ನೀರಿನ ಗುಣಮಟ್ಟದ ಪರಿಹಾರಗಳಿಗಾಗಿ ಟೆಕ್ ಚಾಲೆಂಜ್
Team Udayavani, May 14, 2020, 7:30 PM IST
ಮಣಿಪಾಲ: ಯಾವುದೇ ಸಮಸ್ಯೆ ಎಷ್ಟೇ ದೊಡ್ಡದಾದರೂ ಮುಕ್ತ ಆವಿಷ್ಕಾರದಿಂದ ಅದಕ್ಕೊಂದು ಪರಿಹಾರ ಕಂಡುಕೊಳ್ಳುವುದು ಸಾಧ್ಯ. ಅಂತಹದ್ದೇ ಆವಿಷ್ಕಾರ ಕುಸಿಯುತ್ತಿರುವ ನೀರಿನ ಗುಣಮಟ್ಟದ ಕುರಿತೂ ಆಗಬೇಕಿರುವುದು ತುರ್ತು ಅಗತ್ಯವಾಗಿದೆ. ಜಾಗತಿಕವಾಗಿ ನೀರಿನ ಗುಣಮಟ್ಟ ಕುಸಿತದಿಂದಾಗಿ ಆರೋಗ್ಯ, ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆಗಳನ್ನು ಉಂಟಾಗುತ್ತಿದೆ. ಇದಕ್ಕಾಗಿ ಭಾರತದ ಕ್ಯಾಪ್ಜೆಮಿನಿಯ ಕಂಪೆನಿಯು ಟೆಕ್ ಚಾಲೆಂಜ್ ನೀಡಿ ತಾಂತ್ರಿಕವಾಗಿ ಈ ಸಮಸ್ಯೆಯನ್ನು ಹೇಗೆ ಪರಿಹರಿಸಬಹುದೆಂದು ಮಾರ್ಗಸೂಚಿಗಳನ್ನು ಒದಗಿಸಿದೆ.
ಯುನೆಸ್ಕೋ ಪ್ರಕಾರ, ವಿಶ್ವಾದ್ಯಂತ ಒಂಬತ್ತು ಜನರಲ್ಲಿ ಒಬ್ಬರು ಕುಡಿಯಲು ಯೋಗ್ಯವಲ್ಲದ ನೀರನ್ನು ಬಳಸುತ್ತಾರೆ ಮತ್ತು 2.4 ಬಿಲಿಯನ್ ಜನರು ಯಾವುದೇ ರೀತಿಯ ಶುದ್ಧ ನೀರಿನ ಹಂಗೇ ಇಲ್ಲದೆ ವಾಸಿಸುವ ಅನಿವಾರ್ಯದಲ್ಲಿದ್ದಾರೆ.
ವಾಟರ್‌ಏಯ್ಡ್ ಬಿಡುಗಡೆ ಮಾಡಿದ ಕಳಪೆ ನೀರಿನ ಗುಣಮಟ್ಟ ಸೂಚ್ಯಂಕದಲ್ಲಿ ಅಭಿವೃದ್ಧಿಶೀಲ ರಾಷ್ಟ್ರವೆನಿಸಿದ ಭಾರತವೂ ಸವಾಲು ಎದುರಿಸುತ್ತಿದೆ.
ಟೆಕ್ ಚಾಲೆಂಜ್
ನೀರಿನ ಗುಣಮಟ್ಟ ಸುಧಾರಿಸುವ ಸಲುವಾಗಿ, ಭಾರತದ ಪ್ರಮುಖ ಸಲಹಾ ಕಂಪೆನಿ ಕ್ಯಾಪ್ಜೆಮಿನಿ ತನ್ನ ಟೆಕ್ ಚಾಲೆಂಜ್ 2019 ಅನ್ನು ಪ್ರಾರಂಭಿಸಿತು. ಮುಕ್ತ ಸ್ಪರ್ಧೆಯ 6ನೇ ಆವೃತ್ತಿಯಲ್ಲಿ ನೀರಿನ ಗುಣಮಟ್ಟವನ್ನು ಸುಧಾರಿಸಲು ಉದಯೋನ್ಮುಖ ಡಿಜಿಟಲ್ ತಂತ್ರಜ್ಞಾನಗಳೊಂದಿಗೆ ಕೆಲಸ ಮಾಡಲು ಸವಾಲು ಹಾಕಿತು.
