ವಿಂಬಲ್ಡನ್ ಟೆನಿಸ್‌ನಲ್ಲಿ ಜೊಕೋವಿಕ್ ಆಡಲಿದ್ದಾರೆ
Team Udayavani, Apr 27, 2022, 8:15 AM IST
ಲಂಡನ್: ಬ್ರಿಟನ್‌ಗೆ ಪ್ರವೇಶಿಸಲು ಲಸಿಕೆ ಹಾಕಿಸಿಕೊಳ್ಳುವ ಅಗತ್ಯವಿಲ್ಲದ ಕಾರಣ ಟೆನಿಸ್ ತಾರೆ ನೊವಾಕ್ ಜೊಕೋವಿಕ್ ಅವರಿಗೆ ಈ ಬಾರಿ ವಿಂಬಲ್ಡನ್ ಟೆನಿಸ್ ಕೂಟದ ಪ್ರಶಸ್ತಿ ಉಳಿಸಿಕೊಳ್ಳಲು ಅವಕಾಶ ನೀಡಲಾಗಿದೆ.
ಲಸಿಕೆ ಹಾಕಿಸಿಕೊಳ್ಳದ ಕಾರಣಕ್ಕೆ 34ರ ಹರೆಯದ ವಿಶ್ವದ ನಂಬರ್ ವನ್ ಆಟಗಾರ ಜೊಕೋವಿಕ್ ಅವರನ್ನು ಆಸ್ಟ್ರೇಲಿಯ ದೇಶದಿಂದ ಗಡೀಪಾರು ಮಾಡಿದ್ದರಿಂದ ಅವರು ಈ ವರ್ಷದ ಆಸ್ಟ್ರೇಲಿಯನ್ ಓಪನ್ ಟೆನಿಸ್ ಕೂಟದಲ್ಲಿ ಭಾಗವಹಿಸಿರಲಿಲ್ಲ. ಆದರೆ ಇದೀಗ ವಿಂಬಲ್ಡನ್‌ನಲ್ಲಿ ಆಡಲು ಅವಕಾಶ ನೀಡಲಾಗಿದೆ ಎಂದು ಆಲ್ ಇಂಗ್ಲೆಂಡ್ ಕ್ಲಬ್‌ನ ಕಾರ್ಯಕಾರಿ ಮುಖ್ಯಸ್ಥ ಸ್ಯಾಲ್ಲಿ ಬೋಲ್ಟನ್ ಹೇಳಿದ್ದಾರೆ.
ವಿಂಬಲ್ಡನ್ ಕೂಟ ಜೂನ್ 27ರಿಂದ ಆರಂಭವಾಗಲಿದೆ. ಎಲ್ಲ ಆಟಗಾರರು ಲಸಿಕೆ ಹಾಕಿಸಿಕೊಳ್ಳುವಂತೆ ಪ್ರೋತ್ಸಾಹಿಸಲಾಗುತ್ತಿದೆ. ಇದರೆ ವಿಂಬಲ್ಡನ್‌ನಲ್ಲಿ ಈ ವರ್ಷ ಸ್ಪರ್ಧಿಸಲು ಲಸಿಕೆ ಹಾಕಿಸಿಕೊಳ್ಳಲೇಬೇಕೆಂಬ ನಿಯಮವಿಲ್ಲ ಎಂದವರು ಹೇಳಿದ್ದಾರೆ.
ಇದನ್ನೂ ಓದಿ:ಬ್ಯಾಡ್ಮಿಂಟನ್ ಏಷ್ಯ ಚಾಂಪಿಯನ್‌ಶಿಪ್: ಸಾತ್ವಿಕ್-ಚಿರಾಗ್ ದ್ವಿತೀಯ ಸುತ್ತಿಗೆ
ಇಷ್ಟರವರೆಗೆ 20 ಬಾರಿ ಗ್ರ್ಯಾನ್ ಸ್ಲಾಮ್ ಕೂಟದ ಪ್ರಶಸ್ತಿ ಗೆದ್ದಿರುವ ಜೊಕೋವಿಕ್ ಅವರು ಎರಡನೇ ಗರಿಷ್ಠ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಗೆದ್ದ ಸಾಧಕರ ಪಟ್ಟಿಯಲ್ಲಿ ರೋಜರ್ ಫೆಡರರ್ ಜತೆ ಸೇರಿಕೊಂಡಿದ್ದಾರೆ. 21 ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಗೆದ್ದಿರುವ ರಫೆಲ್ ನಡಾಲ್ ಅಗ್ರಸ್ಥಾನದಲ್ಲಿದ್ದಾರೆ. ಜೊಕೋವಿಕ್ ಆರು ಬಾರಿ ವಿಂಬಲ್ಡನ್ ಕೂಟದ ಪ್ರಶಸ್ತಿ ಜಯಿಸಿದ್ದಾರೆ. ಕೋವಿಡ್‌ನಿಂದಾಗಿ 2020ರಲ್ಲಿ ಈ ಕೂಟ ನಡೆದಿರಲಿಲ್ಲ. 2018, 2019 ಮತ್ತು 2021ರಲ್ಲಿ ಅವರು ಸತತ 3 ಬಾರಿ ಈ ಪ್ರಶಸ್ತಿ ಜಯಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
IND-W vs WI: ವನಿತೆಯರ ಏಕದಿನ ಮುಖಾಮುಖಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.