ಜೂ. 8ರಿಂದ ದೇಗುಲ ದರ್ಶನಾವಕಾಶ
Team Udayavani, Jun 6, 2020, 11:11 AM IST
ಉಡುಪಿ: ಲಾಕ್‌ಡೌನ್ ಅವಧಿ ಬಳಿಕ ಇದೀಗ ದೇವಸ್ಥಾನಗಳನ್ನು ಭಕ್ತರಿಗೆ ತೆರೆಯಲು ಘಳಿಗೆ ಕೂಡಿಬಂದಿದೆ. ಮೊದಲು ಜೂ. 1ರಿಂದ ಎಂದುಕೊಂಡಿದ್ದ ಈ ಘಳಿಗೆ ಈಗ ಜೂ. 8ಕ್ಕೆ ನಿಗದಿಯಾಗಿದೆ.
ದೇವಸ್ಥಾನಗಳನ್ನು ತೆರೆಯುವ ಸಂಬಂಧಪಟ್ಟು ಮುಜರಾಯಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಬೆಂಗಳೂರಿನಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಶುಕ್ರವಾರ ಸಭೆ ನಡೆಸಿದ್ದಾರೆ. ಶನಿವಾರ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಅಳವಡಿಸಬೇಕಾದ ಮಾರ್ಗಸೂಚಿಗಳನ್ನು ಎಲ್ಲ ದೇವಸ್ಥಾನಗಳಿಗೆ ನೀಡಲಿದ್ದಾರೆ. ಆಯ್ದ ಕೆಲವು ಮಾರ್ಗಸೂಚಿಗಳು ಈ ಕೆಳಗಿನಂತಿವೆ.
ಧರ್ಮಸ್ಥಳದಲ್ಲಿ ದರ್ಶನ ವ್ಯವಸ್ಥೆ
ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ದೇವರ ದರ್ಶನಕ್ಕೆ ಜೂ. 8ರಿಂದ ಮುಕ್ತ ಅವಕಾಶ ಮಾಡಿ ಕೊಡಲಾಗುವುದೆಂದು ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ತಿಳಿಸಿದ್ದಾರೆ. ಭಕ್ತರ ಕೊರೊನಾ ಸೋಂಕು ತಡೆಯುವ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು ಎಂದು ಸೂಚಿಸಲಾಗಿದೆ.
ಕಟೀಲು: ಅನ್ನದಾನ ಸೇವೆ ಇಲ್ಲ
ಕಟೀಲು/ಕೊಲ್ಲೂರು: ಕಟೀಲು ಕೊಲ್ಲೂರು, ದೇವಸ್ಥಾನಗಳೂ ಸೋಮವಾರ ತೆರೆಯಲಿವೆ. ಆದರೆ ಕಟೀಲಿನಲ್ಲಿ ಸದ್ಯಕ್ಕೆ ಅನ್ನಪ್ರಸಾದದ ವ್ಯವಸ್ಥೆ ಇರುವುದಿಲ್ಲ. ದೇವರ ದರ್ಶನದ ಹೊರತು ಯಾವುದೇ ಸೇವೆಗಳು ಇರುವುದಿಲ್ಲ. ಕೊಲ್ಲೂರಿನಲ್ಲಿ ಮೊದಲ ದಿನ ಅನ್ನದಾನ ಇರುವುದಿಲ್ಲ ಎಂದು ಪ್ರಕಟನೆ ತಿಳಿಸಿದೆ.
– ಕೋವಿಡ್ ಪಾಸಿಟಿವ್ ಇರುವ ಕಂಟೈನ್‌ಮೆಂಟ್ ವಲಯದ ವ್ಯಾಪ್ತಿಯಲ್ಲಿ ದೇವಸ್ಥಾನಗಳಿದ್ದರೆ ಅವುಗಳನ್ನು ತೆರೆಯುವುದಿಲ್ಲ.
– 65 ವರ್ಷ ಪ್ರಾಯ ಮೀರಿದ ಹಿರಿಯರು, ಹತ್ತು ವರ್ಷದೊಳಗಿನ ಮಕ್ಕಳು, ಗರ್ಭಿಣಿಯರು ದೇವಸ್ಥಾನಕ್ಕೆ ಬಾರದ ಸಹಕರಿಸಬೇಕೆಂದು ವಿನಂತಿಸಲಾಗಿದೆ.
-ದೇವಸ್ಥಾನಗಳ ಪ್ರವೇಶದ್ವಾರ ಮತ್ತು ಆವರಣಗಳನ್ನು ಸ್ಯಾನಿಟೈಸ್‌ನಿಂದ ಶುಚಿಗೊಳಿಸಬೇಕು.
– ಭಕ್ತರ ದೇಹದ ಉಷ್ಣಾಂಶ, ಆರೋಗ್ಯ ತಪಾಸಣೆ ಮಾಡಬೇಕು. ಕೈಗೆ ಸ್ಯಾನಿಟೈಸರ್ ಹಾಕಬೇಕು.
– ಮಾಸ್ಕ್ ಧರಿಸಿರಬೇಕು.
– ವೈರಾಣು ತಡೆಗಟ್ಟಲು ಜನರಲ್ಲಿ ಜಾಗೃತಿ ಮೂಡಿಸಲು ಆಡಿಯೋ ಮತ್ತು ವೀಡಿಯೋ ತುಣುಕುಗಳನ್ನು ಬಿತ್ತರಿಸಬೇಕು.
– ಸರದಿ ಸಾಲಿನಲ್ಲಿ ಸಾಮಾಜಿಕ ಅಂತರ ಕಾಪಾಡಬೇಕು.
– ಪಾದರಕ್ಷೆಗಳನ್ನು ಈಗ ಇಡುವ ಸ್ಥಳಕ್ಕಿಂತಲೂ ದೂರದಲ್ಲಿ ಇಡಬೇಕು.
– ವಾಹನ ಪಾರ್ಕಿಂಗ್ ಪ್ರದೇಶಗಳಲ್ಲಿ ಮತ್ತು ಅಂಗಡಿಗಳಲ್ಲಿ ಆರು ಅಡಿ ಸಾಮಾಜಿಕ ಅಂತರವನ್ನು ಕಾಪಾಡಬೇಕು.
– ದೇವಸ್ಥಾನವನ್ನು ಪ್ರವೇಶಿಸುವಾಗ ಕೈಕಾಲು ತೊಳೆದು ಬರುವ ವ್ಯವಸ್ಥೆ ಮಾಡಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ
ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ
Gangavathi: 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.