ತೆರಿಗೆ ದುಪ್ಪಟ್ಟು: ಅಧಿಕಾರಿಗಳ ವಿರುದ್ಧ ಸಿಟ್ಟು

ಉಳಿಸಿಕೊಂಡಿರುವ ಆಸ್ತಿ ತೆರಿಗೆ ಬಾಕಿಗೂ ಬಡ್ಡಿ ; ವಲಯ ವಿಂಗಡಣೆಯಲ್ಲಿ ಅಧಿಕಾರಿಗಳಿಂದ ಗೊಂದಲ

Team Udayavani, Aug 20, 2021, 6:37 PM IST

ಸಾಂದರ್ಭಿಕ ಚಿತ್ರ..

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಕಂದಾಯ ಅಧಿಕಾರಿಗಳು ಆಸ್ತಿ ತೆರಿಗೆ ವಿಚಾರದಲ್ಲಿ ವಲಯ ವರ್ಗೀಕರಣ ಮಾಡಿ ತೆರಿಗೆ ಏರಿಕೆ ಮಾಡಿರುವ ಜತೆಗೆ ಬಡ್ಡಿಯ ಹೊರೆಯನ್ನೂ ಆಸ್ತಿದಾರರ ಮೇಲೆ ಹಾಕಿದ್ದಾರೆ.

ಮೂಲತಃ ಯಾವುದೇ ಆಸ್ತಿದಾರರು ಇಂತದ್ದೇ ವಲಯ ಬೇಕು ಎಂದು ಬಯಸಿರಲಿಲ್ಲ. ತಮ್ಮ ಆಸ್ತಿ ಯಾವ ವಲಯಕ್ಕೆ ಬರುತ್ತದೆ ಅದರಿಂದಾಗುವ
ಪ್ರಯೋಜನ ಏನು ಎಂಬುದು ಬಹುತೇಕ ಆಸ್ತಿದಾರರಿಗೆ ಗೊತ್ತೂ ಇಲ್ಲ. ಸತತ ಎರಡು ವರ್ಷದ ಕೋವಿಡ್‌ ಲಾಕ್‌ಡೌನ್‌ ಸಂಕಷ್ಟದಲ್ಲಿ ತೆರಿಗೆ ಮನ್ನಾ ನಿರೀಕ್ಷೆಯಲ್ಲಿದ್ದ ಆಸ್ತಿದಾರರಿಗೆ ಉಳಿಸಿಕೊಂಡಿರುವ ತೆರಿಗೆ ಬಾಕಿಗೂ ಬಡ್ಡಿ ಹಾಕಿ ಅಧಿಕಾರಿಗಳು ಶಾಕ್‌ ನೀಡಿದ್ದಾರೆ.

ಆಸ್ತಿ ತೆರಿಗೆ ಸಂಬಂಧ ಪಾಲಿಕೆ ಅಧಿಕಾರಿಗಳು ಎಬಿಸಿಡಿಇ ಹಾಗೂ ಎಫ್ ವಲಯಗಳಾಗಿ ವಿಂಗಡಣೆ ಮಾಡಿರುವುದು ಶ್ರೀಸಾಮಾನ್ಯರಿಗೆ ತಿಳಿಯುತ್ತಿಲ್ಲ. ಯಾರು, ಯಾವ ವಲಯಕ್ಕೆ ಸೇರುತ್ತಾರೆ ಎಂಬುವುದೇ ಜನರಿಗೆ ಗೊತ್ತಿಲ್ಲ. ಕೆಲವು ಆಸ್ತಿ ತೆರಿಗೆದಾರರು ತಾವು ಹಳೇ ವಲಯದಲೆಲ್ಲೇ ಇದ್ದೇವೆ ಎಂದು ಕೊಂಡಿರುತ್ತಾರೆ. ಈ ಬಗ್ಗೆ ಅನೇಕ ರೀತಿಯ ಗೊಂದಲಗಳಿವೆ.

ಇದನ್ನೂ ಓದಿ:ನನ್ನ ಕ್ಷೇತ್ರದ ಜನರ ನೆರವಿಗೆ ನಾನು ಸದಾ ಸಿದ್ಧ: ಆರ್ ಅಶೋಕ

ಕೆಎಂಸಿ ಕಾಯ್ದೆ ಪ್ರಕಾರ ಕೂಡ ‌ ಇದು ಕಾನೂನು ಬಾಹಿರ.ವರ್ಗೀಕರಣದ ಬಗ್ಗೆ ಜನರಿಗೆ ಪೂರ್ಣ ಪ್ರಮಾಣ ಮಾಹಿತಿಯನ್ನು ನೀಡಬೇಕಾಗಿತ್ತು ಎಂಬುದು ಮಾಜಿ ಮೇಯರ್‌ಗಳ ವಾದ.

