Text Book ಪರಿಷ್ಕರಣೆ ಎಡಪಂಥೀಯ ‘ಕೈ’ ಗೊಂಬೆ: ಕಾಗೇರಿ
Team Udayavani, Jun 12, 2023, 3:04 PM IST
ಶಿರಸಿ: ಪಠ್ಯ ಪುಸ್ತಕ ಪರಿಷ್ಕರಣೆಗೆ ಮುಂದಾದ ಕಾಂಗ್ರೆಸ್ ಪಕ್ಷವು ಎಡಪಂಥೀಯ ‘ಕೈ’ ಗೊಂಬೆಯಾಗಿದೆ ಎಂದು ಮಾಜಿ ಶಿಕ್ಷಣ ಸಚಿವ, ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಆರೋಪಿಸಿದರು.
ಅವರು ಜೂ.12ರ ಸೋಮವಾರ ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ದೇಶದ ನೈಜ ಸ್ಥಿತಿ ತಿಳಿಸುವ ಸಂಗತಿ ಪಠ್ಯ ಪುಸ್ತಕದಲ್ಲಿ ಇದೆ. ಆದರೆ ಈಗ ಸ್ವತಃ ಮುಖ್ಯಮಂತ್ರಿಗಳು ಎಡ ಪಂಥಿಯ ವಿಚಾರ ಧಾರೆಯ ಕೈಗೊಂಬೆ ಆಗಿದ್ದಾರೆ. ಅದರ ಪರಿಣಾಮ ಪಠ್ಯ ಪರಿಷ್ಕರಣೆಯ ಆತುರವಾಗಿದೆ ಎಂದರು.
ಶಿಕ್ಷಣದ ವಿಷಯದಲ್ಲಿ ಮಕ್ಕಳ, ಶಿಕ್ಷಕರ, ಪಾಲಕರ ನಡುವೆ ಆತಂಕ ಮಾಡಬಾರದು ಎಂದ ಅವರು, ಈಗ ಪುಸ್ತಕ ಪೂರ್ಣವಾಗಿ ಬಂದಿದೆ. ಗೊಂದಲ ಗೂಡು ಶಿಕ್ಷಣ ಇಲಾಖೆ ಮಾಡಬಾರದು. ಕೆಲವರು ಬರೆದಿದ್ದಾರೆ ಎಂಬ ಕಾರಣಕ್ಕೆ ತೆಗೆಯುತ್ತಿದ್ದಾರೆ ಎಂದೂ ಹೇಳಿದರು.
ಟಿಪ್ಪುವೇ ಚೆಂದ ಕಾಣುವವರಿಗೆ ಭಾರತೀಯ ಇತಿಹಾಸ ಹೇಗೆ ಚೆಂದ ಕಾಣುತ್ತಾನೆ? ಸರಕಾರದ ಈ ನಿಲುವು ಖಂಡಿಸುತ್ತೇನೆ ಎಂದರು.
ಇತಿಹಾಸಕ್ಕೆ ಹಲವು ದೃಷ್ಟಿಯಿದೆ. ಆದರೆ, ಇತಿಹಾಸವನ್ನು ಭಾರತೀಯರಾಗಿ ಭಾರತೀಯ ದೃಷ್ಟಿಕೋನದಿಂದ ಶಿಕ್ಷಣ ಕಲಿಸಬೇಕಾಗಿದೆ. ಮೊಘಲರ, ಅಲೆಕ್ಸಾಂಡರ ದೃಷ್ಟಿಕೋನದಲ್ಲಿ ಕಲಿಸಬಾರದು. ಗುಲಾಮಿ ತನ ಮಾನಸಿಕತೆಯ ಶಿಕ್ಷಣಕ್ಕೆ ಖಂಡಿಸುತ್ತೇವೆ ಎಂದರು.
ಶಿಕ್ಷಣ ಪಠ್ಯದಲ್ಲಿ ಪೂರ್ವ ತಯಾರಿ ಇಲ್ಲದೇ ಬದಲಾವಣೆ ಸರಿಯಲ್ಲ. ಇದನ್ನು ಕೈ ಬಿಡಬೇಕು. ತನ್ನ ತನದ ಶಿಕ್ಷಣ ಕೊಡಬೇಕು. ನಿಲ್ಲಿಸದೇ ಹೋದರೆ ಸರಜಾರದ ವಿರುದ್ಧ ಹೋರಾಟ ರೂಪಿಸುತ್ತೇವೆ ಎಂದರು.
