![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Apr 5, 2020, 10:08 AM IST
ಚಿಕ್ಕಮಗಳೂರು: ದಿಲ್ಲಿಯ ನಿಜಾಮುದ್ದೀನ್ ಮಸೀದಿಯಲ್ಲಿ ನಡೆದ ತಬ್ಲಿ ಸಮಾವೇಶದಲ್ಲಿ ಭಾಗವಹಿಸಿದ್ದ ಅನೇಕರು ನಾಪತ್ತೆ ಯಾಗಿದ್ದಾರೆ. ದೇಶಾದ್ಯಂತ ಕೋವಿಡ್ 19 ಹಬ್ಬಿಸುವ ದುಷ್ಕೃತ್ಯ ನಡೆದಿದ್ದು, ಇದರ ಹಿಂದೆ ಕೋವಿಡ್ 19 ಜೆಹಾದಿ ವಾಸನೆ ಕಂಡುಬರುತ್ತಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದರು.
ಪತ್ರಕರ್ತರೊಂದಿಗೆ ಮಾತನಾಡಿ, ದಿಲ್ಲಿ ಸಮಾವೇಶದಲ್ಲಿ ಭಾಗ ವಹಿಸಿದ್ದವರನ್ನು ಪತ್ತೆ ಹಚ್ಚುವ ಕೆಲಸವನ್ನು ಪೊಲೀಸರು ಮಾಡುತ್ತಿದ್ದಾರೆ. ಆದರೆ ಅವರು ಕೋವಿಡ್ 19 ಮುಕ್ತ ಮಾಡಲು ಸಹಕಾರ ನೀಡುತ್ತಿಲ್ಲ ಎಂಬುದು ಅವರ ವರ್ತನೆಯಿಂದಲೇ ಗೊತ್ತಾ ಗುತ್ತಿದೆ. ಬೆಂಗಳೂರಿನ ಸಾದಿಕ್ ನಗರದ ಕೋವಿಡ್ 19 ಪೀಡಿತರ ಮಾಹಿತಿ ಕಲೆ ಹಾಕಲು ಆಶಾ ಕಾರ್ಯಕರ್ತೆ ಹೋದ ಸಂದರ್ಭ ಅವರ ಮೇಲೆ ಹಲ್ಲೆ ನಡೆದಿರುವುದು ಒಂದು ಸಮುದಾಯ ಕೊರೊನಾ ತಡೆಗೆ ಸಹಕಾರ ನೀಡುತ್ತಿಲ್ಲ ಎಂಬುದನ್ನು ಸಾಬೀತು ಮಾಡಿದೆ ಎಂದರು.
ಯಾರು ಈ ನೆಲದ ಕಾನೂನನ್ನು ಗೌರವಿಸುವುದಿಲ್ಲವೋ ಅವರಿಗೆ ಮುಂದಿನ ದಿನಗಳಲ್ಲಿ ಕಾನೂನಿನ ರುಚಿ ತೋರಿಸಬೇಕಾಗುತ್ತದೆ. ನಮ್ಮ ನೆಲದ ಕಾನೂನು ಪಾಲನೆ ಮಾಡುವುದಿಲ್ಲ ಎಂದರೆ ಅದರ ಹಿಂದೆ ಯಾವುದೋ ಷಡ್ಯಂತ್ರ ನಡೆಯುತ್ತಿದೆ ಎಂದು ಅರ್ಥ. ಯಾರು ಕೋವಿಡ್ 19 ಸೋಂಕು ಇನ್ನೊಬ್ಬರಿಗೆ ಹಬ್ಬಿಸುತ್ತಿದ್ದಾರೋ ಅವರನ್ನು ಪತ್ತೆ ಮಾಡಿ ಸರಕಾರ ಉಗ್ರ ಶಿಕ್ಷೆಗೆ ಗುರಿಪಡಿಸುತ್ತದೆ ಎಂಬ ವಿಶ್ವಾಸವನ್ನು ಕರಂದ್ಲಾಜೆ ವ್ಯಕ್ತಪಡಿಸಿದರು.
You seem to have an Ad Blocker on.
To continue reading, please turn it off or whitelist Udayavani.