ಶಿಕ್ಷಕರಿಗೆ ಹುದ್ದೆ ಮರುಹೊಂದಾಣಿಕೆ ತೂಗುಗತ್ತಿ; ಕಡಿಮೆ ಮಕ್ಕಳ ಶಾಲೆ ಮುಚ್ಚಲು ಅನುಕೂಲ
ಹುದ್ದೆ ಸಹಿತ ಎತ್ತಂಗಡಿಯಾಗುವ ಕಳವಳ
Team Udayavani, Apr 18, 2022, 7:20 AM IST
Teacher ,assignment ,assignment ,ಶಿಕ್ಷಕರಿಗೆ ಹುದ್ದೆ,ಕಡಿಮೆ ಮಕ್ಕಳ ಶಾಲೆ
ಉಡುಪಿ: ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇರುವ ಸರಕಾರಿ ಶಾಲೆಗಳ ಶಿಕ್ಷಕರಿಗೆ ಈಗ ಮರು ಹೊಂದಾಣಿಕೆಯ ಆತಂಕ ಆರಂಭವಾಗಿದೆ. ಸಾರ್ವಜನಿಕ ಶಿಕ್ಷಣ ಇಲಾಖೆ ಇದೇ ಮೊದಲ ಬಾರಿಗೆ ಶಿಕ್ಷಕರ ಹುದ್ದೆಗಳ ಮರು ಹೊಂದಾಣಿಕೆಗೆ ಮುಂದಾಗಿದ್ದು, ಈ ಸಂಬಂಧ ಆದೇಶ ಹೊರಡಿ ಸಿದೆ. ಎಪ್ರಿಲ್ ಅಂತ್ಯದೊಳಗೆ ಪ್ರಕ್ರಿಯೆ ಆರಂಭ ವಾಗಲಿದೆ. ವಿದ್ಯಾರ್ಥಿಗಳ ಸಂಖ್ಯೆ ತೀರಾ ಕಡಿಮೆ ಅಥವಾ ಶೂನ್ಯಕ್ಕೆ ಇಳಿದಿರುವ ಸರಕಾರಿ ಶಾಲೆಗಳ ಪಟ್ಟಿ ಇಲಾಖೆಯಲ್ಲಿ ಸಿದ್ಧವಾಗಿದೆ.
ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದ್ದು, ಶಿಕ್ಷಕರ ಸಂಖ್ಯೆ ಹೆಚ್ಚಿದ್ದರೆ ಈವರೆಗೆ ಅಂತಹ ಶಾಲೆಯ ಶಿಕ್ಷಕರನ್ನು ನಿಯೋಜನೆ ಮೇಲೆ ಬೇರೆಡೆಗೆ ಕಳುಹಿಸಲಾಗುತ್ತಿತ್ತು. ಈಗ ಹುದ್ದೆಯನ್ನೇ ಕಡಿಮೆ ಮಾಡಲು ಅಥವಾ ಅಗತ್ಯವಿರುವ ಶಾಲೆಗೆ ವರ್ಗಾಯಿಸಲು ಇಲಾಖೆ ಕ್ರಮ ಕೈಗೊಂಡಿದೆ. ಇದರಿಂದ ಶಿಕ್ಷಕರಿಗೆ ಸಮಸ್ಯೆಯಾದರೆ ಮಕ್ಕಳ ಕೊರತೆ ಎದುರಿಸುತ್ತಿರುವ ಶಾಲೆಗಳನ್ನು ಸುಲಭ ವಾಗಿ ಮುಚ್ಚಲು ಸರಕಾರಕ್ಕೆ ಅನುಕೂಲವಾಗಲಿದೆ.
ಪ್ರಕ್ರಿಯೆ ಹೇಗಿರಲಿದೆ?
ಶಾಲೆಯ ವಿದ್ಯಾರ್ಥಿಗಳಿಗೆ ಅನುಗುಣವಾಗಿ ವಿಷಯ ಶಿಕ್ಷಕರು, ಭಾಷಾ ಶಿಕ್ಷಕರು, ಮುಖ್ಯ ಶಿಕ್ಷಕರು, ಚಿತ್ರಕಲಾ, ಸಂಗೀತ ಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆಯ ಮರುಹೊಂದಾಣಿಕೆಗೆ ಪ್ರತ್ಯೇಕ ಮಾನದಂಡ ರೂಪಿಸಲಾಗಿದೆ. ಮೊದ ಲಿಗೆ ವಲಯ, ತಾಲೂಕು, ಜಿಲ್ಲೆ, ವಿಭಾ ಗೀಯ ಹಂತದಲ್ಲಿ ಮರು ಹೊಂದಾಣಿಕೆ ಆಗಲಿದೆ. ಅದರಂತೆ ತಾಲೂಕಿನಲ್ಲಿ ಹುದ್ದೆ ಖಾಲಿ ಯಿದ್ದು, ಶಾಲೆ ಲಭ್ಯವಿಲ್ಲದಿದ್ದರೆ ಜಿಲ್ಲೆಗೆ ವರ್ಗಾ ಯಿಸ ಲಾಗುತ್ತದೆ.
