Tongue: ನಾಲಗೆಯ 6ನೇ ಪ್ರಾಥಮಿಕ ರುಚಿ ಪತ್ತೆ!
- ಅಮೋನಿಯಂ ಕ್ಲೋರೈಡ್ ಸ್ವಾದವನ್ನು ಗ್ರಹಿಸಿದ ನಾಲಗೆ
Team Udayavani, Oct 7, 2023, 9:02 PM IST
ಲಂಡನ್: ಮನುಷ್ಯನ ನಾಲಗೆಯು ಸಿಹಿ, ಹುಳಿ, ಉಪ್ಪು, ಕಹಿ ಮತ್ತು ಉಮಾಮಿ ಎಂಬ ಐದು ಮೂಲ ರುಚಿಗಳನ್ನು ಗುರುತಿಸುವ ರಸಾಗ್ರಗಳನ್ನು ಹೊಂದಿವೆ ಎಂಬುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಹೊಸ ವಿಷಯವೇನೆಂದರೆ, ಈಗ 6ನೇ ಪ್ರಾಥಮಿಕ ರುಚಿಯಾಗಿ ನಮ್ಮ ನಾಲಗೆಯು “ಅಮೋನಿಯಂ ಕ್ಲೋರೈಡ್” ರುಚಿಯನ್ನೂ ಗುರುತಿಸುತ್ತದೆ ಎಂಬ ಮಹತ್ವದ ಅಂಶವನ್ನು ಸಂಶೋಧಕರು ಕಂಡುಕೊಂಡಿದ್ದಾರೆ.
ನೇಚರ್ ಕಮ್ಯೂನಿಕೇಷನ್ಸ್ ಎಂಬ ನಿಯತಕಾಲಿಕೆಯಲ್ಲಿ ಈ ಸಂಶೋಧನಾ ಪ್ರಬಂಧವು ಪ್ರಕಟವಾಗಿದೆ. ಅದರಂತೆ, ನಾಲಗೆಯಲ್ಲಿರುವ ಹುಳಿಯನ್ನು ಗುರುತಿಸಬಲ್ಲಂಥ ರಸಾಗ್ರವು ಅಮೋನಿಯಂ ಕ್ಲೋರೈಡ್‌ಗೂ ಸ್ಪಂದಿಸುತ್ತದೆ. ಸ್ಕ್ಯಾಂಡಿನೇವಿಯಾದ ಕ್ಯಾಂಡಿಗಳಲ್ಲಿ ಇರುವಂಥ ಅಮೋನಿಯಂ ಕ್ಲೋರೈಡ್ ಎಂಬ ವಿಶಿಷ್ಟವಾದ ರುಚಿಯನ್ನು ನಮ್ಮ ನಾಲಗೆ ಗುರುತಿಸುತ್ತದೆ ಎಂಬುದನ್ನು ಈ ವರದಿಯಲ್ಲಿ ಉಲ್ಲೇಖೀಸಲಾಗಿದೆ.
ನೀವು ಸ್ಕ್ಯಾಂಡಿನೇವಿಯಾದ ದೇಶಗಳಲ್ಲಿ ವಾಸಿಸುತ್ತಿದ್ದರೆ, ಈ ಹೊಸ ರುಚಿಯನ್ನು ನೋಡಿರುತ್ತೀರಿ ಎಂದು ನರವಿಜ್ಞಾನಿ ಹಾಗೂ ಈ ಅಧ್ಯಯನದ ಸಹ ಲೇಖಕ ಎಮಿಲಿ ಲಿಮಾನ್ ಹೇಳಿದ್ದಾರೆ. 20ನೇ ಶತಮಾನದ ಆರಂಭದಿಂದಲೂ ಉತ್ತರ ಯುರೋಪ್ ದೇಶಗಳಲ್ಲಿ ಸಾಲ್ಟ್ ಲಿಕೋರಿಸ್ ಎಂಬ ಕ್ಯಾಂಡಿಯು ಬಹಳ ಜನಪ್ರಿಯತೆ ಪಡೆದಿದೆ. ಈ ಕ್ಯಾಂಡಿಯಲ್ಲಿ ಸಾಲ್ಮಿಯಾಕ್ ಸಾಲ್ಟ್ ಅಥವಾ ಅಮೋನಿಯಂ ಕ್ಲೋರೈಡ್ ಅನ್ನು ಬಳಸಲಾಗುತ್ತದೆ. ನಾಲಗೆಯಲ್ಲಿರುವ ಜೀವಕೋಶಗಳ ಪೊರೆಗಳಲ್ಲಿ ರಸಾಗ್ರಗಳಿದ್ದು, ಇವು ಅಮೋನಿಯಂ ಕ್ಲೋರೈಡ್‌ನ ಸ್ವಾದವನ್ನೂ ಗ್ರಹಿಸಿ ಸ್ಪಂದಿಸಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.