ಪಠ್ಯವು ಬೇರೆ ಬೇರೆ ಹಂತದಲ್ಲಿ ಪರಿಷ್ಕರಣೆ ಆಗಬೇಕು. ಪ್ರಜಾಪ್ರಭುತ್ವದ ಆಶಯಕ್ಕೆ ಇಂತಹ ನಿರ್ಣಯ ಸರಿಯಲ್ಲ. ಇವು ಕಾಂಗ್ರೆಸ್ ತಂತ್ರಗಾರಿಕೆಯಲ್ಲ, ಕುತಂತ್ರಗಾರಿಕೆಯಾಗಿದೆ ಎಂದೂ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಹೊಸತಾಗಿ ಆಯ್ಕೆ ಆಗಿದೆ. ಬೆಳೆವ ಸಿರಿ ಮೊಳಕೆಯಲ್ಲಿ ಎನ್ನುವ ಹಾಗೇ ಈ ಸರಕಾರದ ಪ್ರಾರಂಭಿಕ ದಿನಗಳು ರಾಜ್ಯದ ಜನರ ನಿರೀಕ್ಷೆ ಹುಸಿಗೊಳಿಸುತ್ತಿದೆ. ಸರಕಾರ ಗೊಂದಲದಲ್ಲಿದೆ. ಖಾತೆಯ ಬಗ್ಗೆ ಸಚಿವರು ತಿಳಿದುಕೊಳ್ಳುವ ಮೊದಲೇ ಗೊಂದಲದಲ್ಲಿ ಅವರೂ ಇದಾರೆ. ಗ್ಯಾರೆಂಟಿಗಳ ಗೊಂದಲದಲ್ಲಿ ಆಡಳಿತ ನಡೆಸುವದೇ ಆಗುತ್ತದಾ ಇಲ್ಲವಾ ಎಂಬುದು ಗೊತ್ತಾಗುತ್ತಿಲ್ಲ ಎಂದರು.
ಕಾಂಗ್ರೆಸ್ ಒಳ್ಳೆ ಆಡಳಿತ ನೀಡದೇ ಇದ್ದಾಗ ವಿವಾದ, ಗೊಂದಲ, ಸಮಸ್ಯೆ ಸೃಷ್ಟಿ ಮಾಡಿ ಗೊಂದಲ ಮಾಡುವದೇ ಕೆಲಸವಾಗಿದೆ. ಕಾಂಗ್ರೆಸ್ ಹಿಂದಿನ ನಿಲುವು ಮತ್ತೆ ಶುರು ಮಾಡಿದೆ ಎಂದರು.
ದ್ವೇಷ ರಾಜಕಾರಣದ ಮನಸ್ಥಿತಿ ಮಾಡುತ್ತಿದೆ. ರಾಜ್ಯದ ಹಲವಡೆ ಮಾಡುತ್ತಿದೆ. ದ್ವೇಷ ರಾಜಕಾರಣದಿಂದ ಸಂದೇಶ ಸಿಎಂ, ಡಿಸಿಎಂ ಅವರಿಂದಲೇ ಪಸರಿಸುತ್ತಿದೆ. ಇದು ಆತಂಕಕಾರಿ, ಅಪಾಯಕಾರಿ ವ್ಯವಸ್ಥೆ ಆಗಿದೆ ಎಂದರು.
ಹಿಂದಿನ ಬಿಜೆಪಿ ಸರಕಾರದಿಂದ ಮಂಜೂರಾದ ಅಭಿವೃದ್ದಿ ಗೆ ತಡೆ ಮಾಡಿದೆ. ಇದು ಅಭಿವೃದ್ದಿಗೆ ವಿರೋಧ ಎಂಬಂತೆ ಆಗಿದೆ ಎಂದ ಅವರು, ಬಿಜೆಪಿ ಮಂಜೂರಾದ ಕಾಮಗಾರಿ ಮುಂದುವರಿಸಬೇಕು. ಅಭಿವೃದ್ದಿಗೆ ಯಾವ ಸರಕಾರ ತಡೆ ಮಾಡಬಾರದು.
ಖಾತೆ ಸಮಯ ಆಗದೇ ಗೊಂದಲದಲ್ಲಿ ಇದೆ. ಇಲಾಖೆ ಜವಬ್ದಾರಿ ಕಾರ್ಯ ಮಾಡಬೇಕು ಎಂದರು.
ಈ ವೇಳೆ ರಾಜೇಶ ಶೆಟ್ಟಿ, ಉಷಾ ಹೆಗಡೆ, ನರಸಿಂಹ ಬಕ್ಕಳ, ಗುರುರಾಜ ಶಾಭಬಾಗ, ಮಾರುತಿ ನಾಯ್ಕ ಇದ್ದರು.
ಗ್ಯಾರೆಂಟಿ ಗೊಂದಲ ಇದೆ. ಚುನಾವಣೆ ಪೂರ್ವ ಹೇಳಿದ್ದು ಕಾಂಗ್ರೆಸ್ ಮಾಡಬೇಕು. ಈಗ ಏನ್ ಮಾಡಿದರೂ ನಡೆಯುತ್ತದೆ ಎಂದು ಕಾಂಗ್ರೆಸ್ ನಡೆದರೆ ಅದು ಜನತೆಗೆ ಮಾಡುವ ಮೋಸ. – ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಸ್ಪೀಕರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬೈಕನ್ನೇ ಬೆನ್ನಟ್ಟಿ ದಾಳಿ ಮಾಡಿದ ಕರಡಿಗಳು… ಗ್ರಾಮ ಪಂಚಾಯತ್ ಸದಸ್ಯನಿಗೆ ಗಂಭೀರ ಗಾಯ
Uttara kannada: ತಳಕು-ಬಳುಕಿನ ಹೊನ್ನಾವರ ನಿಲ್ದಾಣದೊಳಗೆ ಬರೀ ಹುಳುಕು!
ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ
Ankola; ವೃಕ್ಷಮಾತೆ ಪದ್ಮಶ್ರೀ ತುಳಸಿ ಗೌಡ ಇನ್ನಿಲ್ಲ
Ankola: ರಕ್ತದೊತ್ತಡ ಕುಸಿದ ಪರಿಣಾಮ ಕಬಡ್ಡಿ ಆಡುವಾಗಲೇ ಕ್ರೀಡಾಳು ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.