ಪ್ರಸ್ತುತ ಬಿಬಿಎಂಪಿ ವ್ಯಾಪ್ತಿಯಲ್ಲಿ 16 ಲಕ್ಷಕ್ಕೂ ಹೆಚ್ಚು ವಸತಿ ಕಟ್ಟಡಗಳು, 23 ಸಾವಿರಕ್ಕೂ ಅಧಿಕ ವಸತಿ ಸಮುಚ್ಚಯಗಳು 1ಲಕ್ಷ 10 ಸಾವಿರ ಕ್ಕೂ ಅಧಿಕ ಕೈಗಾರಿಕಾ ಕಟ್ಟಡಗಳು, 3,758 ಐಟಿ ಸಂಸ್ಥೆಗಳು, 92 ಬಿಟಿ ಕಂಪನಿಗಳು, 2800ಕ್ಕೂ ಅಧಿಕ ಲಾಡ್ಜ್ ಗಳು , 640ಕ್ಕೂ ಹೆಚ್ಚು ಸ್ಟಾರ್‌ ಹೋಟೆಲ್‌ಗ‌ಳು, ಸೂಪರ್‌ ಸೆಷಾಲಿಟಿ ಆಸ್ಪತ್ರೆಗಳು, ಪಿಜಿ ಹಾಸ್ಟೆಲ್‌ ಗಳು, ಟೆಕ್‌ ಪಾರ್ಕ್‌ಗಳು, ಟೆಲಿಕಾಂ ಟವರ್‌ಗಳು ಸೇರಿದಂತೆ ‌ 3 ಲಕ್ಷಕ್ಕೂ ಅಧಿಕ ವಾಣಿಜ್ಯ ಕಟ್ಟಡಗಳಿವೆ.

ಈ ಎಲ್ಲ ಕಟ್ಟಡಗಳಿಂದ ನ್ಯಾಯಯುತವಾಗಿ ಆಸ್ತಿ ತೆರಿಗೆ ಸಂಗ್ರಹ ಮಾಡಿದರೆ ಪ್ರತಿ ವರ್ಷ ಸುಮಾರು 6 ಸಾವಿರ ಕೋಟಿ ರೂ.ಗೂ ಹೆಚ್ಚು ಆಸ್ತಿ ತೆರಿಗೆ ಸಂಗ್ರಹವಾಗಲಿದೆ. ಆದರೆ ಪಾಲಿಕೆ ಅಧಿಕಾರಿಗಳು ಆ ತೆರಿಗೆಯನ್ನು ವಸೂಲಿ ಮಾಡದೆ ವಲಯ ವರ್ಗೀಕರಣ ಹಾಗೂ ತೆರಿಗೆ ಪರಿಷ್ಕರಣೆ ಗೆ ಮುಂದಾಗಿರುವುದು ಪಕ್ಷಾತೀತವಾಗಿ ವಿರೋಧಕ್ಕೆ ಕಾರಣವಾಗಿದೆ.

ವಲಯ ವರ್ಗೀಕರಣ ವಿಚಾರದಲ್ಲಿ ಸಾರ್ವಜನಿಕರಲ್ಲಿ ತಿಳಿವಳಿಕೆ ಮೂಡಿಸಲು ಜಾಹೀರಾತು ನೀಡಬೇಕಿತ್ತು.ಆ ಕೆಲಸವನ್ನೂ ಅಧಿಕಾರಿಗಳು ಮಾಡಿಲ್ಲ ಎಂಬುದು ಆಸ್ತಿದಾರರ ಅಳಲು. ಪಾಲಿಕೆ ಅಧಿಕಾರಿಗಳ ಕಾರ್ಯ ವೈಖರಿ ಒಂದು ರೀತಿಯಲ್ಲಿ ತೊಘಲಕ್‌ ದರ್ಬಾರ್‌ದಂತೆ ಎಂದು ಪಾಲಿಕೆಯ ಮಾಜಿ ಸದಸ್ಯರು ಆಕ್ರೋಶ ಹೊರಹಾಕುತ್ತಾರೆ.