ಈ ಉಪಕ್ರಮದಲ್ಲಿ ಭಾರತದ 80ಕ್ಕೂ ಹೆಚ್ಚು ನಗರಗಳಿಂದ 1,60,000 ಹೆಚ್ಚು ನೋಂದಣಿಗಳು ಪಾಲ್ಗೊಂಡರು. ಇವರು 3 ತಿಂಗಳುಗಳಲ್ಲಿ ಕೋಡಿಂಗ್ ಕಾರ್ಯವನ್ನು ಪರಿಹರಿಸಬೇಕಾಗಿತ್ತು. ಹೀಗೆ ಅದರಲ್ಲಿ ಸಾಧನೆಗೈದ ಅಗ್ರ 55 ಮಂದಿಯನ್ನು ಫೈನಲ್‌ಗೆ ಆಯ್ಕೆ ಮಾಡಲಾಯಿತು.
ಅನಂತರ ಫೈನಲಿಸ್ಟ್‌ಗಳನ್ನು 10 ತಂಡಗಳಾಗಿ ವಿಂಗಡಿಸಿ ಅಂತಿಮ ಟೆಕ್ ಸವಾಲನ್ನು ಎದುರಿಸಲು ಕರೆ ನೀಡಲಾಯಿತು. ಇಲ್ಲಿ ದಕ್ಷ ನೀರಿನ ನಿರ್ವಹಣೆ ಮತ್ತು ಸಂರಕ್ಷಣೆ ಪ್ರಮುಖ ವಿಷಯವಾಗಿತ್ತು.
ಈ ಸ್ಪರ್ಧೆಯಲ್ಲಿ ಪರಿಣಾಮಕಾರಿಯಾದ ನೀರಿನ ಸಂರಕ್ಷಣೆಗಾಗಿ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಿದ್ದಕ್ಕಾಗಿ ಟೀಮ್ ಟೆಕ್ಲೈಟ್ಸ್ ವಿಜೇತರಾದರು. ನೀರಿನ ಗುಣಮಟ್ಟ ಸುಧಾರಣೆಯಲ್ಲಿ ಹೊಸ-ಯುಗದ ಡಿಜಿಟಲ್ ತಂತ್ರಜ್ಞಾನಗಳಾದ ಕೌಡ್ ಅನ್ನು ಬಳಸಿಕೊಂಡಿತು. ನೀರಿನ ಬಳಕೆಯನ್ನು ಟ್ರ್ಯಾಕ್ ಮಾಡಿ ನೀರಿನ ಸೋರಿಕೆಯನ್ನು ತಡೆಯುವ ಕಾರ್ಯ ಮಾಡಲಾಯಿತು. ದೇಶೀಯ, ವಾಣಿಜ್ಯ ಮತ್ತು ಕೈಗಾರಿಕಾ ಬಳಕೆಯಲ್ಲಿ ನೀರಿನ ಸಂಸ್ಕರಣೆಯನ್ನು ಸಕ್ರಿಯಗೊಳಿಸಿ ನೀರಿನ ಮರು ಬಳಕೆಗೆ ಅನುವು ಮಾಡಲಾಯಿತು.
“ಉದಯೋನ್ಮುಖ ತಂತ್ರಜ್ಞಾನಗಳನ್ನು ಬಳಸಿಕೊಂಡು ಸವಾಲುಗಳನ್ನು ಪರಿಹರಿಸಲು ಯುವ ಪ್ರೋಗ್ರಾಂಗಳು ಮತ್ತು ಟೆಕ್ ಉತ್ಸಾಹಿಗಳನ್ನು ಗುರುತಿಸಲು ವಿನ್ಯಾಸಗೊಳಿಸಲಾದ ಟೆಕ್ ಚಾಲೆಂಜ್ ಈಗ ಉದ್ಯಮದಲ್ಲಿ ಯುವ ಮತ್ತು ಅದ್ಭುತ ಮನಸ್ಸುಗಳನ್ನು ತೊಡಗಿಸಿಕೊಳ್ಳಲು ಒಂದು ಅನನ್ಯ ವೇದಿಕೆಯಾಗಿದೆ. ಎಂಥದ್ದೇ ಸಮಸ್ಯೆಗಳಿಗೆ ಸ್ಥಿರವಾಗಿ ಪರಿಹಾರಗಳನ್ನು ಕಂಡುಹಿಡಿಯಲು ಸಾಧ್ಯವಾಗಿದೆ’ ಎಂದು ಭಾರತದ ಕ್ಯಾಪೆjಮಿನಿಯ ಸಿಒಒ ಅರುಲ್ ಕುಮಾರನ್ ಪರಮಾನಂದಂ ಹೇಳಿದರು.
