ಗ್ರಾಂ ಲೆಕ್ಕದಲ್ಲಿ ಹಂಚಿಕೆ, ತೂಕ ಮಾಡುವುದೇ ಸವಾಲು

ಮಕ್ಕಳು,ಗರ್ಭಿಣಿಯರ ಮನೆಗೇ ಪೌಷ್ಟಿಕ ಆಹಾರ ಪೂರೈಕೆ

Team Udayavani, Jun 15, 2020, 6:13 AM IST

ಗ್ರಾಂ ಲೆಕ್ಕದಲ್ಲಿ ಹಂಚಿಕೆ, ತೂಕ ಮಾಡುವುದೇ ಸವಾಲು

 ವಿಶೇಷ ವರದಿಮಹಾನಗರ: ಕೋವಿಡ್-19ದಿಂದಾಗಿ ಅಂಗನವಾಡಿಗಳಲ್ಲಿ ಈಗ ಮಕ್ಕಳ ಕಲರವ ಇಲ್ಲ. ಮಕ್ಕಳು, ಗರ್ಭಿಣಿಯರಿಗೆ ಅಡುಗೆಯೂ ಸಿದ್ಧವಾಗುತ್ತಿಲ್ಲ. ಬದಲಾಗಿ ಅವರಿಗೆ ಗ್ರಾಂ ಲೆಕ್ಕದಲ್ಲಿ ಆಹಾರದ ಸಾಮಗ್ರಿಗಳನ್ನು ವಿತರಿಸಲಾಗುತ್ತಿದೆ.

ತಿಂಗಳಿಗೆ ಬೇಕಾಗುವ ಸಾಮಗ್ರಿಗಳನ್ನು ಗ್ರಾಂ ಲೆಕ್ಕದಲ್ಲಿ ಹಂಚಿಕೆ ಮಾಡಲಾಗಿದ್ದು ಇದನ್ನು ತೂಕ ಮಾಡಿ ಫ‌ಲಾನುಭವಿಗಳಿಗೆ ಸಮರ್ಪಕವಾಗಿ ತಲುಪಿಸುವುದು ಈಗ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರಿಗೆ ಸವಾಲಾಗಿದೆ. ಕೋವಿಡ್-19 ಕರ್ತವ್ಯದ ಜತೆ ಆಹಾರ ಸಾಮಗ್ರಿಗಳನ್ನು ಗ್ರಾಂ ಲೆಕ್ಕದಲ್ಲಿ ತೂಕ ಮಾಡುವ ಹೊಣೆಗಾರಿಕೆಯೂ ಕಾರ್ಯಕರ್ತೆಯರ ಮೇಲಿದೆ.

ಯಾರಿಗೆ ಎಷ್ಟು?
3ರಿಂದ 6 ವರ್ಷ ವಯಸ್ಸಿನ ಮಗುವಿಗೆ ತಿಂಗಳೊಂದಕ್ಕೆ ಹಾಲಿನ ಪುಡಿ 0.390 ಗ್ರಾಂ., ಸಕ್ಕರೆ 130 ಗ್ರಾಂ, ಅಕ್ಕಿ 1.560 ಕೆಜಿ, ತೊಗರಿಬೇಳೆ 0.153 ಗ್ರಾಂ, ಉಪ್ಪು 0.052 ಗ್ರಾಂ, ಮೆಣಸು 0.026, ಸಾಸಿವೆ 0.034 ಇತ್ಯಾದಿ ನೀಡಲಾಗುತ್ತಿದೆ. ಮಾತೃಪೂರ್ಣ ಯೋಜನೆಯಡಿ ಗರ್ಭಿಣಿ/ಬಾಣಂತಿಗೆ ತಿಂಗಳೊಂದಕ್ಕೆ ಹಾಲಿನ ಪುಡಿ 0.520 ಗ್ರಾಂ, ಅಕ್ಕಿ 3.900 ಕೆಜಿ, ಸಕ್ಕರೆ 0.130 ಗ್ರಾಂ, ಬೆಲ್ಲ 0.598 ಗ್ರಾಂ, ಮೆಣಸು 0.026 ಗ್ರಾಂ, ಸಾಸಿವೆ 0.017 ಗ್ರಾಂ, ಎಣ್ಣೆ 0.078 ಗ್ರಾಂ, ಉಪ್ಪು 0.078 ಗ್ರಾಂ ಇತ್ಯಾದಿಗಳನ್ನು ನೀಡಬೇಕಾಗಿದೆ.