ಪಾಲಿಕೆ ವ್ಯಾಪ್ತಿಯಲ್ಲಿರುವ 80  ಸಾವಿರ ಕ್ಕೂ ಹೆಚ್ಚು ಆಸ್ತಿಗಳ ವಿಚಾರದಲ್ಲಿ ವಲಯ ವರ್ಗೀಕರಣ ಸಂಬಂಧಿತ  ವಿಷಯದಲ್ಲಿ ತಪ್ಪಾಗಿದೆ ಎಂಬ ವಿಷಯ ಮುಂದಿಟ್ಟುಕೊಂಡು 2016 ರಿಂದ ಸುಮಾರು ಐದು ವರ್ಷಗಳ ಆಸ್ತಿ ತೆರಿಗೆಗೆ ವಾರ್ಷಿಕ ಶೇ.24 ಬಡ್ಡಿದರ ವಿಧಿಸಿ, ಬಾಕಿ ತೆರಿಗೆ ವಿಧಿಸಲು ಕಂದಾಯಾಧಿಕಾರಿಗಳು ತೆರಿಗೆದಾರರಿಗೆ ನೋಟಿಸ್‌ ನೀಡುತ್ತಿರುವುದು ಸರಿಯಾದ ‌ ಕ್ರಮವಲ್ಲ ಎಂದು ಬೆಂಗಳೂರು ದಕ್ಷಿಣ ಬಿಜೆಪಿ ಘಟಕದ ಅಧ್ಯಕ್ಷ ಎನ್‌.ಆರ್‌. ರಮೇಶ್‌ ಹೇಳುತ್ತಾರೆ

ಕೋವಿಡ್‌ ಮತ್ತು ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಆಸ್ತಿ ಮಾಲೀಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆ ಹಿನ್ನೆಲೆಯಲ್ಲಿ ಆಸ್ತಿ ಮಾಲೀಕರಿಗೆ ರಿಯಾಯ್ತಿ ನೀಡುವ ಬಗ್ಗೆ ಮುಖ್ಯಮಂತ್ರಿಗಳ ಜತೆಗೆ ಚರ್ಚಿಸಲಾಗುವುದು.
-ಡಾ.ಸಿ.ಎನ್‌.ಅಶ್ವತ್ಥನಾರಾಯಣ,
ಉನ್ನತ ಶಿಕ್ಷಣ ಇಲಾಖೆ ಸಚಿವ

ಆಸ್ತಿ ತೆರಿಗೆ ವಿಚಾರದಲ್ಲಿ ಪಾಲಿಕೆ ಅಧಿಕಾರಿಗಳು ಗೊಂದಲ ಮೂಡಿಸುತ್ತಿದ್ದಾರೆ.ಸಾರ್ವಜನಿಕರಿಗೆ ಹೊರೆಯಾಗುವಂತಹ ತೀರ್ಮಾನ ತೆಗೆದು ಕೊಳ್ಳುವುದು ತಪ್ಪು. ಜನರಿಗೆ ಹೊರೆಯಾಗಿರುವ ದುಪ್ಪಟ್ಟು ಆಸ್ತಿ ತೆರಿಗೆ ಹಾಕುವ ನಿರ್ಧಾರವನ್ನು ಸರ್ಕಾರಕೂಡಲೇ ಹಿಂಪಡೆಯಬೇಕು.
– ರಾಮಲಿಂಗಾರೆಡ್ಡಿ, ಕೆಪಿಸಿಸಿ ಕಾರ್ಯಾಧ್ಯಕ್ಷ

ಪಾಲಿಕೆ ಅಧಿಕಾರಿಗಳು ಕೈಗೊಂಡಿರುವುದು ಕೆಎಂಸಿ ಕಾಯ್ದೆಗೆ ವಿರುದ್ಧ. ಜನಪ್ರತಿನಿಧಿಗಳು ಇಲ್ಲದ ಸಂದರ್ಭದಲ್ಲಿ ಇಂತಹ ತೀರ್ಮಾನ ಕೈಗೊಂಡಿರುವುದು ಯಾಕೆ ಎಂಬುದೇ ಅರ್ಥವಾಗುತ್ತಿಲ್ಲ. ಆಸ್ತಿ ತೆರಿಗೆ ಸಂಬಂಧ ಪಾಲಿಕೆ ಅಧಿಕಾರಿಗಳು ಎ.ಬಿ.ಸಿ.ಡಿ.ಇ ಹಾಗೂ ಎಫ್ ವಲಯ ಗಳಾಗಿ ವಿಂಗ ಡಣೆ ಮಾಡಿರುವುದು ಶ್ರೀ ಸಾಮಾನ್ಯರಿಗೆ ತಿಳಿಯುತ್ತಿಲ್ಲ.ಯಾರು,ಯಾವ ವಲಯಕ್ಕೆ ಸೇರುತ್ತಾರೆ ಎಂಬುವುದೇ ಜನರಿಗೆ ಗೊತ್ತಿಲ್ಲ.
-ಗಂಗಾಂಬಿಕೆ ಮಲ್ಲಿಕಾರ್ಜುನ್‌, ಮಾಜಿ ಮೇಯರ್‌

