ದಿ ಬೆಸ್ಟ್ ಆ್ಯಕ್ಟರ್‌ಎಂಬ ಮೈಕ್ರೋ ಮೂವಿ
ಸಖತ್ ಸ್ಟುಡಿಯೋದಲ್ಲೊಂದು ಸಖತ್ ಸಿನ್ಮಾ
Team Udayavani, Apr 13, 2020, 10:15 AM IST
ಕನ್ನಡದಲ್ಲಿ ಈಗಾಗಲೇ ಸಾಕಷ್ಟು ಕಿರುಚಿತ್ರಗಳು ಬಂದಿವೆ. ಒಂದುವರೆ ತಾಸಿನ ಸಿನಿಮಾಗಳೂ ಬಂದಿದೆ. ಈಗ ಕೇವಲ 43 ನಿಮಿಷ ಅವಧಿಯ “ದಿ ಬೆಸ್ಟ್ ಆ್ಯಕ್ಟರ್’ ಎಂಬ ಮೈಕ್ರೋ ಸಿನಿಮಾ ಬಂದಿದೆ. ಹೌದು, ಆರ್.ಜೆ.ಪ್ರದೀಪ್ ಅವರ ಸಖತ್ ಸ್ಟುಡಿಯೋದಲ್ಲಿ ಈಗ ಈ ಸಿನಿಮಾ ಲಭ್ಯವಿದ್ದು, ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಸರ್ವಸ್ವ ಪ್ರೊಡಕ್ಷನ್ಸ್ ಹಾಗು ದಿನೇಶ್ ವೈದ್ಯ ಅಂಪಾರು ಈ ಮೈಕ್ರೋ ಸಿನಿಮಾವನ್ನು ನಿರ್ಮಿಸಿದ್ದಾರೆ.
ಈ ಚಿತ್ರಕ್ಕೆ ನಾಗರಾಜ್ ಸೋಮಯಾಜಿ ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ಶ್ರೀಧರ ಬನವಾಸಿ ಅವರ “ಬ್ರಿಟಿಷ್ ಬಂಗ್ಲೆ ‘ ಕಥೆಯನ್ನು ಸಿನಿಮಾ ಮಾಡಲಾಗಿದೆ. ಚಿತ್ರದಲ್ಲಿ ಸಂಚಾರಿ ವಿಜಯ್ ಪ್ರಮುಖ ಆಕರ್ಷಣೆ ಉಳಿದಂತೆ ಮಾಧವ ಕಾರ್ಕಡ , ಶಿಶಿರ್‌ಕುಮಾರ್, ಮಾಸ್ಟರ್ ಉಲ್ಲಾಸ್ ಸಾಲಿಗ್ರಾಮ, ಪ್ರತಿಮಾ ನಾಯಕ್ ಇತರರು ಅಭಿನಯಿಸಿದ್ದಾರೆ. ಇನ್ನು, ನಿರ್ದೇಶಕ ನಾಗರಾಜ್ ಸೋಮಯಾಜಿ ಅವರಿಗೆ ಇದು ಮೊದಲ ಪ್ರಯತ್ನ. ಈ ಹಿಂದೆ ಇವರು ಸಂಚಾರಿ ಥಿಯೇಟರ್‌ನಲ್ಲಿ ರಂಗ ಚಟುವಟಿಕೆಯಲ್ಲಿ ತೊಡಗಿಕೊಂಡು ನಂತರ ತಮ್ಮದೇ ಸರ್ವಸ್ವ ಎಂಬ ರಂಗ ಕಟ್ಟಿ ಆ ಬಳಿಕ ಈ ಸಿನಿಮಾ ಮಾಡಿದ್ದಾರೆ.
“ದಿ ಬೆಸ್ಟ್ ಆ್ಯಕ್ಟರ್’ ಸಿನಿಮಾ ಬಗ್ಗೆ ಹೇಳುವುದಾದರೆ, ಇದೊಂದು ವ್ಯಕ್ತಿಯೊಬ್ಬನ ಸಾಧನೆಯ ಹಾದಿಯಲ್ಲಿ ಅನುಭವಿಸುವ ತವಕ ತಲ್ಲಣಗಳನ್ನು
ಕೇಂದ್ರವಾಗಿರಿಸಿಕೊಂಡು ಮಾಡಲಾಗಿದೆ. ಪ್ರತಿ ವ್ಯಕ್ತಿ ತನ್ನ ಬದುಕನ್ನು ಉನ್ನತಗೊಯ್ಯುವ ತುಡಿತ ಹಾಗು ಆ ನಿಟ್ಟಿನಲ್ಲಿ ಶ್ರಮಿಸಬೇಕಾಗಿರುವ ದೀರ್ಘ ಪಯಣದ ನಡುವೆ ನಡೆಯುವ ಸಂಘರ್ಷಕ್ಕೆ ಸಾಕ್ಷಿಯಾಗಿರುತ್ತಾನೆ. ಕಂಡ ಕನಸು, ಅದನ್ನು ನನಸಾಗಿಸಿಕೊಳ್ಳಲು ಬೇಕಾದ ನಿಷ್ಠೆ, ಆ ನಿಷ್ಠೆಯನ್ನು ಪೋಷಿಸಬಲ್ಲ, ಪ್ರತಿಭೆ ಹಾಗು ಆ ಪ್ರತಿಭೆಯನ್ನು ಕಾದು ಸಲಹಬಲ್ಲ, ಶಕ್ತಿ ಇವುಗಳಲ್ಲಿ ಒಂದರ ಅನುಪಸ್ಥಿತಿ ಕಾಡಿದದೂ ಆಗಬಲ್ಲ, ಅವಘಡ ಕುರಿತು ಈ ಸಿನಿಮಾ ಹೇಳಲಿದೆ. ಭಾಸ್ಕರ ಬಂಗೇರ ಸಂಭಾಷಣೆ ಬರೆದಿದ್ದರೆ. ಎಸ್.ಕೆ.ರಾವ್ ಛಾಯಾಗ್ರಹಣವಿದೆ. ಅರ್ಜುನ್ ರಾಮ್ ಸಂಗೀತವಿದೆ. ಬಿ.ಎಸ್.ಸಂಕೇತ್ ಸಂಕಲನ ಮಾಡಿದ್ದಾರೆ.
ಕುಂದಾಪುರ ಹಾಗು ಸಾಲಿಗ್ರಾಮ ಪರಿಸರದಲ್ಲಿ ಚಿತ್ರೀಕರಣವಾಗಿದೆ. ಕುಂದಾಪುರ ಪರಿಸರದ ಭಾಷೆ ಹಾಗು ಅಲ್ಲಿನ 90 ರ ದಶಕದ ಜನಜೀವನ ಚಿತ್ರದಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
ZEBRA Movie: ಜೀಬ್ರಾ ಮೇಲೆ ಡಾಲಿ ಕಣ್ಣು
Drone Prathap: ಸಿನಿಮಾರಂಗಕ್ಕೆ ಡ್ರೋನ್ ಪ್ರತಾಪ್ ಎಂಟ್ರಿ; ಮೊದಲ ಚಿತ್ರದಲ್ಲೇ ಹೀರೋ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.