ತಾ| ಕಚೇರಿ ಝೆರಾಕ್ಸ್‌ ಯಂತ್ರಗಳು ಸ್ತಬ್ಧ!

ಎಲ್ಲ ಕೆಲಸ ಕಾರ್ಯಗಳಿಗೂ ಖಾಸಗಿಯವರ ಮೊರೆ ಹೋಗಬೇಕಾದ ಅನಿವಾರ್ಯ

Team Udayavani, Jan 13, 2022, 4:44 AM IST

ತಾ| ಕಚೇರಿ ಝೆರಾಕ್ಸ್‌ ಯಂತ್ರಗಳು ಸ್ತಬ್ಧ!

ಕುಂದಾಪುರ: ತಾಲೂಕು ಕಚೇರಿಯ ಕಂದಾಯ ಶಾಖೆ, ಚುನಾವಣೆ ಶಾಖೆ, ಆಹಾರ ಖಾತೆ ಸೇರಿದಂತೆ ವಿವಿಧೆಡೆಯ ಐದಕ್ಕೂ ಹೆಚ್ಚು ಝೆರಾಕ್ಸ್‌ ಯಂತ್ರಗಳು ಕಾರ್ಯಾಚರಣೆ ಸ್ಥಗಿತಗೊಳಿಸಿವೆ.

ದುರಸ್ತಿಯಾಗಿಲ್ಲ
ಕೆಲವು ವರ್ಷಗಳ ಹಿಂದಿನವರೆಗೆ ಕಡತದ ಛಾಯಾಪ್ರತಿ ತೆಗೆಸಲು, ನಕಲು ತೆಗೆಸಲು ಕಚೇರಿ ಸಿಬಂದಿ ಅಂಗಡಿಗೆ ಹೋಗಿ ಪ್ರತಿ ಮಾಡಿಸುತ್ತಿದ್ದರು. ಆದರೆ ಸರಕಾರದ ಪಾಲಿಗೆ ದೈನಂದಿನ ಖರ್ಚು ಹೆಚ್ಚಾದಾಗ ಝೆರಾಕ್ಸ್‌ ಯಂತ್ರಗಳನ್ನೇ ನೀಡಲಾಯಿತು. ಆರಂಭದಲ್ಲಿ ಒಂದು ಯಂತ್ರ ನೀಡಿ ಅನಂತರ ವಿವಿಧ ಕಾರ್ಯನಿರ್ವಹಣೆ ಶಾಖೆಗಳಿಗೆ ಪ್ರತ್ಯೇಕ ಯಂತ್ರಗಳ ಆಗಮನವಾಯಿತು. ಆದರೆ ಯಂತ್ರ ಪೂರೈಸಿದ ಗುತ್ತಿಗೆದಾರ ಸಂಸ್ಥೆ ಅದನ್ನು ನಿರ್ವಹಣೆ ಮಾಡಲೇ ಇಲ್ಲ. ಪರಿಣಾಮ ಯಂತ್ರಗಳು ಕಾರ್ಯನಿರ್ವಹಣೆ ಸ್ಥಗಿತಗೊಳಿಸಿದವು. ಸಣ್ಣಪುಟ್ಟ ದುರಸ್ತಿಯನ್ನು ಸಿಬಂದಿ, ಅಧಿಕಾರಿ ಹಣ ಹಾಕಿ ಮಾಡಿಸುತ್ತಿದ್ದರು. ಆದರೆ ದೊಡ್ಡ ಮೊತ್ತದ ದುರಸ್ತಿ ಈ ಹಿಂದೊಮ್ಮೆ ಮಾಡಿಸಿದ್ದೂ ಇನ್ನೂ ಸರಕಾರದಿಂದ ಅನುದಾನ ಬಾರದೆ ಸಂಸ್ಥೆಗೆ ಪಾವತಿ ಆಗಿಲ್ಲ.

ಕಚೇರಿಗೆ ಅವಶ್ಯವಿದೆ
ನಾಗರಿಕರಿಗಷ್ಟೇ ಅಲ್ಲ, ತಾಲೂಕು ಕಚೇರಿಯ ಕೆಲಸ ಕಾರ್ಯಗಳಿಗೂ ಝೆರಾಕ್ಸ್‌ ಯಂತ್ರದ ಅಗತ್ಯವಿದೆ. ಅನೇಕ ಕಡತಗಳು, ದಾಖಲೆಗಳ ಪ್ರತಿ ತೆಗೆಯಲು ಅವಶ್ಯವಿದೆ. ಆದರೆ ಎಲ್ಲ ಕೆಲಸ ಕಾರ್ಯಗಳಿಗೂ ಖಾಸಗಿಯವರ ಮೊರೆ ಹೋಗುವುದು ಅನಿವಾರ್ಯ ಆಗಿದೆ.