ಆಸ್ತಿ ತೆರಿಗೆ ವಿಚಾರ ಈಗಾಗಲೇಸರ್ಕಾರದ ಗಮನಕ್ಕೆ ತರಲಾಗಿದೆ.ಈ ಅವೈಜ್ಞಾನಿಕ ತೆರಿಗೆ ಪದ್ಧತಿಯನ್ನು ಪಾಲಿಕೆ ಹಿಂದಕ್ಕೆ ಪಡೆಯುವ ಸಾಧ್ಯತೆಇದೆ.
– ಪದ್ಮನಾಭ ರೆಡ್ಡಿ, ಪಾಲಿಕೆ ಮಾಜಿ ಸದಸ್ಯ

ಕೋವಿಡ್‌ ಸಂಕಷ್ಟದ ಸಮಯದಲ್ಲಿ ಪಾಲಿಕೆ ಅಧಿಕಾರಿಗಳು ಆಸ್ತಿ ತೆರಿಗೆ ವಿಚಾರದಲ್ಲಿ ವಲಯವಾರು ವಿಗಂಡಣೆ ಮಾಡಿ ಜನರಿಗೆ ತೊಂದರೆ ಕೊಡುವುದು ಸರಿಯಲ್ಲ. ಪಾಲಿಕೆ ಅಧಿಕಾರಿಗಳ ತಪ್ಪಿನಿಂದಾಗಿ ಸಾರ್ವಜನಿಕರಿಗೆ ದುಪ್ಪಟ್ಟು ತೆರಿಗೆ ಹಾಕುವುದು ಒಳ್ಳೆಯದಲ್ಲ.
-ನಟರಾಜ್‌, ಪಾಲಿಕೆಯ ಮಾಜಿ ಮೇಯರ್‌

– ದೇವೇಶ ಸೂರಗುಪ್ಪ

ಟಾಪ್ ನ್ಯೂಸ್

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Ullala-Auto-Accident

Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು

1-maha

Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?

MB-Patil-Mi

Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್‌

1-kir

All-party meet: ನಾಳೆಯಿಂದ ಚಳಿಗಾಲದ ಅಧಿವೇಶನ: ಸುಗಮಗೊಳಿಸಲು ಬಯಸಿದ ಸರಕಾರ

IPL Auction 2025: ಸೇಲ್‌ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..

IPL Auction 2025: ಸೇಲ್‌ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Commissioner: ಗೂಂಡಾ ವರ್ತನೆ ತೋರಿದರೆ ಕ್ರಮ; ಕಮಿಷನರ್‌ ಎಚ್ಚರಿಕೆ

Commissioner: ಗೂಂಡಾ ವರ್ತನೆ ತೋರಿದರೆ ಕ್ರಮ; ಕಮಿಷನರ್‌ ಎಚ್ಚರಿಕೆ

FIR: ಮಹಿಳಾ ಉದ್ಯಮಿ ಆತ್ಮಹತ್ಯೆ ಕೇಸ್‌: ಲೇಡಿ ಡಿವೈಎಸಿ ವಿರುದ್ಧ ಎಫ್ಐಆರ್‌

FIR: ಮಹಿಳಾ ಉದ್ಯಮಿ ಆತ್ಮಹತ್ಯೆ ಕೇಸ್‌: ಲೇಡಿ ಡಿವೈಎಸಿ ವಿರುದ್ಧ ಎಫ್ಐಆರ್‌

1

Arrested: ಉದ್ಯಮಿ ಅಪಹರಣ: ಪ್ರೇಯಸಿ ಸೇರಿ 7 ಮಂದಿ ಸೆರೆ

3-darshan

Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್‌: ಫೋಟೋ ಸಾಕ್ಷ್ಯ

10-bng

Bengaluru: ಠಾಣೆಯಲ್ಲಿ ಪೊಲೀಸ್‌ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್‌

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Chhattisgarh: ಐಇಡಿ ಸ್ಫೋ*ಟ: ಪೊಲೀಸ್‌ ಸಿಬ್ಬಂದಿಗೆ ಗಾಯ

Chhattisgarh: ಐಇಡಿ ಸ್ಫೋ*ಟ: ಪೊಲೀಸ್‌ ಸಿಬ್ಬಂದಿಗೆ ಗಾಯ

Ullala-Auto-Accident

Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು

Maharashtra Elections: 22 ಮಹಿಳೆ ಆಯ್ಕೆ, ವಿಪಕ್ಷದಿಂದ ಒಬ್ಬರೇ!

Maharashtra Elections: 21 ಮಹಿಳೆಯರು ಆಯ್ಕೆ, ವಿಪಕ್ಷದಿಂದ ಒಬ್ಬರೇ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.