![Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?](https://www.udayavani.com/wp-content/uploads/2025/02/6-20-415x249.jpg)
![Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?](https://www.udayavani.com/wp-content/uploads/2025/02/6-20-415x249.jpg)
Team Udayavani, Apr 19, 2020, 7:10 AM IST
ಮುಂಬಯಿ: ಹಿರಿಯ ನಾಗರಿಕರು ತಮ್ಮ ಮನೆ ಬಾಗಿಲಿನಲ್ಲೇ ಬ್ಯಾಂಕಿಂಗ್ ಸೇವೆ ಪಡೆದುಕೊಳ್ಳಬಹುದಾಗಿದೆ. ಈ ಕುರಿತು ಬ್ಯಾಂಕ್‌ಗಳಿಗೆ ಅರ್‌ಬಿಐ ಸಲಹೆ ನೀಡಿದ್ದು, 70 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ನಗದು, ಚೆಕ್, ಡಿಮ್ಯಾಂಡ್ ಡ್ರಾಫ್ಟ್ ಮತ್ತಿತರ ಸೇವೆಗಳನ್ನು ಮನೆ ಬಾಗಿಲಿಗೆ ತಲುಪಿಸಬೇಕು ಎಂದು ತಿಳಿಸಿದೆ.
ವೈದ್ಯಕೀಯ ಸೇವೆ, ಔಷಧ, ತುರ್ತು ಅಗತ್ಯ ವಸ್ತುಗಳನ್ನು ಪಡೆದುಕೊಳ್ಳಲು ನೆರವಾಗಲು ಈ ಕ್ರಮ ಕೈಗೊಂಡಿದೆ. ಈ ಕುರಿತು ಎಸ್‌ಬಿಐ ಟೋಲ್ ಫ್ರೀ ನಂಬರ್(1800111103) ತೆರೆದಿದ್ದು, ಕೆಲಸದ ಅವಧಿಯಲ್ಲಿ ಸಂಪರ್ಕಿಬಹುದಾಗಿದೆ. ತಮ್ಮ ಶಾಖೆಯಿಂದ 5 ಕಿ.ಮೀ. ವ್ಯಾಪ್ತಿಯಲ್ಲಿ ಕೆವೈಸಿ ಪ್ರಕ್ರಿಯೆ ಪೂರೈಸಿರುವ ಹಿರಿಯ ನಾಗರಿಕರು ಹಾಗೂ ದಿವ್ಯಾಂಗರ ಮನೆ ಬಾಗಿಲಿಗೆ ಬ್ಯಾಂಕಿಂಗ್ ಸೇವೆ ನೀಡಲಾಗುವುದು ಎಂದು ಹೇಳಿದೆ. ದಿನಕ್ಕೆ ಕನಿಷ್ಠ 1 ಸಾವಿರ ರೂ. ಹಾಗೂ ಗರಿಷ್ಠ 20 ಸಾವಿರ ರೂ. ಪಡೆದುಕೊಳ್ಳಲು ಅವಕಾಶ ಇದೆ.
You seem to have an Ad Blocker on.
To continue reading, please turn it off or whitelist Udayavani.