ಪ್ಯಾಕೆಟ್‌ ಬದಲು ಚಿಲ್ಲರೆ
“ಮೇ ತಿಂಗಳಿನಲ್ಲಿ ಮಾತೃಪೂರ್ಣ ಯೋಜನೆಯಡಿ ಪ್ರತಿ ಫ‌ಲಾನುಭವಿಗೆ 8.5 ಕೆಜಿ ಅಕ್ಕಿ, ಅರ್ಧ ಕೆಜಿ ನೆಲಗಡಲೆ, ಅರ್ಧ ಕೇಜಿ ಬೇಳೆಯನ್ನೊಳಗೊಂಡ ಪ್ಯಾಕೆಟ್‌ ನೀಡಲಾಗಿತ್ತು. ಆದರೆ ಜೂನ್‌ನಲ್ಲಿ ಸಾಮಗ್ರಿಗಳನ್ನು ಬಿಡಿಬಿಡಿಯಾಗಿ ನೀಡಲಾಗಿದೆ. ಈ ರೀತಿ ಎಲ್ಲ ಸಾಮಗ್ರಿಗಳನ್ನು ಅತೀ ಕಡಿಮೆ ಪ್ರಮಾಣದಲ್ಲಿ ನೀಡುವ ಬದಲು ಮುಖ್ಯವಾದ ಕೆಲವು ಸಾಮಗ್ರಿಗಳನ್ನು ಒಂದು ಪ್ಯಾಕೆಟ್‌ನಲ್ಲಿ ನೀಡಬಹುದು. ಉಳಿದ ಸಣ್ಣಪುಟ್ಟ ಸಾಮಗ್ರಿಗಳು ಸಾಮಾನ್ಯವಾಗಿ ಹೆಚ್ಚಿನವರ ಮನೆಗಳಲ್ಲಿ ಇರುವುದರಿಂದ ಅವುಗಳನ್ನೇ ಬಳಸಿಕೊಳ್ಳಬಹುದು. ಮುಂದಿನ ತಿಂಗಳಿನಿಂದ ಸರಕಾರ ಪ್ಯಾಕೆಟ್‌ನಲ್ಲಿಯೇ ಆಹಾರ ಸಾಮಗ್ರಿಗಳನ್ನು ನೀಡಿದರೆ ವಿತರಣೆಗೆ ಅನುಕೂಲ. ಗ್ರಾಂ ಲೆಕ್ಕದಲ್ಲಿ ತೂಕ ಮಾಡುವುದು ದೊಡ್ಡ ಸವಾಲಿನ ಕೆಲಸವಾಗಿದೆ’ ಎನ್ನುತ್ತಾರೆ ಕಾರ್ಯಕರ್ತೆಯರು.

ಕೋವಿಡ್-19 ಕರ್ತವ್ಯ
ಅಂಗನವಾಡಿ ಕಾರ್ಯಕರ್ತೆಯರು ಆಶಾ ಕಾರ್ಯಕರ್ತೆಯರಂತೆ ಕೋವಿಡ್-19 ನಿಯಂತ್ರಣ, ಪತ್ತೆ ಕಾರ್ಯದಲ್ಲಿ ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆಯ ಜತೆ ಕೈ ಜೋಡಿಸಿದ್ದಾರೆ. ವಿವಿಧ ರೀತಿಯ ಸಮೀಕ್ಷೆಗಳಲ್ಲೂ ಇದ್ದಾರೆ. ಇದರ ನಡುವೆ ಪ್ರತಿ ಮಗು, ಗರ್ಭಿಣಿ, ಬಾಣಂತಿಯರಿಗೆ ಪೌಷ್ಟಿಕ ಆಹಾರ ತಲುಪಿಸುತ್ತಿದ್ದಾರೆ. ಮಕ್ಕಳಿಗೆ ಚುಚ್ಚುಮದ್ದು ಒದಗಿಸುವುದು, ಮಾತೃವಂದನಾ ಯೋಜನೆಗೆ ಫ‌ಲಾನುಭವಿಗಳನ್ನು ನೋಂದಣಿ ಮಾಡಿಕೊಳ್ಳುವುದು ಮೊದಲಾದ ಕೆಲಸಗಳೂ ಅವರದೇ. ಇದರ ನಡುವೆಯೂ ಕ್ಲಪ್ತ ಸಮಯದಲ್ಲಿ ಫ‌ಲಾನುಭವಿಗಳಿಗೆ ಆಹಾರ ತಲುಪಿಸಲಾಗುತ್ತಿದೆ ಎನ್ನುತ್ತಾರೆ ಅಂಗನವಾಡಿ ಕಾರ್ಯಕರ್ತೆಯರ ಸಂಘದ ಮುಂದಾಳುಗಳು.

