ಜೂನ್ 1ರಿಂದ ದೇವಸ್ಥಾನ ದರ್ಶನಕ್ಕೆ ಅವಕಾಶ : ಇನ್ನೂ ಕೈ ಸೇರದ ಸರಕಾರದ ಆದೇಶ!
Team Udayavani, May 30, 2020, 3:11 PM IST
ಮಂಗಳೂರು/ಉಡುಪಿ: ರಾಜ್ಯಾದ್ಯಂತ ಜೂನ್ 1ರಿಂದ ದೇವಸ್ಥಾನಗಳು ಭಕ್ತರ ಸೇವೆಗೆ ತೆರೆಯುವುದಾಗಿ ರಾಜ್ಯ ಸರಕಾರ ಈಗಾಗಲೇ ಘೋಷಣೆ ಮಾಡಿದ್ದರೂ ಈ ಬಗ್ಗೆ ಕೇಂದ್ರದಿಂದ ಇನ್ನೂ ಯಾವುದೇ ಆದೇಶ ಅಥವಾ ಮಾರ್ಗಸೂಚಿ ಬಂದಿಲ್ಲ. ಹೀಗಾಗಿ, ದೇವಸ್ಥಾನಗಳನ್ನು ಭಕ್ತರ ದರ್ಶನಕ್ಕೆ ತೆರೆಯ ಬೇಕೋ; ಬೇಡವೇ ಎನ್ನುವ ಗೊಂದಲಕ್ಕೆ ದೇವಸ್ಥಾನದ ಆಡಳಿತ ಮಂಡಳಿಯವರು ಸಿಲುಕಿದ್ದಾರೆ.
ಕೋವಿಡ್ ಭೀತಿಯಿಂದಾಗಿ ದೇವಾಲಯಗಳು ಮತ್ತೆ ಭಕ್ತರ ದರ್ಶನಕ್ಕೆ ತೆರೆಯಲು ಕೇಂದ್ರ ಸರಕಾರದಿಂದ ಸಹಮತ ಬೇಕು. ರಾಜ್ಯ ಸರಕಾರ ಇದೀಗ ಕೇಂದ್ರದ ಅನುಮತಿ ನಿರೀಕ್ಷೆಯಲ್ಲಿದೆ. ಆದರೆ, ಕೇಂದ್ರದ ಅನುಮತಿ ಬರುವುದಕ್ಕಿಂತ ಮೊದಲೇ ರಾಜ್ಯ ಸರಕಾರ ಈ ಬಗ್ಗೆ ಘೋಷಣೆ ಮಾಡಿರುವ ಕಾರಣ ದೇವಳದವರು ಹಾಗೂ ಭಕ್ತರು ಗೊಂದಲಕ್ಕೆ ಸಿಲುಕಿದ್ದಾರೆ.
ಇನ್ನೊಂದೆಡೆ, ಸರಕಾರದ ಮುನ್ಸೂಚನೆಯಂತೆ ಉಭಯ ಜಿಲ್ಲೆಗಳ ಕೆಲವು ದೇವಸ್ಥಾನಗಳಲ್ಲಿ ಈಗಾಗಲೇ ತಯಾರಿ ನಡೆಯುತ್ತಿದೆ. ದೇವಸ್ಥಾನದ ಆವರಣ ಸ್ವತ್ಛತೆ, ಸ್ಯಾನಿಟೈಸ್ ಕೆಲಸ ನಡೆಯುತ್ತಿದೆ. ಮಾತ್ರವಲ್ಲದೇ ಯಾವೆಲ್ಲ ನಿಯಮಗಳನ್ನು ಪಾಲನೆ ಮಾಡಬೇಕು ಎಂಬ ಬಗ್ಗೆ ನಿಯಮ ರೂಪಿಸಿದೆ. ಇನ್ನೂ, ಕೆಲವು ದೇವಸ್ಥಾನ ಆಡಳಿತ ಮಂಡಳಿಯು ರಾಜ್ಯ ಸರಕಾರದ ಅನುಮತಿ ಬಂದ ಬಳಿಕವಷ್ಟೇ ಸೂಕ್ತ ತಯಾರಿ ನಡೆಸಲು ತೀರ್ಮಾನಿಸಿದೆ. .