ಜಿಲ್ಲೆಯಲ್ಲಿ ಶಾಲೆ ಲಭ್ಯವಿಲ್ಲದಿದ್ದರೆ ವಿಭಾಗಕ್ಕೆ ಹಂಚಿಕೆ ಮಾಡಲಾಗುತ್ತದೆ. ಅಂದರೆ ಶಿಕ್ಷಕ ಹುದ್ದೆ ಸಹಿತ ಒಂದು ತಾಲೂಕಿನಿಂದ ಇನ್ನೊಂದು ತಾಲೂಕು, ಜಿಲ್ಲೆ ಅಥವಾ ವಿಭಾಗಕ್ಕೆಹೋಗಬೇಕಾಗುತ್ತದೆ. ತಾಲೂಕು ಹಂತ
ದಿಂದ ಪ್ರಕ್ರಿಯೆ ಆರಂಭ ವಾಲಿದೆ.
ವರ್ಗಾವಣೆಗೆ ಪೂರಕ
ಹುದ್ದೆಗಳ ಮರುಹೊಂದಾಣಿಕೆ ಯಿಂದ ವರ್ಗಾವಣೆ ಪ್ರಕ್ರಿಯೆಗೆ ಅನುಕೂಲವಾಗುತ್ತದೆ. ವರ್ಗಾ ವಣೆಗೆ ಮುನ್ನ ಹೆಚ್ಚುವರಿ ಶಿಕ್ಷಕರಿಗೆ ಸ್ಥಳ ಗುರುತಿಸುವ ಪ್ರಕ್ರಿಯೆ ಇರುತ್ತದೆ. ಮರುಹೊಂದಾಣಿಕೆಯಿಂದಾಗಿ ಖಾಲಿ ಹುದ್ದೆಗಳು ಹೆಚ್ಚಲಿವೆ. ಇದರಿಂದ ವರ್ಗಾವಣೆ ವೇಳೆ ಶಿಕ್ಷಕರಿಗೆ ಹೆಚ್ಚು ಅನುಕೂಲವಾಗುತ್ತದೆ.
ಶಿಕ್ಷಕರಿಗೆ ಆತಂಕ ಯಾಕೆ?
ಇಲಾಖೆಯ ಈ ಕ್ರಮದಿಂದ ಹಲವು ಶಿಕ್ಷಕರಲ್ಲಿ ಆತಂಕ ಮೂಡಿದೆ. ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಶಾಲೆಯನ್ನು ಹುದ್ದೆ ಸಮೇತ ತ್ಯಜಿಸಬೇಕಾಗುತ್ತದೆ. ವರ್ಗಾವಣೆ ಪ್ರಕ್ರಿಯೆಗೂ ಇದಕ್ಕೂ ಸಂಬಂಧ ಇಲ್ಲ. ಅನಿವಾರ್ಯವಾಗಿ ಬೇರೆ ಕಡೆಗೆ ಹೋಗಬೇಕಾದೀತು ಎಂಬ ಆತಂಕ ಶಿಕ್ಷಕರದ್ದಾಗಿದೆ. ಮಕ್ಕಳ ಸಂಖ್ಯೆ ಕಡಿಮೆ ಇರುವ ಶಾಲೆಗಳನ್ನು ಮುಚ್ಚಲು ಸಾಧ್ಯವಿಲ್ಲ. ಹುದ್ದೆಯ ಮರು ಹೊಂದಾಣಿಕೆ ಮಾಡಿದಾಗ ಮಕ್ಕಳನ್ನು ಬೇರೆ ಶಾಲೆಗೆ ಸ್ಥಳಾಂತರಿಸಬಹುದು. ಹೊಸ ಹುದ್ದೆಯ ಸೃಷ್ಟಿಗೆ ಆರ್ಥಿಕ ಇಲಾಖೆಯ ಅನುಮತಿ ಬೇಕಾ ಗುತ್ತದೆಯಾದರೂ ಅದನ್ನು ಹೇಗೆ ನಿಭಾಯಿಸಲಾಗುತ್ತದೆ ಎಂಬುದರ ಸ್ಪಷ್ಟತೆಯಿಲ್ಲ ಎಂದು ಶಿಕ್ಷಕರು ಅಸಮಾಧಾನ ಹೊರಹಾಕಿದ್ದಾರೆ.
-ರಾಜು ಖಾರ್ವಿ ಕೊಡೇರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.