ಟೆಲಿಫೋನ್ ಡೈರೆಕ್ಟರಿ
Team Udayavani, Jun 15, 2020, 4:46 AM IST
ಎಲ್ಲರೂ ಮರೆತೇ ಹೋಗಿರುವ, ಹಿಂದೊಮ್ಮೆ ಹಲವು ಮನೆಗಳಲ್ಲಿ, ವಾಣಿಜ್ಯ ಕೇಂದ್ರಗಳಲ್ಲಿ, ಕಚೇರಿಗಳಲ್ಲಿ ಅವಶ್ಯವಾಗಿ ಇರುತ್ತಿದ್ದ ಪುಸ್ತಕ ಟೆಲಿಫೋನ್ ಡೈರೆಕ್ಟರಿ. ಮನೆಗಳಲ್ಲಿ ಲ್ಯಾಂಡ್‌ಲೈನ್ ಫೋನ್‌ಗಳ ಭರಾಟೆ ಜೋರಾಗಿದ್ದ ಕಾಲದಲ್ಲಿ, ಯಾರದೇ ಫೋನ್ ನಂಬರ್ ಅನ್ನು ಹುಡುಕಿ ತೆಗೆಯಲು ಇವು ಬಳಕೆಯಾಗುತ್ತಿದ್ದವು.
ದಪ್ಪ ಗಾತ್ರದ ಈ ಡೈರೆಕ್ಟರಿಯ ಪುಟಗಳು ಹಳದಿ ಬಣ್ಣದಲ್ಲಿರುತ್ತಿದ್ದವು. ಹೀಗಾಗಿ ಅದಕ್ಕೆ “ಯೆಲ್ಲೋ ಪೇಜಸ್’ ಎಂದೂ ಕರೆಯುತ್ತಿದ್ದರು. ಡೈರೆಕ್ಟರಿಯಲ್ಲಿ ಫೋನ್ ನಂಬರ್, ವಿಳಾಸ ಮತ್ತು ವ್ಯಕ್ತಿಗಳ ಹೆಸರನ್ನು ನೋಡಬಹುದಾಗಿತ್ತು. ಜೊತೆಗೆ, ಅದರಲ್ಲಿ ಆಯಾ ಪ್ರದೇಶಗಳ ಕೋಡ್, ಅಂತಾರಾಜ್ಯ, ಅಂತಾರಾಷ್ಟ್ರೀಯ ಕರೆಗಳನ್ನು ಮಾಡುವ ವಿಧಾನ, ತುರ್ತು ಕರೆಗಳ ಸಂಖ್ಯೆ ಮತ್ತಿತರೆ ಉಪಯುಕ್ತ ಮಾಹಿತಿಯೂ ಇರುತ್ತಿತ್ತು.
ಸ್ಮಾರ್ಟ್‌ಫೋನ್ ನಲ್ಲಿ ಎಲ್ಲಾ ಫೋನ್ ನಂಬರ್‌ಗಳನ್ನು ಕಾಂಟ್ಯಾಕ್ಟ್ ಲಿಸ್ಟ್‌ನಲ್ಲಿ ಸಂಗ್ರಹಿಸಿ ಡುವ ಸಾಮರ್ಥ್ಯ ಬಂದ ಮೇಲೆ, ಡೈರೆಕ್ಟರಿಗಳ ಅವಶ್ಯಕತೆ ಕಡಿಮೆ ಯಾಗತೊಡ ಗಿತು. ಸ್ಮಾರ್ಟ್ ಫೋನುಗಳ ಹಾವಳಿಯಲ್ಲಿ ಲ್ಯಾಂಡ್‌ಲೈನ್ ಫೋನು ಗಳು ಇಲ್ಲವಾದವು. ಅದರ ಬೆನ್ನಿಗೇ ಟೆಲಿಫೋನ್ ಡೈರೆಕ್ಟರಿಗಳೂ ಮರೆಯಾದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್ ಡಿಕ್ಕಿ: ಮೊಪೆಡ್ ಸವಾರ ಸಾವು
Madhu Bangarappa ; ಟ್ರೋಲ್ ಗಳಿಗೆ ಬಗ್ಗಲ್ಲ.. ಕಿಡಿ ಕಿಡಿಯಾದ ಶಿಕ್ಷಣ ಸಚಿವ!
Vijayapura: 22 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ, 2 ಕಾರು ವಶಕ್ಕೆ ಪಡೆದ ಪೊಲೀಸರು
IFFI 2024;ರಾಜಕೀಯ ಕಾರಣಗಳಿಂದಲೇ ಸಾವರ್ಕರ್‌ಗೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ:ರಣದೀಪ್ ಹೂಡಾ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.