ಆನ್‌ಲೈನ್ ಸೇವೆ
ಲಾಕ್‌ಡೌನ್ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ಕಟೀಲು, ಕುಕ್ಕೆ, ಉಡುಪಿ ಜಿಲ್ಲೆಯ ಕೊಲ್ಲೂರು, ಮಂದಾರ್ತಿ ದೇವಸ್ಥಾನದಲ್ಲಿ ಆನ್‌ಲೈನ್ ಸೇವೆ ಲಭ್ಯವಿದೆ.
ಕೇಂದ್ರದ ಸಹಮತ ನಿರೀಕ್ಷೆಯಲ್ಲಿ
ರಾಜ್ಯದಲ್ಲಿ ಜೂನ್ 1ರಿಂದ ದೇವಸ್ಥಾನ ತೆರೆಯುವ ಬಗ್ಗೆ ರಾಜ್ಯ ಸರಕಾರ ಈಗಾಗಲೇ ನಿರ್ಧರಿಸಿದೆ. ಈ ಬಗ್ಗೆ ಕೇಂದ್ರದ ಸಹಮತಕ್ಕಾಗಿ ಕಾಯುತ್ತಿದ್ದೇವೆ. ಈ ತಿಂಗಳ ಅಂತ್ಯದೊಳಗೆ ಕೇಂದ್ರ ಸರಕಾರದಿಂದ ಸೂಕ್ತ ನಿರ್ದೇಶನ ಬರುವ ನಿರೀಕ್ಷೆಯಲ್ಲಿದ್ದೇವೆ. ಆ ಬಳಿಕ ರಾಜ್ಯದಿಂದ ಅಧಿಕೃತ ಆದೇಶ ಹೊರಡಿಸಲಾಗುವುದು.
– ಕೋಟ ಶ್ರೀನಿವಾಸ ಪೂಜಾರಿ, ಮುಜರಾಯಿ ಸಚಿವ
ನಿರ್ದೇಶನ ಬಂದಿಲ್ಲ
ಜಿಲ್ಲೆಯಲ್ಲಿ ಜೂನ್ 1ರಿಂದ ದೇವಸ್ಥಾನಗಳು ತೆರೆಯುವ ಬಗ್ಗೆ ರಾಜ್ಯ ಸರಕಾರದಿಂದ ಯಾವುದೇ ನಿರ್ದೇಶನ ಬಂದಿಲ್ಲ. ಜಿಲ್ಲೆಯ ದೇವಸ್ಥಾನಗಳ ಪಟ್ಟಿ ಸಿದ್ಧವಿದ್ದು, ಆದೇಶ ಬಂದ ಕೂಡಲೇ ಈ ಬಗ್ಗೆ ಸುತ್ತೋಲೆ ಕಳುಹಿಸಲಾಗುವುದು.
– ಸಿಂಧೂ ಬಿ. ರೂಪೇಶ್, ಜಿ. ಜಗದೀಶ್, ಜಿಲ್ಲಾಧಿಕಾರಿಗಳು, ದ.ಕ., ಉಡುಪಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Hebri: ಎನ್‌ಕೌಂಟರ್ ತನಿಖೆ ನಡೆಸುವ ಹೆಬ್ರಿ ಪೊಲೀಸ್ ಠಾಣೆ ಇಲ್ಲಗಳ ಆಗರ!
MUST WATCH
ಹೊಸ ಸೇರ್ಪಡೆ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Love Reddy: ತೆರೆಗೆ ಬಂತು ʼಲವ್ ರೆಡ್ಡಿʼ
Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.