ವಸತಿ ರಹಿತರ ಕೇಂದ್ರಗಳಲ್ಲಿ ನಿರಾಶ್ರಿತರಿಗೆ ತಾತ್ಕಾಲಿಕ ಆಶ್ರಯ
Team Udayavani, Apr 29, 2021, 4:45 AM IST
ಮಹಾನಗರ : ಲಾಕ್‌ಡೌನ್ ಮಾದರಿಯ ಕರ್ಫ್ಯೂನಿಂದಾಗಿ ಸ್ತಬ್ಧವಾಗಿ ರುವ ನಗರದಲ್ಲಿ ಕಳೆದ ಬಾರಿಯ ಲಾಕ್‌ಡೌನ್‌ನಂತೆ ಈ ಬಾರಿ ತಾತ್ಕಾಲಿಕ ಪುನರ್ವ ಸತಿ ಕಲ್ಪಿಸಿಲ್ಲ. ಆದರೆ ನಗರದಲ್ಲಿರುವ 2 “ನಗರ ವಸತಿ ರಹಿತರ ಆಶ್ರಯ ಕೇಂದ್ರ’ಗಳು ತಾತ್ಕಾಲಿಕ ಆಶ್ರಯಕ್ಕೆ ಲಭ್ಯ ಇವೆ.
ಮಹಾನಗರ ಪಾಲಿಕೆ ಆಡಳಿತದ ಅಡಿಯಲ್ಲಿ ಸುವರ್ಣ ಕರ್ನಾಟಕ ಜನಸ್ನೇಹಿ ವೇದಿಕೆ ಸರಕಾರೇತರ ಸೇವಾ ಸಂಸ್ಥೆಯ ನಿರ್ವಹಿಸುವ ಎರಡು ಆಶ್ರಯ ಕೇಂದ್ರಗಳು ನಗರದ ಬಂದರು ಪ್ರದೇಶ ಮತ್ತು ಉರ್ವದಲ್ಲಿವೆ.
ಉರ್ವ ಮಹಿಳಾ ಸಮುದಾಯ ಭವನದಲ್ಲಿರುವ ಆಶ್ರಯ ಕೇಂದ್ರವನ್ನು ಮಹಿಳೆ ಯರಿಗೆ ಮೀಸಲಿರಿಸಲಾಗಿದೆ. ಬಂದರು ದಕ್ಕೆ ಬಳಿಯ ಆಶ್ರಯ ಕೇಂದ್ರದಲ್ಲಿ ಪ್ರಸ್ತುತ 16 ಮಂದಿ ನಿರಾಶ್ರಿತರು ಉಳಿದುಕೊಂಡಿದ್ದು, ಇಲ್ಲಿ ಸುಮಾರು 75 ಮಂದಿಗೆ ತಾತ್ಕಾಲಿಕ ಆಶ್ರಯ ಒದಗಿಸಿಕೊಡಬಹುದಾಗಿದೆ. ಲಾಕ್‌ಡೌನ್ ಮಾದರಿಯ ಕರ್ಫ್ಯೂ ಸಂದರ್ಭ ಊರಿಗೆ ಹೋಗಲು ಸಾಧ್ಯ ವಾಗದೆ ಅಸಹಾಯಕರಾಗಿರುವವರು ಇಲ್ಲಿ ವಾಸ್ತವ್ಯ ಮಾಡಲು ಅವಕಾಶವಿದೆ. ಉರ್ವ ದಲ್ಲಿರುವ ಆಶ್ರಯ ಕೇಂದ್ರದಲ್ಲಿ ಈಗ ನಾಲ್ವರು ಮಹಿಳೆಯರು ಮಾತ್ರ ಆಶ್ರಯ ಪಡೆದುಕೊಂಡಿದ್ದು, ಇಲ್ಲಿ ಸುಮಾರು 15 ಮಂದಿಗೆ ಆಶ್ರಯ ಒದಗಿಸಬಹುದಾಗಿದೆ ಎನ್ನುತ್ತಾರೆ ಈ ಆಶ್ರಯ ಕೇಂದ್ರಗಳ ನಿರ್ವಾಹಕರು.
