![DKSHi-4](https://www.udayavani.com/wp-content/uploads/2025/02/DKSHi-4-415x234.jpg)
![DKSHi-4](https://www.udayavani.com/wp-content/uploads/2025/02/DKSHi-4-415x234.jpg)
Team Udayavani, Jun 8, 2021, 7:35 AM IST
ಆನ್‌ಲೈನ್ ಮೂಲಕ ತೆರಿಗೆ ಪಾವತಿ ವ್ಯವಸ್ಥೆಯನ್ನು ಮತ್ತಷ್ಟು ಸರಳಗೊಳಿಸುವ ಉದ್ದೇಶದಿಂದ ಕೇಂದ್ರ ಆದಾಯ ತೆರಿಗೆ ಇಲಾಖೆ, www.incometax.gov.in ಎಂಬ ಹೊಸ ಇ-ಫೈಲಿಂಗ್ ಪೋರ್ಟಲ್‌ಗೆ ಚಾಲನೆ ನೀಡಿದೆ. ಈವರೆಗೆ ತೆರಿಗೆ ಪಾವತಿಸಲು ಬಳಸಲಾಗುತ್ತಿದ್ದ www.incometaxindiaefiling.gov.in. ಪೋರ್ಟಲ್ ಬದಲಿಗೆ ಹೊಸ ಪೋರ್ಟಲ್ ಕಾರ್ಯನಿರ್ವಹಿಸಲಿದೆ.
ಬಳಕೆದಾರರ ಸ್ನೇಹಿ
ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ. ಐಟಿಆರ್ ಪ್ರಿಪರೇಷನ್ ಎಂಬ ಉಚಿತ ಸಾಫ್ಟ್ವೇರ್ ಆನ್‌ಲೈನ್ ಹಾಗೂ ಆಫ್ಲೈನ್‌ನಲ್ಲಿ ಲಭ್ಯವಿದೆ. ಅದರ ಸಹಾಯದಿಂದ ಅರ್ಜಿದಾರರು ಖುದ್ದಾಗಿ ತೆರಿಗೆ ರಿಟರ್ನ್ಸ್ ಗೆ ಅರ್ಜಿ ಸಲ್ಲಿಸಬಹುದು. ಇದರಿಂದ, ಐಟಿಆರ್ ಅರ್ಜಿ ಸಲ್ಲಿಕೆಯನ್ನು ಬೇರೊಬ್ಬರ ಬಳಿ ಮಾಡಿ ಅವರಿಗೆ ಶುಲ್ಕ ನೀಡುವುದು ತಪ್ಪುತ್ತದೆ.
ಯಾವ ಅರ್ಜಿಗಳನ್ನು ತುಂಬಬಹುದು?
ಐಟಿಆರ್ ಪ್ರಿಪರೇಷನ್ ಸಾಫ್ಟ್ ವೇರ್‌ನಿಂದ ಐಟಿಆರ್ 1, 4 ಅರ್ಜಿಗಳನ್ನು ಆನ್‌ಲೈನ್ ಹಾಗೂ ಆಫ್ಲೈನ್‌ನಲ್ಲಿ ತುಂಬಬಹುದು. ಐಟಿಆರ್ 2 ಅರ್ಜಿಯನ್ನು ಆಫ್ಲೈನ್‌ನಲ್ಲಿ ತುಂಬಬಹುದು. ಸದ್ಯದಲ್ಲೇ ಐಟಿಆರ್ 3,5,6,7 ಅರ್ಜಿಗಳನ್ನು ತುಂಬುವ ಸಾಫ್ಟ್ ವೇರ್ ವೆಬ್‌ಸೈಟ್‌ನಲ್ಲಿ ಬಿಡುಗಡೆಯಾಗಲಿದೆ.
ತೆರಿಗೆ ತುಂಬಲು ನಾನಾ ದಾರಿ
ತೆರಿಗೆದಾರರು ಸರಕಾರಕ್ಕೆ ಸಲ್ಲಿಸಬೇಕಿರುವ ತೆರಿಗೆಯನ್ನು ನೆಟ್‌ಬ್ಯಾಂಕಿಂಗ್ ಮೂಲಕ ತುಂಬಲು ಅವಕಾಶ ಕಲ್ಪಿಸಲಾಗಿದೆ. ಅದರ ಜೊತೆಗೆ, ಯುಪಿಐ, ಕ್ರೆಡಿಟ್ ಕಾರ್ಡ್, ಆರ್‌ಟಿಜಿಎಸ್/ಎನ್‌ಇಎಫ್ಟಿ ಮಾರ್ಗಗಳ ಮೂಲಕವೂ ತೆರಿಗೆ ತುಂಬಬಹುದು.
