Budget ಭಾರತದ ಅಭಿವೃದ್ಧಿಗೆ ಸಮಗ್ರ ದೃಷ್ಟಿಕೋನ ಪ್ರಸ್ತುತ ಪಡಿಸಿದ ಬಜೆಟ್
Team Udayavani, Jul 24, 2024, 6:34 AM IST
ಬೆಂಗಳೂರು: ಕೇಂದ್ರ ಸರ್ಕಾರದ ಬಜೆಟ್ ಭಾರತದ ಅಭಿವೃದ್ಧಿಗೆ ಸಮಗ್ರ ದೃಷ್ಟಿಕೋನವನ್ನು ಪ್ರಸ್ತುತ ಪಡಿಸುತ್ತದೆ. ಜತೆಗೆ ಉದ್ಯೋಗಾವಕಾಶ, ಕೌಶಲ್ಯ ತರಬೇತಿ, ಸಣ್ಣ ಮತ್ತು ಮಧ್ಯಮ ಉದ್ಯಮಗಳು, ಕೃಷಿ ಮತ್ತು ಮಧ್ಯಮ ವರ್ಗಗಳ ಮೇಲೆ ಇದು ದೃಢವಾಗಿ ಒತ್ತು ನೀಡಿದೆ. 9 ಪ್ರಮುಖ ಆದ್ಯತೆಯ ಕ್ಷೇತ್ರಗಳಿಗೆ ಸರ್ಕಾರದ ಬದ್ಧತೆ ನೀಡಿದ್ದು ಸುಸ್ಥಿರ ಬೆಳವಣಿಗೆಗೆ ದೃಢವಾದ ಚೌಕಟ್ಟನ್ನು ಪೂರೈಸುತ್ತಿವೆ. ಕೃಷಿ, ಡಿಜಿಟಲ್ ಮತ್ತು ಮೂಲ ಸೌಕರ್ಯ ವಲಯಕ್ಕೂ ಆದ್ಯತೆ ನೀಡಲಾಗಿದೆ.
ಬಂಡವಾಳ ವೆಚ್ಚಕ್ಕೆ 11.11ಲಕ್ಷ ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದೆ. ಇದು ಆರ್ಥಿಕತೆಗೆ ಗಮನಾರ್ಹ ಚಾಲನೆ ನೀಡುವಂತಹದ್ದಾಗಿದ್ದು, ಇದರಿಂದಾಗಿ ಸಿಮೆಂಟ್, ಉಕ್ಕು ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಬೆಳವಣಿಗೆಗೆ ಚಾಲನೆ ಸಿಗಲಿದೆ. ಸಾಕಷ್ಟು ಉದ್ಯೋಗಳನ್ನು ಈ ವಲಯದಲ್ಲಿ ನಿರೀಕ್ಷೆ ಮಾಡಲಾಗಿದೆ. ಹೆಚ್ಚಿನ ಉದ್ಯೋಗವಕಾಶಗಳನ್ನು ಸೃಷ್ಟಿಸಹುದಾದ ವಲಯ ಎಂದು ಪರಿಗಣಿಸಲಾಗಿದೆ.
ಹೆಚ್ಚಿನ ಉದ್ಯೋಗಾವಕಾಶಕ್ಕೆ ಪ್ರೋತ್ಸಾಹದ ಜತೆಗೆ ಖಾಸಗಿ ಸಂಸ್ಥೆಗಳಿಂದ ಯುವ ಉದ್ಯೋಗಿಗಳಿಗೆ ಇಂಟರ್ನ್ಶಿಪ್ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಹೆಜ್ಜೆಯಿರಿಸಲಾಗಿದೆ. ಇಂಟರ್ನ್ಶಿಪ್ ಪ್ರೋತ್ಸಾಹ ಮತ್ತು ಕೈಗೆಟುಕುವ ಬೆಲೆಯ ವಸತಿಗಳನ್ನು ಪೋಷಿಸುವ ಕಾರ್ಯಗಳು ಸಮಾಜ ಕಲ್ಯಾಣದ ಮೇಲೆ ಒತ್ತು ನೀಡಿದೆ.
ಹೆಚ್ಚುವರಿಯಾಗಿ ಕೃಷಿ ಕ್ಷೇತ್ರದಲ್ಲಿ ಡಿಜಿಟಲ್ ಮೂಲಸೌಕರ್ಯ ಸೃಷ್ಟಿಸಲು ಸರ್ಕಾರದ ಪ್ರಯತ್ನಗಳ ಜತೆಗೆ ಪ್ರವಾಸೋದ್ಯಮಕ್ಕೆ ಬೆಂಬಲ ನೀಡುವ ಕ್ರಮಗಳು ಶ್ಲಾಘನೀಯವಾಗಿವೆ. ನವೋದ್ಯಮ ಕೇಂದ್ರವಾಗಿ ಬೆಂಗಳೂರು ಏಂಜಲ್ ಟ್ಯಾಕ್ಸ್ ಮತ್ತು ಈಕ್ವಲೈಸೇಷನ್ ಲೆವಿ ಶುಲ್ಕಗಳ ನಿಷೇಧದಿಂದ ಗಮನಾರ್ಹ ಲಾಭ ಪಡೆಯಲಿದೆ. ಕ್ಯಾಪಿಟಲ್ ಗೇನ್ಸ್ ತೆರಿಗೆಯನ್ನು ತರ್ಕ ಬದ್ಧವಾಗಿಸುವುದು ಮತ್ತೂಂದು ಸಕಾರಾತ್ಮಕ ಹೆಜ್ಜೆಯಾಗಿದೆ. ಸಣ್ಣ, ಸೂಕ್ಷ್ಮ ಮತ್ತು ಮಧ್ಯಮ ಉದ್ಯಮಗಳು(ಎಂಎಸ್‌ಎಟಇ), ಸ್ಟಾರ್ಟ್‌ಅಪ್‌ಗ್ಳು, ವ್ಯವಹಾರ ನಡೆಸಲು ಸುಲಭವಾಗಿಸುವುದು, ತೆರಿಗೆ ಸುಧಾರಣೆಗಳು ಮತ್ತು ಸುಸ್ಥಿರತೆ ಕುರಿತ ಬಿಸಿಐಸಿಯ ಅನೇಕ ಶಿಫಾರಸ್ಸುಗಳನ್ನು ಬಜೆಟ್‌ನಲ್ಲಿ ಸೇರ್ಪಡೆ ಮಾಡಿರುವುದು ಪ್ರೋತ್ಸಾಹದಾಯಕವಾಗಿದೆ.
-ಡಾ. ಎಸ್. ದೇವರಾಜನ್, -ಬಿಸಿಐಸಿ ಅಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.