![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, May 9, 2020, 5:47 PM IST
ಲಂಡನ್: ಕೋವಿಡ್-19 ವಿರುದ್ಧ ಜಗತ್ತಿನಾದ್ಯಂತ ಔಷಧಗಳನ್ನು ಸಂಶೋಧಿಸಲಾಗುತ್ತಿದೆ. ಈ ಕುರಿತ ಒಂದು ಸಾಧ್ಯತೆಯನ್ನು ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್‌ನಲ್ಲಿ ಕಳೆದ ವಾರ ಪ್ರಕಟಿಸಲಾಗಿದೆ.
ರೆಮೆಡ್‌ಸಿಮಿರ್ ಎಂಬ ಔಷಧ ಪರಿಣಾಮಕಾರಿಯಾಗಬಹುದು ಎಂದು ಆ ಲೇಖನದಲ್ಲಿ ತಿಳಿಸಲಾಗಿದೆ. ಬಳಿಕ ಈ ಔಷಧವನ್ನು ಸೋಂಕಿತರ ಮೇಲೆ ಪ್ರಯೋಗಿಸಲಾಗಿದ್ದು, 18 ದಿನಗಳ ಚಿಕಿತ್ಸೆಯ ಬಳಿಕ ಆಕ್ಸಿಜನ್ ಸಪೋರ್ಟ್‌ನಲ್ಲಿದ್ದ 36 ರೋಗಿಗಳಲ್ಲಿ ಅಂದರೆ ಶೇ. 68 ರೋಗಿಗಳಲ್ಲಿ ಗಣನೀಯವಾದ ಸುಧಾರಣೆ ಕಂಡುಬಂದಿದೆ ಎಂದು ವಿವರಿಸಲಾಗಿತ್ತು.
ಇದೀಗ ಈ ಸಾಧ್ಯತೆಯ ಕುರಿತು ತೀವ್ರ ಕುತೂಹಲ ಕೆರಳಿಸಿರುವ ಜಪಾನ್ ಆ್ಯಂಟಿ ವೈರಲ್ ಔಷಧವಾಗಿ ಬಳಸಲು ಒಪ್ಪಿಗೆ ನೀಡಿದೆ. ಕೋವಿಡ್-19 ಸೋಂಕಿನಿಂದ ತೀವ್ರತರವಾಗಿ ಬಳಲುತ್ತಿರುವವರ ತುರ್ತುಬಳಕೆಗಾಗಿ ಈ ಔಷಧವನ್ನು ಬಳಸಲು ಅಮೆರಿಕ ಮೊದಲು ಅನುಮತಿ ನೀಡಿತ್ತು.
ಅಮೆರಿಕದ ಸಂಸ್ಥೆಯೊಂದು ಅಭಿವೃದ್ಧಿ ಪಡಿಸಿರುವ ಈ ಪ್ರಾಯೋಗಿಕ ಔಷಧ ಬಳಕೆಗೆ ಶೀಘ್ರವೇ ಜಪಾನ್ ಸರಕಾರ ಹಸಿರು ನಿಶಾನೆ ನೀಡಲಿದೆ. ಅಮೆರಿಕದಲ್ಲಿ ಇಂತಹ ಪ್ರಯೋಗಕ್ಕೆ ಭಾರತೀಯ ಮೂಲದ ವೈದ್ಯೆ ಅರುಣಾ ಸುಬ್ರಹ್ಮಣಿಯನ್ ಅವರು ಸೇರಿದಂತೆ ಇತರ ತಜ್ಞರು ಈ ಔಷಧವನ್ನು ಚಿಕಿತ್ಸೆ ನೀಡಲು ಬಳಸಬಹುದು ಎಂದು ಶಿಫಾರಸು ಮಾಡಿದ್ದರು.
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ
Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!
Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹ*ತ್ಯೆ
Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.