ದೋಸ್ತಿಗಳ ಹೇಳಿಕೆ ವಿಪಕ್ಷಕ್ಕೆ ಅಸ್ತ್ರವಾಗದಿರಲೆಂಬ ಆಶಯ ನನ್ನದು


Team Udayavani, May 20, 2019, 3:08 AM IST

dostigala

ಹುಬ್ಬಳ್ಳಿ: “ಸಮ್ಮಿಶ್ರ ಸರಕಾರ ಸುಗಮವಾಗಿ ಸಾಗಬೇಕು. ರಾಜ್ಯದ ಜನರು ಹಾಗೂ ಅಧಿಕಾರಿಗಳಿಗೆ ಗೊಂದಲದ ವಾತಾವರಣ ಇರಬಾರದು. ಪಾಲುದಾರ ಪಕ್ಷಗಳ ಮುಖಂಡರೇ ತಮ್ಮ ಹೇಳಿಕೆಗಳ ಮೂಲಕ ವಿಪಕ್ಷಕ್ಕೆ ಅಸ್ತ್ರಗಳನ್ನು ನೀಡುವಂತಾಗಬಾರದು ಎಂಬ ಉದ್ದೇಶವೇ ವಿನ: ಸಮ್ಮಿಶ್ರ ಸರಕಾರ ಬೀಳಲಿ ಎಂಬುದಾಗಲಿ, ವೈಯಕ್ತಿಕ ಲಾಭ-ನಷ್ಟದ ಸ್ವಾರ್ಥವಂತೂ ಇಲ್ಲವೇ ಇಲ್ಲ…’

ಇದು ವಿಧಾನಪರಿಷತ್‌ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಸ್ಪಷ್ಟ ಮಾತು. “ಮೈತ್ರಿಕೂಟದಲ್ಲಿ ಗೊಂದಲ ಮುಂದುವರಿಯುವ ಬದಲು ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಹೋಗುವುದು ಲೇಸು’ ಎಂಬ ರಾಜಕೀಯ ಸಂಚಲನ ಮೂಡಿಸಿದ ತಮ್ಮ ಹೇಳಿಕೆಯ ಹಿಂದಿನ ಉದ್ದೇಶ ಹಾಗೂ ಆಶಯ ಕುರಿತು ಭಾನುವಾರ “ಉದಯವಾಣಿ’ ಜತೆ ಮಾತನಾಡಿದ ಅವರು, ತಮ್ಮ ಹೇಳಿಕೆ ಉದ್ದೇಶಪೂರ್ವಕದ್ದಲ್ಲ ಎಂಬುದನ್ನು ಸ್ಪಷ್ಟಪಡಿಸಿದರು.

ಮಾಧ್ಯಮ ಸ್ನೇಹಿತರೊಬ್ಬರು ಅನೌಪಚಾರಿಕ ಮಾತುಕತೆ ವೇಳೆ ಸಿಎಂ ಹುದ್ದೆ ವಿಚಾರ ಹಾಗೂ ಗೊಂದಲ ಹೇಳಿಕೆಗಳ ಬಗ್ಗೆ ಪ್ರಸ್ತಾಪಿಸಿದ್ದರು. ಆಗ ಮುಖ್ಯಮಂತ್ರಿ ಇದ್ದಾಗಲೂ ಇನ್ನೊಬ್ಬರ ಹೆಸರು ಪ್ರಸ್ತಾಪಿಸುವುದು ಸರಿಯಲ್ಲ. ಗೊಂದಲ ಹೆಚ್ಚುತ್ತ ಹೋದರೆ ಇದರ ಬದಲು ಚುನಾವಣೆಗೆ ಹೋಗುವುದೇ ಲೇಸಲ್ಲವೇ ಎಂದು ಸಹಜವಾಗಿ ವೈಯಕ್ತಿಕ ಅನಿಸಿಕೆ ವ್ಯಕ್ತಪಡಿಸಿದ್ದೇನೆ. ವಿನ: ಇದನ್ನು ಉದ್ದೇಶಪೂರ್ವಕವಾಗಿ ಹೇಳಿದ್ದಲ್ಲ ಎಂದರು.

