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bangladesh: 42,600 ಕೋಟಿ ರೂ. ಲಂಚ ಕೇಸ್: ಹಸೀನಾ ವಿರುದ್ಧ ತನಿಖೆ ಶುರು
America: ಪ್ರತೀಕಾರ- ಭಾರತದ ನಟೋರಿಯಸ್ ಡ್ರ*ಗ್ಸ್ ಸ್ಮಗ್ಲರ್ ಶೂಟೌಟ್ ನಲ್ಲಿ ಹ*ತ್ಯೆ
Ex-US President: ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಆಸ್ಪತ್ರೆಗೆ ದಾಖಲು
Revival: ಭಾರತಕ್ಕೆ ಬಾಂಗ್ಲಾದೇಶ ಸೆಡ್ಡು: ಪಾಕಿಸ್ಥಾನ ಜತೆ ವಹಿವಾಟಿಗೆ ಸಜ್ಜು!
White House; ಎಐ ಹಿರಿಯ ಸಲಹೆಗಾರರಾಗಿ ಭಾರತ ಮೂಲದ ವ್ಯಕ್ತಿ ನೇಮಕ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.