ಪ್ಯಾಕೆಟ್‌ನಲ್ಲಿಯೇ ನೀಡಿ
ಆಹಾರ ಸಾಮಗ್ರಿಗಳನ್ನು ಪ್ರತಿಯೊಬ್ಬರಿಗೂ ಗ್ರಾಂ ಲೆಕ್ಕದಲ್ಲಿ ತೂಕ ಮಾಡಿಕೊಡುವುದು ಒಂದು ರೀತಿಯ ಸವಾಲು. ಪ್ಯಾಕೆಟ್‌ನಲ್ಲಿಯೇ ನೀಡಿದರೆ ಉತ್ತಮ. ಅಂಗನವಾಡಿ ಕಾರ್ಯರ್ತೆಯರಿಗೂ ವಿಶೇಷ ಪ್ಯಾಕೇಜ್‌ ನೀಡಲು, ಬಾಕಿ ಇರುವ ಗೌರವಧನ ಬಿಡುಗಡೆ ಮಾಡಲು ಸರಕಾರವನ್ನು ಒತ್ತಾಯಿಸಿದ್ದೇವೆ.
 - ಜಯಲಕ್ಷ್ಮೀ ಬಿ.ಆರ್‌., ರಾಜ್ಯಾಧ್ಯಕ್ಷೆ,
ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಸಂಘ

