ಪುನರ್ ವಸತಿ ಜಾಗದ ಪ್ರಕರಣ: ಅಭಿವೃದ್ಧಿ ಕಾರ್ಯ ಪ್ರಾರಂಭ
ಮಹಿಳೆಯರು ಸೇರಿದಂತೆ 43 ಜನರ ಮೇಲೆ ಕೊಲೆ ಯತ್ನ ಪ್ರಕರಣ ದಾಖಲು!
Team Udayavani, Aug 5, 2021, 6:53 PM IST
ಬನಹಟ್ಟಿ : ಹಳಿಂಗಳಿ ಗುಡ್ಡದ ಪ್ರದೇಶದಲ್ಲಿ ತಮದಡ್ಡಿ ಪುನರ್ ವಸತಿ ಕಲ್ಪಿಸುವ ಜಾಗಕ್ಕೆ ಸಂಬಂಧಿಸಿದಂತೆ ಬುಧವಾರ ಹಳಿಂಗಳಿ ಗುಡ್ಡದ ಪ್ರದೇಶದಲ್ಲಿ ನಡೆದ ಹೈಡ್ರಾಮ ಪ್ರಕರಣಕ್ಕೆ ಸಂಬಂಧಿಸಿದಂತೆ ಹಳಿಂಗಳಿ ಗ್ರಾಮದ ಮಹಿಳೆಯರು, ಮುಖಂಡ ರಾಜು ನಂದೆಪ್ಪನವರ, ಗ್ರಾಪಂ ಉಪಾಧ್ಯಕ್ಷ ಪ್ರದೀಪ ನಂದೆಪ್ಪನವರ ಸೇರಿದಂತೆ 43 ಜನರ ಮೇಲೆ ಕರ್ತವ್ಯ ನಿರತ ತಹಸೀಲ್ದಾರ್, ಇತರೇ ಅಧಿಕಾರಿಗಳು ಹಾಗೂ ಪೊಲೀಸರ ಕೊಲೆಗೆ ಯತ್ನ ಪ್ರಕರಣ ತೇರದಾಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಹಳಿಂಗಳಿ ಗ್ರಾಮದ ಗುಡ್ಡದ ಪ್ರದೇಶದಲ್ಲಿ ತಮದಡ್ಡಿ ಪುನರ್ ವಸತಿ ಕಲ್ಪಿಸಲು 89 ಎಕರೆ 34 ಗುಂಟೆ ಜಾಗವನ್ನು ಸರಕಾರ ಮಂಜುರು ಮಾಡಿದ್ದು, ನಿಯೋಜಿತ ಜಾಗದಲ್ಲಿ ಪುನರ್ ವಸತಿ ಅಭಿವೃದ್ಧಿ ಕರ‍್ಯ ಮಾಡುವ ವೇಳೆ ಆರೋಪಿತರು ಸ್ಥಳಕ್ಕೆ ಆಗಮಿಸಿ ಸ್ಥಳದಲ್ಲಿದ್ದ ಕರ್ತವ್ಯ ನಿರತ ತಹಸೀಲ್ದಾರ್ ಹಾಗೂ ಇತರೇ ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿಗಳ ಮೇಲೆ ಸಿಮೇ ಎಣ್ಣೆ ಸುರಿದು ಬೆಂಕಿ ಕಡ್ಡಿ ಕೊರೆದು ಕೊಲೆಗೆ ಯತ್ನಿಸಿದ್ದಾರೆಂದು ಕೃಷ್ಣಾ ಮೇಲ್ದಂಡೆ ಯೋಜನೆ ರಬಕವಿ ವಿಭಾಗದ ಎಇಇ ಆರ್.ಕೆ. ಕುಲಕರ್ಣಿ ದೂರು ದಾಖಲಿಸಿದ್ದಾರೆ.
ಕಾಮಗಾರಿ ಪ್ರಾರಂಭ : ತಮದಡ್ಡಿ ಪುನರ್ ವಸತಿ ಜಾಗದಲ್ಲಿ ಬುಧವಾರದಿಂದ ಜೆಸಿಬಿ ಮುಖಾಂತರ ನೆಲವನ್ನು ಸಮತಟ್ಟ ಮಾಡುವ ಕೆಲಸ ಪ್ರಾರಂಭಗೊಂಡಿದ್ದು, ಸ್ಥಳದಲ್ಲಿ ಪೊಲೀಸರು ಬೀಡು ಬಿಟ್ಟಿದ್ದಾರೆ. ಕೃಷ್ಣಾ ಮೇಲ್ದಂಡೆ ಯೋಜನೆ ರಬಕವಿ ವಿಭಾಗದ ಆರ್.ಕೆ.ಕುಲಕರ್ಣಿ ಹಾಗೂ ಇತರೇ ಅಧಿಕಾರಿಗಳು ಅಭಿವೃದ್ಧಿ ಕಾರ್ಯ ಕೈಗೊಂಡಿದ್ದಾರೆ. ಅಭಿವೃದ್ಧಿಗಾಗಿ 3.39 ಕೋಟಿ ಅನುದಾನದ ಟೆಂಡರ್ ಆಗಿದೆ.6 ತಿಂಗಳಲ್ಲಿ ಕೆಲಸ ಪೂರ್ಣಗೊಳಿಸಲು ಸಮಯ ನೀಡಲಾಗಿದ್ದು, 1200ರಷ್ಟು ನಿವೇಶನ ಆಗುವ ನಿರೀಕ್ಷೆ ಇದೆ ಎಂದು ಆರ್.ಕೆ. ಕುಲಕರ್ಣಿ ತಿಳಿಸಿದ್ದಾರೆ. ಠಾಣಾಧಿಕಾರಿ ರಾಜು ಬೀಳಗಿ, ಹೆಚ್ಚುವರಿ ಪಿಎಸ್‌ಐ ಸಾಂಬಾಜಿ ಸೂರ್ಯವಂಶಿ ಸೇರಿದಂತೆ 16 ಪೊಲೀಸ್ ಸಿಬ್ಬಂದಿ ಸ್ಥಳದಲ್ಲಿ ಬಂದೋಬಸ್ತ್ ಕೈಗೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ
K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ
Rabkavi Banahatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.