![1-sidda](https://www.udayavani.com/wp-content/uploads/2025/02/1-sidda-415x281.jpg)
![1-sidda](https://www.udayavani.com/wp-content/uploads/2025/02/1-sidda-415x281.jpg)
Team Udayavani, Jan 5, 2024, 12:41 AM IST
ಮಂಗಳೂರು: ಟೀಂ ಮಂಗಳೂರು ನೇತೃತ್ವದಲ್ಲಿ ಮಂಗಳೂರಿನಲ್ಲಿ ಬೃಹತ್ ಗಾಳಿಪಟ ತಯಾರಿ ಕೆಲಸ ನಡೆಯುತ್ತಿದೆ. ಮುಂಬರುವ ಗಾಳಿಪಟ ಉತ್ಸವಗಳಲ್ಲಿ ಭಾಗಿಯಾಗಲು ಅಶೋಕನಗರ ಬಳಿಯ ಹೊಗೆಬೈಲ್ ಸಮೀಪ ಕಥಕ್ಕಳಿ ಗಾಳಿಪಟ ತಯಾರಿಸಲಾಗುತ್ತಿದೆ.
12 ಅಡಿ ಅಗಲ, 38 ಅಡಿ ಉದ್ದದ ಬೃಹತ್ ಗಾಳಿಪಟ ಇನ್ನೇನು ಕೆಲ ದಿನಗಳಲ್ಲಿ ರೆಡಿಯಾಗಲಿದೆ. 6 ಮಂದಿಯ ತಂಡ ಈ ಕೆಲಸದಲ್ಲಿ ನಿರತವಾಗಿದ್ದು, ತಯಾರಿಸಲು ಬಿದಿರು, ಇಂಗ್ಲೆಂಡ್‌ನ ರಿಪ್ ಸ್ಟಾಪ್ ನೈಲಾನ್ ಫ್ಯಾಬ್ರಿಕ್ ಬಳಕೆ ಮಾಡಲಾಗಿದೆ.
ಟೀಂ ಮಂಗಳೂರು ಸ್ಥಾಪಕ ಸರ್ವೇಶ್ ರಾವ್ “ಉದಯವಾಣಿ’ಗೆ ಪ್ರತಿಕ್ರಿಯಿಸಿ, “ಬೃಹತ್ ಗಾಳಿಪಟಕ್ಕೆ ಯಾವುದೇ ರೀತಿಯ ಪೈಂಟಿಂಗ್ ಬಳಕೆ ಮಾಡಿಲ್ಲ. ಬದಲಾಗಿ ಆ್ಯಪ್ಲಿಕ್ ಕಸೂತಿ ಮಾಡಿದ್ದೇವೆ. ಕೊನೆಯ ಹಂತದ ಕೆಲಸ ಆಗುತ್ತಿದ್ದು, ಬಳಿಕ ಪ್ರಾಯೋಗಿಕವಾಗಿ ಹಾರಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ತೆಲಂಗಾಣದಲ್ಲಿ ಗಾಳಿಪಟ ಉತ್ಸವ ಇದ್ದು, ಅಲ್ಲಿ ಭಾಗವಹಿಸುತ್ತಿದ್ದೇವೆ. ಹೊಸದಿಲ್ಲಿ ಮತ್ತು ಗುಜರಾತ್ ಗಾಳಿಪಟ ಉತ್ಸವದಲ್ಲಿ ಭಾಗಿಯಾಗಲು ಆಹ್ವಾನ ಬಂದಿದೆ’ ಎಂದಿದ್ದಾರೆ.
You seem to have an Ad Blocker on.
To continue reading, please turn it off or whitelist Udayavani.