ಸಾರ್ವಜನಿಕರು ಕೂಡ ಕಡತದ ನಕಲಿಗೆ ಬೇಡಿಕೆ ಸಲ್ಲಿಸಿದಾಗ ಖಾಸಗಿಯವರ ಮೂಲಕವೇ ನಕಲು ಮಾಡಿಸಿ ಕೊಡಬೇಕಾದ್ದು ಅನಿವಾರ್ಯ ಆಗಿದೆ. ಅಷ್ಟೂ ಯಂತ್ರಗಳನ್ನು ದುರಸ್ತಿ ಮಾಡಿಸಬೇಕೆನ್ನುವುದು ಸಾರ್ವಜನಿಕರ ಆಗ್ರಹ.

ಕಡತಗಳು ಹೊರಗೆ
ತಾಲೂಕು ಕಚೇರಿಯಲ್ಲಿ ಇರಬೇಕಾದ ಅಮೂಲ್ಯ ಕಡತಗಳ ನಕಲು ಪ್ರತಿ ಹೆಸರಿನಲ್ಲಿ ಹೊರಗೆ ಅಂಗಡಿಯಲ್ಲಿ ಕಾಣಿಸಿಕೊಳ್ಳತೊಡಗಿದೆ. ಈ ಬಗ್ಗೆ ಸಾರ್ವಜನಿಕರು ಆರೋಪಗಳನ್ನು ಕೂಡ ಮಾಡುತ್ತಿದ್ದಾರೆ. ಇಷ್ಟಲ್ಲದೇ ಈ ಅಮೂಲ್ಯ ಕಡತಗಳಿಂದ ಕಾಗದ ಪತ್ರಗಳು ಕಾಣೆಯಾದರೆ ಎಂಬ ಆತಂಕವನ್ನೂ ವ್ಯಕ್ತಪಡಿಸುತ್ತಾರೆ. ಝೆರಾಕ್ಸ್‌ ಯಂತ್ರಗಳು ಇಲ್ಲ ಎಂಬ ಕಾರಣದಿಂದ ಕೆಲವೊಂದು ಕೆಲಸ ಕಾರ್ಯಗಳೂ ವಿಳಂಬವಾಗುತ್ತಿವೆ ಎನ್ನುವ ಆರೋಪಗಳಿವೆ. ದಾಖಲೆಗಳ ನಕಲು ಪ್ರತಿಗಾಗಿ ಅರ್ಜಿ ಸಲ್ಲಿಸಿ ತಿಂಗಳಾನುಗಟ್ಟಲೆಯಿಂದ ಕಾಯುತ್ತಿರುವವರೂ ಇದ್ದಾರೆ. ಅದೇ ಒಳನುಸುಳುವ ಬಲದಿಂದ ತತ್‌ಕ್ಷಣ ನಕಲು ಪ್ರತಿ ಪಡೆಯುವವರೂ ಇದ್ದಾರೆ. ಜನಸಾಮಾನ್ಯರಿಗೆ ಇಂತಹ ನುಸುಳುವ ಒಳಸುಳಿಗಳು ಗೊತ್ತಿಲ್ಲ. ಆದ್ದರಿಂದ ತಿಂಗಳುಗಳು ಕಳೆದರೂ ಕಡತದ ಪ್ರತಿ ಸಿಗುತ್ತಿಲ್ಲ ಎಂಬ ಅಳಲು ಕೇಳಿ ಬರುತ್ತಿದೆ.

ಕಡತ ಕಾಣೆ ಭಯ
ಅಮೂಲ್ಯ ಕಡತಗಳು ಕಚೇರಿಯಿಂದ ಹೊರಗೆ ಬಂದು ಖಾಸಗಿಯವರ ಬಳಿ ಇದ್ದರೆ ಅದರಿಂದ ದಾಖಲೆಗಳು, ಹಾಳೆಗಳು ಕಾಣೆಯಾದರೆ ಯಾರು ಜವಾಬ್ದಾರಿ. ಸಾರ್ವಜನಿಕರ ದಾಖಲೆ ಹಾಗೂ ಸರಕಾರಿ ದಾಖಲೆಗಳು ಅನ್ಯರ ವಶದಲ್ಲಿ ಇರಬಾರದು. ಎಲ್ಲೆಂದರಲ್ಲಿ, ಯಾರೆಂದರೆ ಯಾರಧ್ದೋ ಬಳಿ ಕಡತಗಳು ಕಾಣಿಸುತ್ತಿವೆ. ಒಂದು ಝೆರಾಕ್ಸ್‌ ಯಂತ್ರ ದುರಸ್ತಿ ಮಾಡಿಸದಷ್ಟು ಸಮಸ್ಯೆಯಲ್ಲಿದೆಯೇ ಕಂದಾಯ ಇಲಾಖೆ?
-ಸತೀಶ್ಚಂದ್ರ ಶೆಟ್ಟಿ ವಕ್ವಾಡಿ, ಸಾರ್ವಜನಿಕರು

