ವಸತಿ ಪ್ರದೇಶಕ್ಕೆ ತೆರಳಿ ಮಕ್ಕಳ ಕಲಿಕೆಗೆ ಶ್ರಮಿಸುತ್ತಿರುವ ಶಿಕ್ಷಕರು ಅಭಿನಂದನಾರ್ಹರು
Team Udayavani, Sep 5, 2020, 11:49 AM IST
ಶಾಲೆಯಲ್ಲಿ ಕುಳಿತು ರಜೆಗಾಗಿ ಹಂಬಲಿಸುತ್ತಿದ್ದ ಮಕ್ಕಳು ಈಗ ಶಾಲೆ ಪ್ರಾರಂಭ ಯಾವಾಗ ಎಂದು ಕಾಯುವ ಪರಿಸ್ಥಿತಿ ತಂದೊಡ್ಡಿದೆ ಕೋವಿಡ್ 19. ಮಕ್ಕಳ ಕಲರವವಿಲ್ಲದೆ ಭಣಗುಟ್ಟುವ ಶಾಲೆಯಲ್ಲಿ ಕುಳಿತು ತಂತ್ರಜ್ಞಾನ ಮೂಲಕ ಮಕ್ಕಳಿಗೆ ಶಿಕ್ಷಣ ಒದಗಿಸುವ ಪ್ರಯತ್ನ ಶಿಕ್ಷಕರದು.
ಮಕ್ಕಳಿಗೆ ಮೊಬೈಲ್ ಕೊಡಬೇಡಿ, ಟಿವಿ ನೋಡಬೇಡಿ ಎನ್ನುತ್ತಿದ್ದ ಶಿಕ್ಷಕರೇ ಇಂದು ಕಲಿಕಾ ಸಾಮಗ್ರಿಗಳಾಗಿ ಮಕ್ಕಳಿಗೆ ಮೊಬೈಲ್, ದೂರದರ್ಶನ ವ್ಯವಸ್ಥೆ ಮಾಡಿ ಎಂದು ಪೋಷಕರಲ್ಲಿ ವಿನಂತಿ ಮಾಡಬೇಕಾದ ಸಂದರ್ಭ ಬಂದಿರುವುದು ವಿಪರ್ಯಾಸ. ಪೋಷಕರಿಗೆ ಮಕ್ಕಳ ಕಲಿಕೆಯ ಕಡೆಗೆ ಗಮನ ಕೊಡುವುದರ ಜೊತೆಗೆ ಮೊಬೈಲ್ ಹಿಡಿದ ಮಕ್ಕಳು ವೀಡಿಯೊ ಗೇಮ್, ಇಂಟರ್ ನೆಟ್, ಸಾಮಾಜಿಕ ಜಾಲತಾಣಗಳ ಪ್ರಭಾವಕ್ಕೆ ಒಳಗಾಗದಂತೆ ನೋಡಿಕೊಳ್ಳುವ ಹೊಣೆಗಾರಿಕೆ ಹೆಗಲೇರಿದೆ.
ನಿನ್ನೆ ಮೊನ್ನೆಯ ತನಕ ವಾಟ್ಸ್‌ಪ್‌ನಲ್ಲಿ ಸಂದೇಶ ಕಳಿಸಲು, ಮೊಬೈಲ್‌ನಲ್ಲಿ ಫೋಟೋ ತೆಗೆದು ಕಳಿಸಲು ಕಷ್ಟಪಡುತ್ತಿದ್ದ ಶಿಕ್ಷಕರು ಇಂದು ಮೊಬೈಲ್ ಮೂಲಕ ಆಡಿಯೋ, ವೀಡಿಯೋ ರೆಕಾರ್ಡ್ ಮಾಡಿ ಕಳಿಸುವುದು, ಆನ್ ಲೈನ್ ಪಾಠ, ವೆಬಿನಾರ್‌ಗಳಲ್ಲಿ ಭಾಗವಹಿಸುವುದು, ಮೊಬೈಲ್ ಮೂಲಕವೇ ಮಕ್ಕಳ ಕಲಿಕೆಗೆ ಪೂರಕ ವಿವಿಧ ವಿಧಾನ ಅಳವಡಿಸುವುದು ಮೊದಲಾದವುಗಳನ್ನು ಕರಗತ ಮಾಡಿಕೊಂಡಿದ್ದಾರೆ. ಕೋವಿಡ್ ಸಂಕಷ್ಟ ಶಿಕ್ಷಕರಿಗೆ ತಂತ್ರಜ್ಞಾನ ಆಧಾರಿತ ಶಿಕ್ಷಣ ನೀಡುವಲ್ಲಿ ಪರಿಣತಿ ಹೊಂದುವಂತೆ ಮಾಡಿರುವುದು ಧನಾತ್ಮಕ ಬೆಳವಣಿಗೆ. ವಿದ್ಯಾಗಮ ಯೋಜನೆಯಡಿ ಮೊಬೈಲ್, ಟಿವಿ ಮೊದಲಾದ ಯಾವುದೇ ಸಾಧನಗಳಿಲ್ಲದ ವಿದ್ಯಾರ್ಥಿಗಳ ವಸತಿ ಪ್ರದೇಶಕ್ಕೆ ಹೋಗಿ ಮಕ್ಕಳ ಕಲಿಕೆ ನಿರಂತರವಾಗಿರುವಂತೆ ಶ್ರಮಿಸುತ್ತಿರುವ ಶಿಕ್ಷಕರು ನಿಜಕ್ಕೂ ಅಭಿನಂದನಾರ್ಹರು.
