![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Feb 2, 2022, 7:55 AM IST
ಇಟಾನಗರ: ಅರುಣಾಚಲ ಪ್ರದೇಶದ ಗಡಿ ಯಲ್ಲಿ ಚೀನದ ಯೋಧರಿಂದ ಅಪಹರಿಸಲ್ಪಟ್ಟು ವಾರ ಕಾಲ ಚೀನದ ಕಸ್ಟಡಿಯಲ್ಲಿದ್ದ ತನ್ನ ಪತ್ರನಿಗೆ ಚೀನಿ ಯೋಧರು ತೀವ್ರ ತೆರನಾಗಿ ಚಿತ್ರಹಿಂಸೆ ನೀಡಿದ್ದರು ಎಂದು ಯುವಕನ ತಂದೆ ದೂರಿದ್ದಾರೆ.
ಜ.18ರಂದು ಚೀನಿ ಯೋಧರಿಂದ ಅಪ ಹರಿಸಲ್ಪಟ್ಟಿದ್ದ ಅರುಣಾಚಲ ಪ್ರದೇಶದ ಮಿರಾಮ್ ತಾರೋನ್ ಅನ್ನು ಎರಡು ದೇಶಗಳ ನಡುವೆ ಮಾತುಕತೆ ನಡೆದ ಬಳಿಕ ಚೀನ ಸೇನೆ ಜ.27ರಂದು ಭಾರತದ ಸೇನೆಗೆ ಹಸ್ತಾಂತರಿಸಿತ್ತು. ಸೋಮವಾರ ಸಂಜೆ ಅರುಣಾಚಲ ಪ್ರದೇಶದ ಅಪ್ಪರ್ ಸಯಾಂಗ್ ಜಿಲ್ಲೆಯ ಟ್ಯುಟಿಂಗ್‌ನಲ್ಲಿರುವ ಆತನ ಹೆತ್ತವರಿಗೆ ಹಸ್ತಾಂತರಿಸಲಾಯಿತು.
ಮಾಧ್ಯಮಗಳೊಂದಿಗೆ ಮಾತನಾಡಿದ ಯುವ ಕನ ತಂದೆ ಒಪಾಂಗ್ ತಾರೋನ್ ತನ್ನ ಪುತ್ರ ಮಾನಸಿಕ ಜರ್ಝರಿತವಾಗಿದ್ದು ಘಟನೆಯ ಬಳಿಕ ಸಂಪೂರ್ಣ ಭಯಭೀತನಾಗಿದ್ದಾನೆ. ಚೀನಿ ಯೋಧರ ಕಸ್ಟಡಿಯಲ್ಲಿದ್ದ ವೇಳೆ ತರೋನ್‌ನ ಬೆನ್ನಿಗೆ ತೀವ್ರವಾಗಿ ಒದೆಯಲಾಗಿದೆ. ವಿದ್ಯುತ್ ಆಘಾತವನ್ನೂ ನೀಡಲಾಗಿದೆ. ಈ ದಿನಗಳಲ್ಲಿ ಆತನ ಕೈಗಳನ್ನು ಕಟ್ಟಲಾಗಿತ್ತು. ಇಷ್ಟೊಂದು ಹಿಂಸೆ ನೀಡಿದರೂ ಆತನಿಗೆ ಸರಿಯಾಗಿ ಆಹಾರವನ್ನು ನೀಡಲಾಗಿತ್ತು ಎಂದವರು ಹೇಳಿದರು.
You seem to have an Ad Blocker on.
To continue reading, please turn it off or whitelist Udayavani.