1980ರಿಂದ ಸಕ್ರಿಯ ರಾಜಕೀಯದಲ್ಲಿದ್ದೇನೆ. ಯಾರು ಏನೇ ಟೀಕೆ ಮಾಡಲಿ, ನನಗೂ ಅಷ್ಟು, ಇಷ್ಟು ರಾಜಕೀಯ ಅನುಭವ ಎಂಬುದಿದೆ. ನನ್ನ ಹೇಳಿಕೆ ಒಟ್ಟಾರೆ ಆಶಯ-ಉದ್ದೇಶ ಕುರಿತು ಅರ್ಧಸತ್ಯ ಅರ್ಥ ಮಾಡಿಕೊಂಡರೆ ಅಥವಾ ಅರ್ಧ ತೋರಿಸಿದರೆ ಅಪಾರ್ಥ ಮೂಡಬಹುದು. ಆದರೆ, ಪೂರ್ಣ ಸತ್ಯ ತಿಳಿದರೆ ಸಮ್ಮಿಶ್ರ ಸರಕಾರದ ಆಶಯ-ಬಾಂಧವ್ಯ ಗಟ್ಟಿಗೊಳಿಸುವ ಉದ್ದೇಶ ಅಡಗಿದೆ ವಿನ: ಅದನ್ನು ಅಸ್ಥಿರಗೊಳಿಸುವುದಲ್ಲ ಎಂಬುದು ಸ್ಪಷ್ಟವಾಗಲಿದೆ ಎಂದರು.

ಅಭಿವೃದ್ಧಿ ಮಾಸದಿರಲಿ: ಸಮ್ಮಿಶ್ರ ಸರಕಾರದಲ್ಲಿ ಕುಮಾರಸ್ವಾಮಿಯವರು ರೈತರ ಸಾಲಮನ್ನಾ, ಬಡವರ ಬಂಧು ಸಹಿತ ಹಿಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರದ ಹಲವು ಅಭಿವೃದ್ಧಿ ಹಾಗೂ ಜನಪರ ಯೋಜನೆಗಳನ್ನು ಮುಂದುವರೆಸಿದ್ದಾರೆ. ಸರಕಾರ ಉತ್ತಮ ಯೋಜನೆ, ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತಿದ್ದರೂ ಸಾಧನೆಗಳಿಗಿಂತ ನಿತ್ಯ ಬೆಳಗಾದರೆ ಮಿತ್ರ ಪಕ್ಷಗಳ ಮುಖಂಡರ ಪರಸ್ಪರ ಹೇಳಿಕೆ, ವಿವಾದ-ಅನಿಸಿಕೆಗಳೇ ವಿಜೃಂಭಿಸುತ್ತಿವೆ.

ಅಭಿವೃದ್ಧಿ ಮಾಯವಾಗಿ, ಸರಕಾರ ಯಾವ ಅಭಿವೃದ್ಧಿ ಕಾರ್ಯಗಳನ್ನೇ ಮಾಡಿಲ್ಲವೇನೋ ಎಂಬಂತೆ ಜನರ ಮುಂದೆ ಬಿಂಬಿತವಾಗತೊಡಗಿದೆ. ಪಾಲುದಾರ ಪಕ್ಷಗಳ ಹೇಳಿಕೆಗಳನ್ನೇ ಬಂಡವಾಳ ಮಾಡಿಕೊಂಡು ಬಿಜೆಪಿಯವರು ಮಿತ್ರಪಕ್ಷಗಳಲ್ಲಿ ಅಸಮಾಧಾನ ಭುಗಿಲೆದ್ದಿದೆ, ಶೀಘ್ರದಲ್ಲೇ ಸಮ್ಮಿಶ್ರ ಸರಕಾರ ಪತನಗೊಳ್ಳಲಿದೆ ಎಂದು ಬಿಂಬಿಸುವ ಕೆಲಸ ಮಾಡುತ್ತಿದ್ದಾರೆ. ಇದು ರಾಜ್ಯದ ಜನ ಹಾಗೂ ಅಧಿಕಾರಿಗಳಲ್ಲಿ ಗೊಂದಲ ಸೃಷ್ಟಿಸಿ, ಆಡಳಿತದ ಮೇಲೂ ಪರಿಣಾಮ ಬೀರುತ್ತಿದೆ.

ಇಂತಹ ಗೊಂದಲ ಇರಬಾರದು ಎಂಬುದೇ ನನ್ನ ಉದ್ದೇಶ ಎಂದು ತಿಳಿಸಿದರು. ರಾಹುಲ್‌ಗಾಂಧಿ, ಎಚ್‌.ಡಿ.ದೇವೇಗೌಡರ ತೀರ್ಮಾನದಿಂದ ಸಮ್ಮಿಶ್ರ ಸರಕಾರ ರಚನೆಗೊಂಡಿದೆ. ಸರಕಾರಕ್ಕೆ ಇನ್ನೂ ನಾಲ್ಕು ವರ್ಷ ಆಡಳಿತಾವಧಿ ಇದೆ. ಎರಡು ಪಾಲುದಾರ ಪಕ್ಷಗಳ ಪರಸ್ಪರ ಹೇಳಿಕೆಗಳಿಂದ ಗೊಂದಲ, ಅಪನಂಬಿಕೆ ಹೆಚ್ಚಬಾರದು ಎಂಬುದು ನನ್ನ ಕಳಕಳಿಯೂ ಕೂಡ ಎಂದರು.

