Ram Mandir: ಬ್ಯಾಗ್, ವಾಚ್ ಕಳಚಿಟ್ಟು ಮಂದಿರಕ್ಕೆ ಬನ್ನಿ: ಭಕ್ತರಿಗೆ ಮನವಿ
ಹೆಚ್ಚುತ್ತಿರುವ ಸಂದರ್ಶಕರ ಹಿನ್ನೆಲೆಯಲ್ಲಿ ಕ್ರಮ- ಭಕ್ತರಿಗಾಗಿ ಫಾಸ್ಟ್‌ಲೇನ್ ವ್ಯವಸ್ಥೆ ಶುರು
Team Udayavani, Jan 31, 2024, 10:25 PM IST
ಅಯೋಧ್ಯೆ/ಲಕ್ನೋ: ಅಯೋಧ್ಯೆಯಲ್ಲಿ ಬಾಲಕ ರಾಮನ ದರ್ಶನ ಪಡೆಯಲು ಲಕ್ಷಾಂತರ ಭಕ್ತರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕೆಲವೊಂದು ನಿಯಮಗಳನ್ನು ಜಾರಿಗೊಳಿಸಲು ತೀರ್ಮಾನಿಸಲಾಗಿದೆ. ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ವತಿ ಸಹಯೋಗದಲ್ಲಿ ಫಾಸ್ಟ್ ಲೇನ್ ವ್ಯವಸ್ಥೆ ಜಾರಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೀಶ್ ಕುಮಾರ್ ಹೇಳಿದ್ದಾರೆ.
ರಾಮ ಮಂದಿರಕ್ಕೆ ಆಗಮಿಸುವವರು ಬ್ಯಾಗ್ ಸೇರಿದಂತೆ ಯಾವುದೇ ವಸ್ತುಗಳನ್ನು ವಸತಿ ಗೃಹದಲ್ಲೇ ಇರಿಸಿ ಆಗಮಿಸಬೇಕು. ಶೂ, ಚಪ್ಪಲಿ, ವಾಚ್‌ಗಳನ್ನು ವಸತಿಗೃಹದಲ್ಲೇ ಇರಿಸಲು ಮನವಿ ಮಾಡಲಾಗಿದೆ.
ಜ.22ರಿಂದ ಇದುವರೆಗೆ 13 ಲಕ್ಷಕ್ಕೂ ಅಧಿಕ ಮಂದಿ ಭಕ್ತರು ಆಗಮಿಸಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಾಗುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ವೇಗವಾಗಿ ದರ್ಶನ ಪಡೆಯಲು ಅವಕಾಶ ನೀಡಲು ಫಾಸ್ಟ್‌ಲೇನ್ ಜಾರಿಗೊಳಿಸಲಾಗಿದೆ. ಭಕ್ತರಿಗೆ ಅನುಕೂಲವಾಗುವಂತೆ ಮಂದಿರದ ಸಮೀಪ ಇರುವ ರಸ್ತೆಗಳನ್ನು ಮೇಲ್ದರ್ಜೆಗೆ ಏರಿಸಲಾಗುತ್ತದೆ ಎಂದರು.
ಮತ್ತೆ ಆರಂಭ:
ಇದೇ ವೇಳೆ, ದೇಶಿಯ ವಿಮಾನಯಾನ ಸಂಸ್ಥೆ ಝೂಮ್ ಬುಧವಾರ 4 ವರ್ಷಗಳ ಬಳಿಕ ಮತ್ತೆ ತನ್ನ ಸೇವೆ ಆರಂಭಿಸಿದೆ. ನವದೆಹಲಿಯಿಂದ ಅಯೋಧ್ಯೆಗೆ ವಾರದಲ್ಲಿ 3 ಬಾರಿ ವಿಮಾನಯಾನ ಸೇವೆ ನೀಡಲಿದೆ.
ಸುಲಭದರ್ಶನಕ್ಕೆ ಮಾಡಬೇಕಾದ್ದು
ಬ್ಯಾಗ್‌ಗಳು ಅಥವಾ ಯಾವುದೇ ವಸ್ತುಗಳನ್ನು ಹೊಟೇಲ್, ಅತಿಥಿ ಗೃಹ, ಧರ್ಮಶಾಲೆಗಳಲ್ಲೇ ಇಟ್ಟು ಆಗಮಿಸಿ
ಶೂ, ಚಪ್ಪಲಿಗಳನ್ನು ಧರಿಸಬೇಡಿ ಹಾಗೂ ಮೊಬೈಲ್ ಮತ್ತು ವಾಚ್‌ಗಳನ್ನು ಕೊಂಡೊಯ್ಯಬೇಡಿ
ದೇವಸ್ಥಾನದ ಆವರಣದಲ್ಲೇ ಲಾಕರ್ ಸೌಲಭ್ಯ ಇದೆ ಅಗತ್ಯವಿದ್ದಲ್ಲಿ ಆ ಸೌಲಭ್ಯ ಬಳಸಿಕೊಳ್ಳಬಹುದು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Issue: ನಾಳೆಯಿಂದ ಜೆಪಿಸಿ ಎದುರು ಕರ್ನಾಟಕ ಸೇರಿ 6 ರಾಜ್ಯಗಳ ಪ್ರತಿನಿಧಿಗಳು ಹಾಜರು
ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು
Uttarakhand: ಕಂದಕಕ್ಕೆ ಬಿದ್ದ ಬಸ್ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ
Uttar Pradesh: 16 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾ*ಚಾರ; ಇಬ್ಬರ ಬಂಧನ
Atul Subhash Case: ಮೊಮ್ಮಗನನ್ನು ನೀಡದಿದ್ದರೆ ಆತ್ಮಹತ್ಯೆ; ಅತುಲ್ ತಂದೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kalaburagi: ಟಿಟಿ ಟಯರ್ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!
Waqf Issue: ನಾಳೆಯಿಂದ ಜೆಪಿಸಿ ಎದುರು ಕರ್ನಾಟಕ ಸೇರಿ 6 ರಾಜ್ಯಗಳ ಪ್ರತಿನಿಧಿಗಳು ಹಾಜರು
ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು
Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ
Banahatti: ತಾಂತ್ರಿಕ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಬದ್ಧಳಾಗಿದ್ದೇನೆ: ಉಮಾಶ್ರೀ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.