ISRO ದಿಂದ ಇಂಧನ ಉತ್ಪಾದನ ಘಟಕ ಪರೀಕ್ಷೆ ಯಶಸ್ವಿ
ಜ.1ರಂದು ನಭಕ್ಕೇರಿದ ರಾಕೆಟ್‌ನಲ್ಲೇ 100 ವ್ಯಾಟ್ ಸಾಮರ್ಥ್ಯದ ಇಂಧನ ಕೋಶವೂ ಉಡಾವಣೆ
Team Udayavani, Jan 6, 2024, 12:44 AM IST
ಹೊಸದಿಲ್ಲಿ: ಬಾಹ್ಯಾಕಾಶದಲ್ಲಿರುವ ಸಾಧನಗಳಿಗೆ ಇಂಧನ ಪೂರೈಸಬಲ್ಲ, ಭವಿಷ್ಯದಲ್ಲಿ ಮಹತ್ವದ ಪಾತ್ರವಹಿಸಬಲ್ಲ ಇಂಧನ ಘಟಕವೊಂದನ್ನು; ಇಸ್ರೋ ಯಶಸ್ವಿಯಾಗಿ ಪರೀಕ್ಷೆ ನಡೆಸಿದೆ. ಜ.1ರಂದು ಇಸ್ರೋ ಉಡಾವಣೆಗೊಳಿಸಿದ ಪಿಎಸ್‌ಎಲ್‌ವಿ-ಸಿ58 ನೌಕೆಯಲ್ಲೇ 100 ವ್ಯಾಟ್ ಸಾಮರ್ಥ್ಯದ ಎಫ್ಸಿಪಿಎಸ್ (ಪಾಲಿಮರ್ ಎಲೆಕ್ಟ್ರೋಲೈಟ್ ಮೆಂಬ್ರೇನ್ ಫ್ಯೂಯೆಲ್ ಸೆಲ್) ಅನ್ನೂ ಕಳುಹಿಸಿಕೊಟ್ಟಿದೆ. ಅದು ರಾಕೆಟ್‌ನಲ್ಲಿ ಅತೀ ಒತ್ತಡದಲ್ಲಿ ಇಡಲ್ಪಟ್ಟಿದ ಜಲಜನಕ ಮತ್ತು ಆಮ್ಲಜನಕವನ್ನು ಬಳಸಿಕೊಂಡು ಇದುವರೆಗೆ 180 ವ್ಯಾಟ್ ವಿದ್ಯುತ್ ಅನ್ನು ಉತ್ಪಾದಿಸಿದೆ.
ಲಾಭಗಳೇನು?: ಬಾಹ್ಯಾಕಾಶದಲ್ಲಿ ಈ ಇಂಧನ ಹೇಗೆ ಕಾರ್ಯಾಚರಣೆ ಮಾಡುತ್ತದೆ, ಏನೇನೆಲ್ಲ ಸವಾಲು ಎದುರಾಗಬಹುದು ಎಂದು ಅರಿ ಯು ವುದು ಇಸ್ರೋ ಉದ್ದೇಶವಾಗಿತ್ತು. ಇಲ್ಲಿ ಸಿಗುವ ಮಾಹಿತಿಯಿಂದ ಮುಂದಿನ ಇಂಧನ ಘಟಕಗಳನ್ನು ಹೇಗೆ ಸಿದ್ಧಪಡಿಸಬಹುದೆಂಬ ತಿಳಿವಳಿಕೆ ಸಿಗುತ್ತದೆ. ಜ.1ರಂದು ಪಿಎಸ್‌ಎಲ್‌ವಿ ರಾಕೆಟ್‌ನಲ್ಲಿ ಅತೀ ಕಡಿಮೆ ಅವಧಿಯಲ್ಲಿ ಈ ಸಾಧನ ಪರೀಕ್ಷೆಗೊಳಪಡಿ ಸಿದಾಗ, 180 ವ್ಯಾಟ್ ವಿದ್ಯುತ್ ಯಶಸ್ವಿಯಾಗಿ ಉತ್ಪಾದನೆಯಾಗಿದೆ ಎಂದು ಇಸ್ರೋ ಹೇಳಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.