ಥೈಲ್ಯಾಂಡ್ ಗೆ ಓಡಿಹೋಗಲು ಚೀನಿಯರ ಪ್ಲ್ರಾನ್!
Team Udayavani, Jun 27, 2020, 11:24 AM IST
ಬ್ಯಾಂಕಾಕ್: ಕೋವಿಡ್ ವಿರುದ್ಧ ರಕ್ಷಣೆಗೆ ಏನು ಮಾಡೋದು? ಸ್ಯಾನಿಟೈಸರ್ ತರೋಣ, ಮಾಸ್ಕ್ ಹಾಕೋಣ ಎಂದೆಲ್ಲ ಜನ ಚಿಂತೆ ಮಾಡುತ್ತಿದ್ದರೆ ಚೀನದ ಶ್ರೀಮಂತರು ಥೈಲ್ಯಾಂಡ್‌ಗೆ ಓಡಿ ಹೋಗುವ ಪ್ಲಾನ್ ಮಾಡಿದ್ದಾರೆ!
ಬೀಜಿಂಗ್‌ನಲ್ಲಿ ಎರಡನೇ ಬಾರಿಗೆ ಕೋವಿಡ್ ಪ್ರಕರಣಗಳ ಸಂಖ್ಯೆ ಏರುತ್ತಿದ್ದು, ಅಲ್ಲಿನ ಸಂದಿಗ್ಧ ವಾತಾವರಣದಿಂದ ತಪ್ಪಿಸಿಕೊಳ್ಳಲು ಥಾçಲೆಂಡ್‌ಗೆ ಹೋಗುವ ಪ್ಲ್ರಾನ್ ರೂಪಿಸಿದ್ದಾರೆ. ಥೈಲ್ಯಾಂಡ್ ಪ್ರಿವಿಲೆಜ್ ಕಾರ್ಡ್ ಎಂಬ ವ್ಯವಸ್ಥೆಯಡಿ ಪ್ರವಾಸಿಗರು ಥೈಲ್ಯಾಂಡ್‌ನಲ್ಲಿ ಇರಬಹುದಾಗಿದ್ದು, ಇದಕ್ಕೆ ಫೆಬ್ರವರಿ ಯಿಂದ ಚೀನಿಯರು ಅರ್ಜಿ ಸಲ್ಲಿಸುತ್ತಿರುವ ಪ್ರಮಾಣ ಹೆಚ್ಚಾಗಿದೆ. ಸುಮಾರು 20 ವರ್ಷ ರೀ-ಎಂಟ್ರಿ ವೀಸಾವನ್ನು ಇದು ಕೊಡುತ್ತದೆ. ಇದರಿಂದ ಈ ಅವಧಿಯಲ್ಲಿ ಎಷ್ಟು ಸಲವೂ ಹೋಗಿ ಬರಬಹುದು. ಚೀನದಲ್ಲಿ ಕೋವಿಡ್ ಸಂಖ್ಯೆ ಏರುತ್ತಿದ್ದಂತೆ, ಅಲ್ಲಿಂದ ಕಾರ್ಡ್ ಬಗ್ಗೆ ವಿಚಾರಣೆ ನಡೆಸುವವರೂ ಹೆಚ್ಚುತ್ತಿದ್ದಾರೆ ಎಂದು ಏಜೆಂಟರು ಹೇಳು ತ್ತಿದ್ದಾರೆ. ಆರಂಭದಲ್ಲಿ ಲಾಕ್‌ಡೌನ್ ಕಂಡಿದ್ದ ಬೀಜಿಂಗ್‌ನಲ್ಲಿ ಜೂ.12ರ ಬಳಿಕ ಮತ್ತೆ ಕೋವಿಡ್ ಭೀತಿ ಶುರುವಾಗಿದೆ.
ಈಗ ಅಲ್ಲಿನ ಪ್ರಕರಣಗಳ ಸಂಖ್ಯೆ 158 ಆಗಿದ್ದು, ರೋಗ ಲಕ್ಷಣ ಇಲ್ಲದೆ ಇರುವವರ ಸಂಖ್ಯೆ ಏರುತ್ತಲೇ ಇದೆ. ಅತಿ ಹೆಚ್ಚು ಅಪಾಯ ಇರುವ ಪ್ರದೇಶದಲ್ಲಿರುವ ಜನರಿಗೆ ನಗರದಿಂದ ಹೊರಗೆ ಹೋಗಲು ಅವಕಾಶವಿಲ್ಲದಿದ್ದರೂ ಇತರರಿಗೆ ಇದೆ. ಆದ್ದರಿಂದ ಕೋವಿಡ್ ಇಲ್ಲ ಎಂಬ ಪ್ರಮಾಣ ಪತ್ರ ಪಡೆದು ಅಲ್ಲಿಂದ ಪಾರಾಗುವ ಯೋಚನೆಯಲ್ಲಿ ಹಲವು ಶ್ರೀಮಂತರಿದ್ದಾರೆ ಎಂದು ಹೇಳಲಾಗಿದೆ. ಈ ವರೆಗೆ ವಿಶೇಷ “ಎಲೈಟ್ ವೀಸಾ’ ಪಡೆದವರಲ್ಲಿ 9578 ಮಂದಿ ಇದ್ದರೆ ಇವರಲ್ಲಿ ಚೀನೀಯರ ಪ್ರಮಾಣ ಶೇ.20ಷ್ಟಿದೆ. ಉಳಿದಂತೆ ಅಮೆರಿಕ, ಆಸ್ಟ್ರೇಲಿಯಾ, ಬ್ರಿಟನ್‌ನವರು ಇದರಲ್ಲಿದ್ದಾರೆ ಎಂದು ಮೂಲಗಳು ಹೇಳಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್ ಪರೀಕ್ಷೆ
Iran: ಹಿಜಾಬ್ ನಿರಾಕರಿಸಿದರೆ ವಿಶೇಷ ಕ್ಲಿನಿಕ್: ಇರಾನ್ ತೀರ್ಮಾನಕ್ಕೆ ಆಕ್ರೋಶ
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
MUST WATCH
ಹೊಸ ಸೇರ್ಪಡೆ
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ
IPL Auction: ಸಂಪೂರ್ಣ ಐಪಿಎಲ್ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.