ಬಿಡುವಿಲ್ಲದ ಪಾಠ ಪ್ರವಚನ, ಮಧ್ಯೆ ಆಟೋಟ, ಸ್ನೇಹಿತರೊಂದಿಗೆ ಹರಟೆ, ಕೀಟಲೆ, ಜಗಳ, ಬಿಸಿಯೂಟ ಇವುಗಳಿಂದ ವಂಚಿತರಾದ ಮಕ್ಕಳಿಗೆ ಶಾಲಾ ಶಿಕ್ಷಣದ ಮಹತ್ವ ಅರಿವಾಗಿರಬೇಕು. ಮಕ್ಕಳ ದೈಹಿಕ, ಮಾನಸಿಕ, ಬೌದ್ಧಿಕ ವಿಕಸನ, ಜೀವನದಲ್ಲಿ ಪರಸ್ಪರ ಸಹಕಾರ, ಸಹಬಾಳ್ವೆ, ವಿವಿಧ ಕೌಟುಂಬಿಕ ಪರಿಸರದಿಂದ ಬಂದ ಮಕ್ಕಳೊಂದಿಗೆ ಹೊಂದಾಣಿಕೆಯ ಮನೋಭಾವ ಇವೆಲ್ಲವೂ ಶಾಲಾ ಶಿಕ್ಷಣದಲ್ಲಿ ಕಲಿಕೆಯ ಜೊತೆಜೊತೆಗೆ ನಡೆಯುತ್ತದೆೆ. ಆರೋಗ್ಯಕರ ಸ್ಪರ್ಧೆ ಮಕ್ಕಳಲ್ಲಿ ಕಲಿಕೆಯ ಉತ್ಸಾಹ ಹೆಚ್ಚಿಸುತ್ತದೆ. ಶಿಕ್ಷಕ – ವಿದ್ಯಾರ್ಥಿಗಳ ನಡುವೆ ಗೌರವ, ಭಯ ಮಿಶ್ರಿತ ಆತ್ಮೀಯ ಭಾವಬಂಧ ಬೆಳೆಯುತ್ತದೆ. ಆದುದರಿಂದ ಕೋವಿಡ್ 19 ನಿಯಂತ್ರಿಸುವಲ್ಲಿ ಯಶಸ್ಸು ದೊರೆತು ಜನಜೀವನ, ಶಾಲಾಜೀವನ ಎಂದಿನಂತಾಗಲಿ, ಮಕ್ಕಳ ಚಿಲಿಪಿಲಿ ಶಾಲೆ ಶಾಲೆಗಳಲ್ಲಿ ಅನುರಣಿಸಲಿ ಎಂಬುದೇ ನಮ್ಮೆಲ್ಲರ ಹಾರೈಕೆ.
– ನಿರ್ಮಲ ಬಿ
ಮುಖ್ಯೋಪಾಧ್ಯಾಯಿನಿ . ಸರಕಾರಿ ಸಂಯುಕ್ತ ಪ್ರೌಢಶಾಲೆ, ವಳಕಾಡು, ಉಡುಪಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಕ್ಕಳ ಜತೆಗೆ ಶಿಕ್ಷಕರಿಗೂ ಆನ್ ಲೈನ್ ಕ್ಲಾಸ್ ಎಂಬ ಹೊಸ ಅನುಭವ
ವಿದ್ಯಾರ್ಥಿಗಳ ನೇರ ಒಡನಾಟವಿಲ್ಲದೇ ವೃತ್ತಿ ಜೀವನ ಬೇಸರವೆನಿಸಿದೆ
ಈಗ ಶಾಲಾ ಕಾಲೇಜುಗಳಲ್ಲಿ ಎಲ್ಲರ ಬಾಯಲ್ಲೂ ಆನ್ ಲೈನ್ ತರಗತಿಗಳದ್ದೇ ವಿಚಾರ
ಮಕ್ಕಳೊಂದಿಗೆ ಇದ್ದು ಪಾಠ ಮಾಡುವ ಖುಷಿ ಆನ್ ಲೈನ್ ಕ್ಲಾಸ್ ನಲ್ಲಿ ಸಿಗಲ್ಲ..!
ಉತ್ತಮ ಶಿಕ್ಷಕರ ನೆನಪಲ್ಲಿ: ಬಡತನದ ಬವಣೆಯಲ್ಲಿ ಗೆದ್ದು ಗುರುವಾದ ಭೀಮಣ್ಣ ಸಜ್ಜನ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.