ಸೀತಾರಾಮ್ ಎಂದು ಬರೆದ ಪುಸ್ತಕಗಳೇ ಠೇವಣಿ-ಮಂದಿರ ಲೋಕಾರ್ಪಣೆ ಬಳಿಕ ದುಪ್ಪಟ್ಟಾದ ಖಾತೆ ಸಂಖ್ಯೆ
ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ಒಂದು ವಿಶಿಷ್ಟವಾದ ಬ್ಯಾಂಕ್
Team Udayavani, Feb 12, 2024, 12:34 AM IST
ಅಯೋಧ್ಯೆ: ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ಒಂದು ವಿಶಿಷ್ಟವಾದ ಬ್ಯಾಂಕ್ ಇದೆ. ಇಲ್ಲಿ ಹಣದ ವಹಿವಾಟಿಗೆ ಜಾಗವಿಲ್ಲ. ಶುದ್ಧ ಭಕ್ತಿ, ನಂಬಿಕೆ, ಶಾಂತಿ ಮತ್ತು ಆಧ್ಯಾತ್ಮಿಕತೆಗೆ ಮಾತ್ರ ಅವಕಾಶ. ಅಂತಾರಾಷ್ಟ್ರೀಯ ಶ್ರೀ ಸೀತಾರಾಮ್ ಬ್ಯಾಂಕ್‌ನಲ್ಲಿ 35,000ಕ್ಕೂ ಹೆಚ್ಚು ಖಾತೆದಾರರು ಇದ್ದಾರೆ. ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆಯಾದ ಅನಂತರ ಈ ಬ್ಯಾಂಕ್‌ನಲ್ಲಿ ಖಾತೆದಾರರ ಸಂಖ್ಯೆ ದಿನೇದಿನೆ ಅಧಿಕವಾಗುತ್ತಿದೆ.
“ಸೀತಾರಾಮ್’ ಎಂದು ಬರೆದಿರುವ ಕಿರುಪುಸ್ತಕಗಳೇ ಇಲ್ಲಿರುವ ಠೇವಣಿಗಳು. ಕೇವಲ ಭಾರತ ಮಾತ್ರವಲ್ಲದೇ ಅಮೆರಿಕ, ಕೆನಡಾ, ನೇಪಾಲ, ಫಿಜಿ, ಯುಎಇ ಮತ್ತು ಇತರ ದೇಶಗಳ ಭಕ್ತರು ಕೂಡ ಇಲ್ಲಿ ಖಾತೆಗಳನ್ನು ತೆರೆಯುತ್ತಿದ್ದಾರೆ. ಶ್ರೀರಾಮನ ಭಕ್ತರಿಂದ 20,000 ಕೋಟಿ “ಸೀತಾರಾಮ್’ ಕಿರುಪುಸ್ತಕಗಳು ಬ್ಯಾಂಕ್‌ನ ಸಂಗ್ರಹ ದಲ್ಲಿದೆ. ಮಂದಿರ ಟ್ರಸ್ಟ್ ಮುಖ್ಯಸ್ಥರಾದ ಮಹಾಂತ್ ನೃತ್ಯ ಗೋಪಾಲ್ ದಾಸ್ 1970ರಲ್ಲಿ ಈ ಬ್ಯಾಂಕ್ ಅನ್ನು ಸ್ಥಾಪಿಸಿ ದ್ದರು. ಭಕ್ತರು ಇಲ್ಲಿಯವರೆಗೂ ಒಟ್ಟು 1.37 ಕೋಟಿ ರಾಮ ನಾಮ ಬರೆದು ಸಮರ್ಪಿಸಿದ್ದಾರೆ. “ಬ್ಯಾಂಕ್ ವತಿಯಿಂ ದ ಉಚಿತವಾಗಿ ಕಿರುಪುಸ್ತಕಗಳು, ಪೆನ್‌ಗಳನ್ನು ಒದಗಿಸಲಾಗುತ್ತದೆ. ಖಾತೆ ತೆರೆಯಬೇಕಾದರೆ ಭಕ್ತರು ಕನಿಷ್ಠ 5 ಲಕ್ಷ ಬಾರಿ “ಸೀತಾರಾಮ್’ ಎಂದು ಬರೆಯಬೇಕು. ದೇಶ-ವಿದೇಶದಲ್ಲಿ ಬ್ಯಾಂಕ್‌ನ ಒಟ್ಟು 136 ಶಾಖೆಗಳಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election ನಿಯಮಕ್ಕೆ ತಿದ್ದುಪಡಿ: ಕೇಂದ್ರದ ಚಿಂತನೆಗೆ ಕಾಂಗ್ರೆಸ್ ಕಿಡಿ
Wayanad ಭೂಕುಸಿತ ಸ್ಥಳದಲ್ಲಿ ಸಂಗೀತೋತ್ಸವಕ್ಕೆ ಹೈಕೋರ್ಟ್ ತಡೆ
Ayodhya ರಾಮಮಂದಿರ; ತಾಜ್‌ಮಹಲನ್ನು ಹಿಂದಿಕ್ಕಿ ನಂ.1 ಪ್ರವಾಸಿ ತಾಣ
Kota: ಕೋಟಾದಲ್ಲಿ ಮತ್ತೂಬ್ಬ ವಿದ್ಯಾರ್ಥಿ ಆತ್ಮಹತ್ಯೆ: ವರ್ಷದ 17ನೇ ಪ್ರಕರಣ
Allu Arjun; ತಪ್ಪು ಮಾಹಿತಿ, ಚಾರಿತ್ರ್ಯ ಹರಣಕ್ಕೆ ಯತ್ನ: ರೇವಂತ್ ರೆಡ್ಡಿಗೆ ತಿರುಗೇಟು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.