ಉತ್ತಮ ಆಡಳಿತಕ್ಕೆ ಅವಕಾಶ ನಿರ್ಮಾಣವಾಗಲಿ: ಅಧಿಕಾರಕ್ಕೆ ಬಂದ ಒಂದೇ ವರ್ಷದಲ್ಲಿ ವಿಧಾನಸಭೆ ವಿಸರ್ಜನೆ ಮಾಡಿದರೆ ಮೊದಲ ಬಾರಿಗೆ ಆಯ್ಕೆಯಾದ ಶಾಸಕರಿಗಷ್ಟೇ ಅಲ್ಲ. ಎಲ್ಲ ಶಾಸಕರಿಗೂ ತೊಂದರೆ ಆಗುತ್ತದೆ. ಅನಗತ್ಯ ವೆಚ್ಚಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ ಎಂಬ ಸಂಪೂರ್ಣ ಅರಿವು ನನಗಿದೆ. ಈ ಹಿಂದೆ ಬಿಜೆಪಿಯವರು “ಆಪರೇಷನ್‌ ಕಮಲ’ ಮೂಲಕ ಅನೇಕ ಶಾಸಕರನ್ನು ಸೆಳೆದು ಉಪ ಚುನಾವಣೆ ಸೃಷ್ಟಿಸಿದ ಸಂದರ್ಭ ತೀವ್ರವಾಗಿ ಟೀಕಿಸಿದ್ದೆ.

ನನ್ನ ಮೂಲ ಆಶಯ ಇಷ್ಟೇ. ಸಮ್ಮಿಶ್ರ ಸರಕಾರದ ಪಾಲುದಾರ ಪಕ್ಷಗಳಲ್ಲಿ ಪರಸ್ಪರ ಅಪನಂಬಿಕೆ, ಟೀಕೆ ಮಾದರಿ ಹೇಳಿಕೆಗಳು ನಿಲ್ಲಬೇಕು. ಮುಖ್ಯಮಂತ್ರಿಗೆ ಉತ್ತಮ ರೀತಿಯಲ್ಲಿ ಆಡಳಿತ ನಡೆಸಲು ಮುಕ್ತ ಅವಕಾಶದ ವಾತಾವರಣ ನಿರ್ಮಾಣ ಆಗಬೇಕು. ಅನುಮಾನ, ಶಂಕೆ, ಗೊಂದಲದಿಂದ ಸಮ್ಮಿಶ್ರ ಸರಕಾರವನ್ನು ಜನರು ನೋಡುವಂತಾಗಿರುವ ವಾತಾವರಣ ಬದಲಾಗಬೇಕು ಎಂಬುದಾಗಿದೆ.

ನನ್ನ ಹೇಳಿಕೆ ಕುರಿತು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ವಿಶ್ವನಾಥ, ಸಚಿವರಾದ ಆರ್‌.ವಿ.ದೇಶಪಾಂಡೆ, ಸತೀಶ ಜಾರಕಿಹೊಳಿ, ಎಂ.ಬಿ.ಪಾಟೀಲ ಇನ್ನಿತರರು ಟೀಕಿಸಿದ್ದಾರೆ. ಯಾರು ಟೀಕಿಸಿದರೂ ನನಗೇನೂ ಬೇಜಾರು ಇಲ್ಲ. ನಾನು ಉಡಾಫೆಯಾಗಿಯೂ ಹೇಳಿಕೆ ನೀಡಿಲ್ಲ. ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಹೋಗಿಯೇ ಬಿಡೋಣ ಎಂಬುದು ನನ್ನ ಅನಿಸಿಕೆ ಆಗಿರಲಿಲ್ಲ . ನನ್ನ ಹೇಳಿಕೆಯಿಂದ ಯಾವುದೇ ಪಕ್ಷದ ಶಾಸಕರಿಗೂ ಚುನಾವಣೆಗೆ ಹೋಗುವುದು ಬೇಡವಾಗಿದೆ ಎಂಬುದು ಸಹ ಸ್ಪಷ್ಟಗೊಂಡಿತು.

* ಅಮರೇಗೌಡ ಗೋನವಾರ

ಟಾಪ್ ನ್ಯೂಸ್

PM Modi: ಇಂದು ಕೆನ್‌-ಬೆತ್ವಾ ನದಿ ಜೋಡಣೆಗೆ ಮೋದಿ ಶಂಕುಸ್ಥಾಪನೆ

PM Modi: ಇಂದು ಕೆನ್‌-ಬೆತ್ವಾ ನದಿ ಜೋಡಣೆಗೆ ಮೋದಿ ಶಂಕುಸ್ಥಾಪನೆ

AB-Vajapaee

A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್‌ ಬಿಹಾರಿ ವಾಜಪೇಯಿ

ದಾಖಲಾದ ಮತದಲ್ಲಿಏರಿಕೆ ಆಗುವುದು ಸಾಮಾನ್ಯ: ಚುನಾವಣಾ ಆಯೋಗ

Election Commission: ದಾಖಲಾದ ಮತದಲ್ಲಿಏರಿಕೆ ಆಗುವುದು ಸಾಮಾನ್ಯ

electricity

Financial Status: 42,000 ಕೋಟಿ ರೂ. ಸಾಲದ ಸುಳಿಯಲ್ಲಿ ಎಸ್ಕಾಂಗಳು!

