1000 ಉದ್ಯೋಗ ಕಡಿತಕ್ಕೆ ಮುಂದಾದ ಟಾಟಾ ಮೋಟಾರ್ಸ್ ಒಡೆತನದ JLR ಸಂಸ್ಥೆ
ಲಾಕ್‌ಡೌನ್‌ನಿಂದಾಗಿ ಶೇ.30.9ರಷ್ಟು ಮಾರಾಟ ಪ್ರಮಾಣ ಕುಸಿತ
Team Udayavani, Jun 16, 2020, 4:53 PM IST
ಲಂಡನ್: ಲಾಕ್‌ಡೌನ್‌ನಿಂದಾಗಿ ನಷ್ಟದ ಸುಳಿಯಲ್ಲಿ ಸಿಲುಕಿರುವ ಕಂಪನಿಗಳು ಸಮಸ್ಯೆ ಪರಿಹಾರಕ್ಕಾಗಿ ಉದ್ಯೋಗ ಕಡಿತದ ಮಾರ್ಗ ಆಯ್ದುಕೊಂಡಿದ್ದು, ಈಗಾಗಲೇ ವಿಶ್ವದ್ಯಾಂತ ಲಕ್ಷಂತಾರ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಇದೀಗ ಟಾಟಾ ಮೋಟಾರ್ಸ್ ಒಡೆತನದ ಜಾಗ್ವಾರ್‌ಲ್ಯಾಂಡ್ ರೋವರ್(JLR), ಕೋವಿಡ್ ತಂದಿಟ್ಟಿರುವ ಬಿಕ್ಕಟ್ಟಿನ ಸನ್ನಿವೇಶದಿಂದಾಗಿ ಸುಮಾರು 1,000 ಗುತ್ತಿಗೆ ಆಧಾರದ ಏಜೆನ್ಸಿ ಉದ್ಯೋಗಗಳನ್ನು ಕಡಿತಗೊಳಿಸಲು ಯೋಜನೆ ರೂಪಿಸಿದೆ.
ಹೌದು ಲಾಕ್‌ಡೌನ್ ಜಾರಿಯಾದಗಿನಿಂದ ಮಾರಾಟ ಪ್ರಮಾಣದಲ್ಲಿ ಶೇ.30.9ರಷ್ಟು ಕುಸಿತ ಕಂಡುಬಂದಿದ್ದು, ಸಾಕಷ್ಟು ನಷ್ಟವನ್ನು ಅನುಭವಿಸಿದೆ. ಈ ನಿಟ್ಟಿನಲ್ಲಿ ಬ್ರಿಟನ್‌ನ ಅತಿ ದೊಡ್ಡ ವಾಹನ ತಯಾರಕ ಸಂಸ್ಥೆಯಾದ ಜೆಎಲ್‌ಆರ್ ಮುಂಬರುವ ತಿಂಗಳುಗಳಲ್ಲಿ ಕಂಪನಿಯು ತನ್ನ ಉತ್ಪಾದನಾ ಘಟಕಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗುತ್ತಿಗೆ (ಏಜೆನ್ಸಿ) ನೌಕರರ ಪ್ರಮಾಣವನ್ನು ಕಡಿತಗೊಳಿಸಲು ನಿರ್ಧರಿಸಿದೆ ಎಂದು ಕಂಪನಿ ಮೂಲಗಳು ತಿಳಿಸಿದೆ.
ಇನ್ನು ಈ ಕುರಿತು ಸಂಸ್ಥೆ ತನ್ನ ಅಭಿಪ್ರಾಯ ಹಂಚಿಕೊಂಡಿದ್ದು, ಕಾರ್ಯದಕ್ಷತೆ ಸುಧಾರಿಸುವ ನಿಟ್ಟಿನಲ್ಲಿ ಈ ನಿರ್ಧಾರಕ್ಕೆ ಬರಲಾಗಿದ್ದು, ಸುಸ್ಥಿರ ಬೆಳವಣಿಗೆಯನ್ನು ಸಕ್ರಿಯಗೊಳಿಸಲು ಮತ್ತು ವ್ಯವಹಾರದ ದೀರ್ಘಕಾಲಿಕ ಯಶಸ್ಸು ಕಾಪಾಡುವ ಮೂಲಕ ಕಾರ್ಯದಕ್ಷತೆಯನ್ನು ಮತ್ತಷ್ಟು ಸಾಧಿಸಲು ಈ ಕ್ರಮ ಕೈಗೊಳ್ಳುತ್ತಿದೆ ಎಂದು ತಿಳಿಸಿದೆ. ಬ್ರಿಟನ್ ನಲ್ಲಿರುವ ಎಲ್ಲ ಉತ್ಪಾದನಾ ಘಟಕಗಳಲ್ಲಿ ಉದ್ಯೋಗ ಕಡಿತಗೊಳಿಸುವ ಸಾಧ್ಯತೆ ಇದ್ದು, ಈ ಪ್ರಕ್ರಿಯೆಯು ಜುಲೈ ಕೊನೆಯಲ್ಲಿ ಪ್ರಾರಂಭವಾಗಿ ವರ್ಷದುದ್ದಕ್ಕೂ ಇರಲಿದೆ ಎಂದು ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.