ಅನ್ಯರ ಕೈಗಿಲ್ಲ ಕಡತ
ಝೆರಾಕ್ಸ್‌ ಯಂತ್ರಗಳು ಹಾಳಾಗಿದ್ದು ಈ ಹಿಂದೆ ದುರಸ್ತಿ ಮಾಡಿಸಿದ ಅನುದಾನವೇ ಬಂದಿಲ್ಲ. ದುರಸ್ತಿಗೆ ಅನುದಾನಕ್ಕೆ ಬರೆಯಲಾಗಿದೆ. ಒಂದು ತಿಂಗಳಲ್ಲಿ ಸರಿಯಾಗಲಿದೆ. ಕಚೇರಿಯ ಯಾವುದೇ ಕಡತಗಳನ್ನು ಅನ್ಯರ ಕೈಗೆ ನೀಡುತ್ತಿಲ್ಲ. ಸರಿಯಾದ ವ್ಯಕ್ತಿಗಳೇ ನಿರ್ವಹಣೆ ಮಾಡುತ್ತಾರೆ. ಅಧಿಕೃತರ ಬಳಿ ಮಾತ್ರ ಇರುತ್ತವೆ. ಸಾರ್ವಜನಿಕರಿಗೆ ನಕಲು ನೀಡಬೇಕಾದ ಸರಕಾರಿ ಸಿಬಂದಿಯೇ ಅಂಗಡಿಗೆ ತೆರಳಿ ನಕಲು ಮಾಡಿಸಿ ಹಸ್ತಾಂತರಿಸುತ್ತಾರೆ ವಿನಾ ಕಡತ ಹಸ್ತಾಂತರಿಸುವುದಿಲ್ಲ.
-ಕಿರಣ್‌ ಗೌರಯ್ಯ, ತಹಶೀಲ್ದಾರ್‌, ಕುಂದಾಪುರ

ಟಾಪ್ ನ್ಯೂಸ್

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ

H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ

Mandya: ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲಕನ ಕತ್ತರಿಸಿ ಕೊ*ಲೆMandya: ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲಕನ ಕತ್ತರಿಸಿ ಕೊ*ಲೆ

Mandya: ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲಕನ ಕತ್ತರಿಸಿ ಕೊ*ಲೆ

ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್‌ ಆ್ಯಪ್‌: ಸದ್ಗುರು

Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್‌ ಆ್ಯಪ್‌: ಸದ್ಗುರು

ದೂರು ದಾಖಲಾಗದಿದ್ದರೆ ಬೆಳಗಾವಿ ಚಲೋ: ರವಿ

CT Ravi: ದೂರು ದಾಖಲಾಗದಿದ್ದರೆ ಬೆಳಗಾವಿ ಚಲೋ

Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್‌

Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

dw

Malpe: ಕಲ್ಮಾಡಿ; ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು

Brahmavar: ಕೊಕ್ಕರ್ಣೆ; ಜುಗಾರಿ ನಿರತನ ಬಂಧನ

Brahmavar: ಕೊಕ್ಕರ್ಣೆ; ಜುಗಾರಿ ನಿರತನ ಬಂಧನ

8

Kundapura: ಬೋಟ್‌ ರೈಡರ್‌ ನಾಪತ್ತೆ; ಸಿಗದ ಸುಳಿವು

13

Kundapura: ಮನೆಗೆ ನುಗ್ಗಿ ಚಿನ್ನಾಭರಣ ಕಳವು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

1-ronak

National Badminton: ರೋಣಕ್‌ ಚೌಹಾಣ್‌ ಸೆಮಿಗೆ

ICC

Champions Trophy: ದುಬಾೖಯಲ್ಲಿ ಭಾರತದ ಪಂದ್ಯಗಳು: ನಾಕೌಟ್‌ ಹಂತಕ್ಕೇರಿದರೆ?

H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ

H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.