Flights: ಇನ್ಮುಂದೆ ವಿಮಾನಗಳಲ್ಲಿ 7 ಕೆ.ಜಿ. ಮೀರದ ಕೇವಲ 1 ಬ್ಯಾಗ್‌ಗಷ್ಟೇ ಅವಕಾಶ!

Flights: ಇನ್ಮುಂದೆ ವಿಮಾನಗಳಲ್ಲಿ 7 ಕೆ.ಜಿ. ಮೀರದ ಕೇವಲ 1 ಬ್ಯಾಗ್‌ಗಷ್ಟೇ ಅವಕಾಶ!

CT-Ravi-BJP

Derogatary Term: ಸಿ.ಟಿ.ರವಿ ಪ್ರಕರಣಗಳು ಸಿಐಡಿ ತನಿಖೆಗೆ

ABV3

A.B.Vajapayee Birth Century: ಸರಳತೆಯ ಸಾಕಾರಮೂರ್ತಿ ನಮ್ಮ ವಾಜಪೇಯಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

electricity

Financial Status: 42,000 ಕೋಟಿ ರೂ. ಸಾಲದ ಸುಳಿಯಲ್ಲಿ ಎಸ್ಕಾಂಗಳು!

CT-Ravi-BJP

Derogatary Term: ಸಿ.ಟಿ.ರವಿ ಪ್ರಕರಣಗಳು ಸಿಐಡಿ ತನಿಖೆಗೆ

ABV3

A.B.Vajapayee Birth Century: ಸರಳತೆಯ ಸಾಕಾರಮೂರ್ತಿ ನಮ್ಮ ವಾಜಪೇಯಿ

Basa-Horatti

ಮೇಲ್ಮನೆಗೆ ನಾನೇ ಫೈನಲ್‌, ನನ್ನ ಹಕ್ಕುಚ್ಯುತಿ ಬಗ್ಗೆ ಕಾನೂನು ತಜ್ಞರ ಜತೆ ಸಮಾಲೋಚಿಸಿ ಕ್ರಮ

Sathish-sail–court

Belekeri Mining Case: ಕಾಂಗ್ರೆಸ್‌ ಶಾಸಕ ಸತೀಶ್‌ ಸೈಲ್‌ ಜೈಲು ಶಿಕ್ಷೆಗೆ ಹೈಕೋರ್ಟ್‌ ತಡೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

PM Modi: ಇಂದು ಕೆನ್‌-ಬೆತ್ವಾ ನದಿ ಜೋಡಣೆಗೆ ಮೋದಿ ಶಂಕುಸ್ಥಾಪನೆ

PM Modi: ಇಂದು ಕೆನ್‌-ಬೆತ್ವಾ ನದಿ ಜೋಡಣೆಗೆ ಮೋದಿ ಶಂಕುಸ್ಥಾಪನೆ

AB-Vajapaee

A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್‌ ಬಿಹಾರಿ ವಾಜಪೇಯಿ

ದಾಖಲಾದ ಮತದಲ್ಲಿಏರಿಕೆ ಆಗುವುದು ಸಾಮಾನ್ಯ: ಚುನಾವಣಾ ಆಯೋಗ

Election Commission: ದಾಖಲಾದ ಮತದಲ್ಲಿಏರಿಕೆ ಆಗುವುದು ಸಾಮಾನ್ಯ

electricity

Financial Status: 42,000 ಕೋಟಿ ರೂ. ಸಾಲದ ಸುಳಿಯಲ್ಲಿ ಎಸ್ಕಾಂಗಳು!

Flights: ಇನ್ಮುಂದೆ ವಿಮಾನಗಳಲ್ಲಿ 7 ಕೆ.ಜಿ. ಮೀರದ ಕೇವಲ 1 ಬ್ಯಾಗ್‌ಗಷ್ಟೇ ಅವಕಾಶ!

Flights: ಇನ್ಮುಂದೆ ವಿಮಾನಗಳಲ್ಲಿ 7 ಕೆ.ಜಿ. ಮೀರದ ಕೇವಲ 1 ಬ್ಯಾಗ್‌ಗಷ್ಟೇ ಅವಕಾಶ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.