ಟಾಪ್ ನ್ಯೂಸ್

Kodagu: ಯೋಧ ದಿವಿನ್‌ ಪಂಚಭೂತಗಳಲ್ಲಿ ಲೀನ

Kodagu: ಯೋಧ ದಿವಿನ್‌ ಪಂಚಭೂತಗಳಲ್ಲಿ ಲೀನ

Udupi: ಘನತೆಯ ಬದುಕಿನಂತೆ ಸಾವೂ ಒಂದು ಹಕ್ಕು: ಡಾ| ರವೀಂದ್ರನಾಥ ಶಾನುಭಾಗ್‌

Udupi: ಘನತೆಯ ಬದುಕಿನಂತೆ ಸಾವೂ ಒಂದು ಹಕ್ಕು: ಡಾ| ರವೀಂದ್ರನಾಥ ಶಾನುಭಾಗ್‌

Uppinangady: ಕೆಮರಾ ಕಣ್ಣಿಗೆ ಸಿಕ್ಕಿದ ಕಾಡಾನೆ

Uppinangady: ಕೆಮರಾ ಕಣ್ಣಿಗೆ ಸಿಕ್ಕಿದ ಕಾಡಾನೆ

Road Mishap: ಮೋಟಾರು ಸೈಕಲ್‌ ಢಿಕ್ಕಿ: ಮಹಿಳೆಗೆ ಗಾಯ

Road Mishap: ಮೋಟಾರು ಸೈಕಲ್‌ ಢಿಕ್ಕಿ: ಮಹಿಳೆಗೆ ಗಾಯ

Moodbidri ಪರಿಸರದಲ್ಲಿ ಸಕ್ರಿಯರಾಗಿರುವ ಬ್ಯಾಟರಿ ಕಳ್ಳರು

Moodbidri ಪರಿಸರದಲ್ಲಿ ಸಕ್ರಿಯರಾಗಿರುವ ಬ್ಯಾಟರಿ ಕಳ್ಳರು

Karnataka: ಹೊಸ ವರ್ಷದ ಆಚರಣೆ ಮದ್ಯ ಮಾರಾಟ ನೀರಸ

Karnataka: ಹೊಸ ವರ್ಷದ ಆಚರಣೆ ಮದ್ಯ ಮಾರಾಟ ನೀರಸ

Karnataka ಪ್ರತ್ಯೇಕ ಪ್ರಕರಣ: ಅಪಘಾತಗಳಲ್ಲಿ 11 ಮಂದಿ ಸಾವು

Karnataka ಪ್ರತ್ಯೇಕ ಪ್ರಕರಣ: ಅಪಘಾತಗಳಲ್ಲಿ 11 ಮಂದಿ ಸಾವು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Moodbidri ಪರಿಸರದಲ್ಲಿ ಸಕ್ರಿಯರಾಗಿರುವ ಬ್ಯಾಟರಿ ಕಳ್ಳರು

Moodbidri ಪರಿಸರದಲ್ಲಿ ಸಕ್ರಿಯರಾಗಿರುವ ಬ್ಯಾಟರಿ ಕಳ್ಳರು

13

Surathkal: ಅನಾರೋಗ್ಯದಿಂದ ಸಿ.ಎ. ವಿದ್ಯಾರ್ಥಿನಿ ಸಾವು

Kinnigoli: ರಿಕ್ಷಾ ಪಲ್ಟಿ; ಚಾಲಕ ಗಂಭೀರ

Kinnigoli: ರಿಕ್ಷಾ ಪಲ್ಟಿ; ಚಾಲಕ ಗಂಭೀರ

Ullala: ಆಯತಪ್ಪಿ ಪಾಳು ಬಾವಿಗೆ ಬಿದ್ದು ಸ್ಥಳೀಯ ಮೀನುಗಾರ ಮೃತ್ಯು

Ullala: ಆಯತಪ್ಪಿ ಪಾಳು ಬಾವಿಗೆ ಬಿದ್ದು ಸ್ಥಳೀಯ ಮೀನುಗಾರ ಮೃತ್ಯು

8(1

Mangaluru: ನೊಂದವರ ಹಸಿವು ತಣಿಸುವ ಸೇವೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Kodagu: ಯೋಧ ದಿವಿನ್‌ ಪಂಚಭೂತಗಳಲ್ಲಿ ಲೀನ

Kodagu: ಯೋಧ ದಿವಿನ್‌ ಪಂಚಭೂತಗಳಲ್ಲಿ ಲೀನ

Udupi: ಘನತೆಯ ಬದುಕಿನಂತೆ ಸಾವೂ ಒಂದು ಹಕ್ಕು: ಡಾ| ರವೀಂದ್ರನಾಥ ಶಾನುಭಾಗ್‌

Udupi: ಘನತೆಯ ಬದುಕಿನಂತೆ ಸಾವೂ ಒಂದು ಹಕ್ಕು: ಡಾ| ರವೀಂದ್ರನಾಥ ಶಾನುಭಾಗ್‌

Uppinangady: ಕೆಮರಾ ಕಣ್ಣಿಗೆ ಸಿಕ್ಕಿದ ಕಾಡಾನೆ

Uppinangady: ಕೆಮರಾ ಕಣ್ಣಿಗೆ ಸಿಕ್ಕಿದ ಕಾಡಾನೆ

Road Mishap: ಮೋಟಾರು ಸೈಕಲ್‌ ಢಿಕ್ಕಿ: ಮಹಿಳೆಗೆ ಗಾಯ

Road Mishap: ಮೋಟಾರು ಸೈಕಲ್‌ ಢಿಕ್ಕಿ: ಮಹಿಳೆಗೆ ಗಾಯ

Moodbidri ಪರಿಸರದಲ್ಲಿ ಸಕ್ರಿಯರಾಗಿರುವ ಬ್ಯಾಟರಿ ಕಳ್ಳರು

Moodbidri ಪರಿಸರದಲ್ಲಿ ಸಕ್ರಿಯರಾಗಿರುವ ಬ್ಯಾಟರಿ ಕಳ್ಳರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.