ಕಾಣೆಯಾಗುತ್ತಿರುವ ಮಕ್ಕಳ ಪತ್ತೆಗೂ ಸ್ಪರ್ಧೆ
2017ರ ಆವೃತ್ತಿಯಲ್ಲಿ, ವಿಜೇತರು ಭಾರತದಲ್ಲಿ ಕಾಣೆಯಾದ ಮಕ್ಕಳ ಸಮಸ್ಯೆಯನ್ನು ಪರಿಹರಿಸಲು ಮೂಲಮಾದರಿಯ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಿದರು. ಈ ಅಪ್ಲಿಕೇಶನ್ ಅನ್ನು ಅನಂತರ ಆಂಡ್ರಾಯ್ಡ್ ನಲ್ಲಿ ಲಭ್ಯವಿರುವ ನೈಜ ಅಪ್ಲಿಕೇಶನ್‌ನ ರಿ ಯುನಿಟ್ ಆಗಿ ಪರಿವರ್ತಿಸಲಾಯಿತು.
ಇಂತಹ ಸ್ಪರ್ಧೆಗಳಿಂದ ಅದ್ಭುತ ವಿಚಾರಗಳು ಮುನ್ನೆಲೆಗೆ ಬರಲು ಮಾತ್ರವಲ್ಲ, ಹೊಸ ಪ್ರತಿಭೆಗಳನ್ನು ಹುಡುಕುವ ಸಂಸ್ಥೆಗಳ ಗಮನಕ್ಕೆ ತಮ್ಮ ಕೌಶಲಗಳನ್ನು ಪ್ರದರ್ಶಿಸುವ ವೇದಿಕೆಯಾಗಿಯೂ ಯುವ ತಂತ್ರಜ್ಞರಿಗೆ ನೆರವಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
OnePlus 13 ಮತ್ತು 13R ಬಿಡುಗಡೆ: ಹೊಸ ವೈಶಿಷ್ಟ್ಯಗಳ ಪವರ್ ಹೌಸ್ ಫೋನ್
US Satellite: ಅಮೆರಿಕದ ಸಂವಹನ ಉಪಗ್ರಹ ಭಾರತದ ರಾಕೆಟ್‌ನಿಂದ ಲಾಂಚ್
WhatsApp Pay: ಭಾರತದಲ್ಲಿ ವಾಟ್ಸ್‌ಆ್ಯಪ್ ಪೇ ಇನ್ನು ಎಲ್ಲರಿಗೂ ಲಭ್ಯ
Airtel Outage:ದೇಶದ ಹಲವೆಡೆ ಏರ್ ಟೆಲ್ Network ಸಮಸ್ಯೆ; ಏರ್ ಟೆಲ್ ಗ್ರಾಹಕರಿಂದ ದೂರು
Mumbai: ಚಲಿಸುತ್ತಿರುವಾಗಲೇ ರಸ್ತೆ ಮಧ್ಯೆ ಹೊತ್ತಿ ಉರಿದ ಲ್ಯಾಂಬೋರ್ಘಿನಿ ಕಾರು!
MUST WATCH
ಹೊಸ ಸೇರ್ಪಡೆ
Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
Viral: ಇದು ಇರುವೆಗಳ ಎಂಜಿನಿಯರಿಂಗ್ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ
Indian Cricket: ಕ್ರಿಕೆಟ್ ಜೀವನಕ್ಕೆ ಗುಡ್ ಬೈ ಹೇಳಿದ ಆರ್‌ಸಿಬಿ ಮಾಜಿ ಆಟಗಾರ
Nature: ಶ್ರೀಮಂತನಾದರೂ, ಬಡವನಾದರೂ ಪ್ರಕೃತಿಗೆ ಅವಲಂಬಿಯೇ ಅಲ್ಲವೇ?
Sandalwood: ‘ಕೋರ’ ಚಿತ್ರದ ಟ್ರೇಲರ್ ಬಂತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.