ತಾತ್ಕಾಲಿಕ ಆಶ್ರಯ
ನಗರದಲ್ಲಿ ಕಾರ್ಮಿಕರಾಗಿದ್ದು, ವಸತಿ ಇಲ್ಲದವರಿಗೆ ತಾತ್ಕಾಲಿಕವಾಗಿ ಗರಿಷ್ಠ 90 ದಿನಗಳವರೆಗೆ ಆಶ್ರಯ ನೀಡುವ ಉದ್ದೇಶದಿಂದ ಈ ಆಶ್ರಯ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಇಲ್ಲಿ ವಾಸ್ತವ್ಯ ಇರುವವರಿಗೆ ಊಟ, ತಿಂಡಿಯ ಅಗತ್ಯವಿದ್ದರೆ ಅದನ್ನು ಕೂಡ ಒದಗಿಸಿಕೊಡಲಾ ಗು ತ್ತ ದೆ. ಕೊರೊನಾ ಹಿನ್ನೆಲೆಯಲ್ಲಿ ಅವರನ್ನು ಪ್ರತ್ಯೇಕವಾಗಿ ಇರಿಸಿ ಅನಂತರ ಅವರ ತಪಾ ಸಣೆ ನಡೆಸಲಾಗುತ್ತದೆ ಎಂದು ಸುವರ್ಣ ಕರ್ನಾಟಕ ಜನಸ್ನೇಹಿ ವೇದಿಕೆ ಅಧ್ಯಕ್ಷ ಎನ್.ಪಿ. ಶೆಣೈ ಅವರು “ಉದಯವಾಣಿ’ ಗೆ ತಿಳಿಸಿದ್ದಾರೆ.
ಶಾಶ್ವತ ಆಶ್ರಯ ಕೇಂದ್ರಗಳಿಲ್ಲ
ನಗರದಲ್ಲಿ ನಿರಾಶ್ರಿತರಿಗಾಗಿ ಪ್ರತ್ಯೇಕ ಆಶ್ರಯ ಕೇಂದ್ರಗಳಿಲ್ಲ. ನಗರ ವಸತಿ ರಹಿತರ ಆಶ್ರಯ ಕೇಂದ್ರಗಳಲ್ಲಿ ತಾತ್ಕಾಲಿಕ ವಾಗಿ ಉಳಿದುಕೊಳ್ಳಬಹುದು. ಆದರೆ ತೀರಾ ಅನಾರೋಗ್ಯ ಪೀಡಿತರು, ಮಾನಸಿಕ ಅಸ್ವಸ್ಥರು ಮೊದಲಾದವರಿಗೆ ಇಲ್ಲಿ ಆಶ್ರಯ ನೀಡುವುದು ಕಷ್ಟ.
ಲಾಕ್‌ಡೌನ್ ವೇಳೆ ಆಶ್ರಯ
ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕವಾದ ತಾತ್ಕಾಲಿಕ ಆಶ್ರಯ ಕೇಂದ್ರಗಳಿದ್ದು, ಇಲ್ಲಿ ಸಾಮಾನ್ಯವಾಗಿ ಕೆಲಸಕ್ಕೆ ಹೋಗಿ ರಾತ್ರಿ ಉಳಿದುಕೊಳ್ಳುವವರಿಗೆ ಅವಕಾಶ ನೀಡಲಾಗುತ್ತದೆ. ಆದರೆ ಈಗ ಲಾಕ್‌ಡೌನ್ ಇರುವುದರಿಂದ ಇತರ ನಿರಾಶ್ರಿತರಿಗೂ ಇಲ್ಲಿ ತಾತ್ಕಾಲಿಕ ಆಶ್ರಯ ಪಡೆದುಕೊಳ್ಳಬಹುದು. ಯಾರಿಗಾದರೂ ನಗರದಲ್ಲಿ ಆಶ್ರಯ ಸಿಗದೇ ಇದ್ದರೆ ಅಂತವರಿಗೆ ಅವಕಾಶ ನೀಡಲಾಗುವುದು.
-ಎನ್.ಪಿ.ಶೆಣೈ, ಅಧ್ಯಕ್ಷರು, ಸುವರ್ಣ ಕರ್ನಾಟಕ ಜನಸ್ನೇಹಿ ವೇದಿಕೆ, ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ranga Chavadi: ಕಿಶೋರ್ ಡಿ ಶೆಟ್ಟಿ ಅವರಿಗೆ ರಂಗಚಾವಡಿ 2024 ಪ್ರಶಸ್ತಿ
Kateel: ತಾರಾನಾಥ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು… ಅಕ್ಕನಿಂದಲೇ ಕೊಲೆಯಾದ ತಮ್ಮ
ಮಮ್ತಾಜ್ ಅಲಿ ಆತ್ಮಹತ್ಯೆ ಪ್ರಕರಣ: ದಂಪತಿ ಸಹಿತ ಆರೋಪಿಗಳಿಗೆ ಮುಂದುವರಿದ ನ್ಯಾಯಾಂಗ ಬಂಧನ
Mangaluru: ಸಿಸಿಬಿ ಪೊಲೀಸರ ಕಾರ್ಯಾಚರಣೆ… ಅಪಾರ ಪ್ರಮಾಣದ ಮಾದಕ ವಸ್ತು ಸಹಿತ ಓರ್ವನ ಸೆರೆ
Mangaluru: ನೇತ್ರಾವತಿ ಸೇತುವೆ ಬಳಿ ಬೈಕ್ ಅಪಘಾತ… ಓರ್ವ ಮೃತ್ಯು, ಮತ್ತೋರ್ವ ಗಂಭೀರ
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.