ಸಿಂಗಲ್ ಡ್ಯಾಶ್‌ಬೋರ್ಡ್
ಅರ್ಜಿ ಅಪ್‌ಲೋಡಿಂಗ್, ಟ್ರ್ಯಾಂಕಿಂಗ್, ಅರ್ಜಿಗಳ ಸದ್ಯದ ಸ್ಥಿತಿ-ಗತಿ… ಇವೆಲ್ಲವನ್ನೂ ಒಂದೇ ಡ್ಯಾಶ್‌ಬೋರ್ಡ್‌ನಡಿ ಗಮನಿಸಬಹುದು. ಇದರಿಂದ, ತೆರಿಗೆದಾರರ ಸಮಯ ಉಳಿತಾಯವಾಗುತ್ತದೆ.
ವಿಚಾರ ವಿನಿಮಯಕ್ಕೆ ಅವಕಾಶ
ರಿಟರ್ನ್ಸ್ ಸಲ್ಲಿಕೆಯಲ್ಲಿ ಗೊಂದಲವಿದ್ದರೆ, ವೆಬ್‌ಸೈಟ್‌ನ ಪದೇ ಪದೇ ಕೇಳಲಾಗುವ ಪ್ರಶ್ನೆಗಳು (ಎಫ್ಎಕ್ಯು) ಎಂಬ ಟ್ಯಾಬ್ ನಿಮ್ಮ ಸಹಾಯಕ್ಕೆ ಬರುತ್ತದೆ. ಇದೇ ಅಂಶಗಳುಳ್ಳ ವೀಡಿಯೋ ಕ್ಲಿಪ್ ಇದೆ. ಟುಟೋರಿಯಲ್‌ಗಳಿವೆ, ಗ್ರಾಹಕರ ಸೇವಾ ಸಂಖ್ಯೆಗಳಿವೆ ಹಾಗೂ ತಜ್ಞರೊಂದಿಗೆ ನೇರವಾಗಿ ಗೊಂದಲಗಳನ್ನು ಪರಿಹರಿಸಿಕೊಳ್ಳಲು ಚಾಟ್‌ಬಾಕ್ಸ್ ಅನುಕೂಲವಿದೆ.
ಗಮನಿಸಬೇಕಾದ ಅಂಶಗಳು:
– ಟಿಡಿಎಸ್, ಎಸ್‌ಎಫ್ಟಿ ದಾಖಲೆಗಳು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಆಗಲಿದ್ದು, ಆನಂತರವಷ್ಟೇ ತೆರಿಗೆ ಪಾವತಿಗೆ ಜೂ. 18ರ ನಂತರ ಅವಕಾಶ ಸಿಗಲಿದೆ.
– ಸದ್ಯದಲ್ಲೇ ಈ ವೆಬ್‌ಸೈಟ್‌ನ ಮೊಬೈಲ್ ಆ್ಯಪ್ ಕೂಡ ಲಭ್ಯವಾಗಲಿದ್ದು, ಅದನ್ನೂ ಬಳಕೆದಾರರ ಸ್ನೇಹಿಯನ್ನಾಗಿ ಮಾರ್ಪಾಟು ಮಾಡಿ ಮೊಬೈಲ್ ಮೂಲಕವೇ ತೆರಿಗೆ ಸಲ್ಲಿಸುವಂಥ ಸರಳ ಅವಕಾಶ ಮಾಡಿಕೊಡಲಾಗುತ್ತದೆ.
Stock market :ವಿದೇಶಿ ಬಂಡವಾಳ ಹಿಂತೆಗೆತ: ಸತತ 8ನೇ ದಿನವೂ ಸೆನ್ಸೆಕ್ಸ್ ಕುಸಿತ
New Income Tax Bill: ಹೊಸ ಆದಾಯ ತೆರಿಗೆ ಮಸೂದೆ ಮಂಡಿಸಿದ ಕೇಂದ್ರ ವಿತ್ತ ಸಚಿವೆ
Less Burden: ಆರ್‌ಬಿಐ ರೆಪೋ ದರ ಕಡಿತದ ಬೆನ್ನಲ್ಲೇ ಗೃಹ ಸಾಲಗಳಿಗೂ ರಿಲೀಫ್
Stock Market: ಷೇರುಪೇಟೆ ಸೂಚ್ಯಂಕ 448 ಅಂಕ ಏರಿಕೆ; ಜಿಗಿತಕ್ಕೆ ಈ 3 ಅಂಶಗಳು ಕಾರಣ!
Gold-Silver: ಬೆಂಗಳೂರಲ್ಲಿ 10 ಗ್ರಾಂ ಚಿನ್ನಕ್ಕೆ 710 ರೂ. ಇಳಿಕೆ, ಬೆಳ್ಳಿ ಏರಿಕೆ
You seem to have an Ad Blocker on.
To continue reading, please turn it off or whitelist Udayavani.