ಗ್ರಾಮೀಣ ಕುಟುಂಬಗಳ ಬದುಕನ್ನು ಹಸನಾಗಿಸಿದ ಕ್ಷೀರೋದ್ಯಮ
Team Udayavani, Jun 1, 2020, 12:02 PM IST
ಸಾಂದರ್ಭಿಕ ಚಿತ್ರ
ದೇಹಕ್ಕೆ ಹಾಲು ಎಷ್ಟು ಮುಖ್ಯ? ಹಾಲು ಏಕೆ ಕುಡಿಯಬೇಕು? ಎಷ್ಟು ಪ್ರಮಾಣ ಹಾಗೂ ಯಾವ ಗುಣಮಟ್ಟದ ಹಾಲು ಕುಡಿಯಬೇಕು? ಈ ಎಲ್ಲ ವಿಷಯಗಳ ಬಗ್ಗೆ ಅರಿವು ಮೂಡಿಸಲೆಂದೇ ವಿಶ್ವಾದ್ಯಂತ ಜೂನ್ 1ರಂದು ವಿಶ್ವ ಹಾಲು ದಿನವನ್ನು ಆಚರಿಸಲಾಗುತ್ತದೆ. ಹಾಲಿನಲ್ಲಿ ಅತೀ ಹೆಚ್ಚು ಪೌಷ್ಟಿಕಾಂಶ ಇದ್ದು, ಮಕ್ಕಳಿಂದ ವಯಸ್ಕರವರೆಗೆ ಎಲ್ಲರ ಆರೋಗ್ಯ ಕಾಪಾಡುವುದರಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
ಗ್ರಾಮೀಣ ಪ್ರದೇಶದ ಕ್ರಾಂತಿ
ಕ್ಷೀರೋದ್ಯಮದ ಕ್ರಾಂತಿ ನಡೆದಿರುವುದು ಗ್ರಾಮೀಣ ಪ್ರದೇಶದಿಂದ. ಒಂದು ಅಂದಾಜಿನ ಪ್ರಕಾರ ಪ್ರಸ್ತುತ ಹೈನುಗಾರಿಕೆಯಿಂದ ವಿಶ್ವದಲ್ಲೆಡೆ ನೂರು ಕೋಟಿ ಮಂದಿ ಬದುಕು ಕಟ್ಟಿಕೊಂಡಿದ್ದಾರೆ. ಭಾರತದ ಹೆಚ್ಚಿನ ಕಡೆ ಹಾಲು ಸೊಸೈಟಿಗಳು ಇವೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಬಹುತೇಕ ಎಲ್ಲ ಗ್ರಾಮಗಳನ್ನು ಕ್ಷೀರ ಕ್ರಾಂತಿ ತಲುಪಿದೆ. ಹೆಚ್ಚಿನ ಕಡೆ ಗ್ರಾಮಕ್ಕೊಂದು ಸೊಸೈಟಿಗಳಿವೆ. ಇದು ಗ್ರಾಮೀಣ ಪ್ರದೇಶದ ಆರ್ಥಿಕತೆಯ ಜೀವಾಳವೇ ಆಗಿದೆ. ಹಲವಾರು ಸೊಸೈಟಿಗಳು ಹೈನುಗಾರರಿಗೆ ಅತ್ಯುತ್ತಮ ಸೌಕರ್ಯಗಳನ್ನು ನೀಡುತ್ತಿರುವುದು ಕೂಡ ಶ್ಲಾಘನೀಯವೇ ಆಗಿದೆ.
ಇತಿಹಾಸ
ಮೊದಲ ಬಾರಿಗೆ 2001ರಲ್ಲಿ ವಿಶ್ವ ಹಾಲು ದಿನ ಆಚರಣೆ ಕುರಿತು ಆದೇಶ ಹೊರಡಿಸಲಾಯಿತು. ಅಂದಿನಿಂದ ಪ್ರತಿ ವರ್ಷ ಜೂನ್ 1ರಂದು ವಿಶ್ವ ಹಾಲು ದಿನ ಆಚರಿಸಲಾಗುತ್ತಿದ್ದು, ಹಾಲಿನ ಮಹತ್ವದ ಕುರಿತು ಪ್ರಚುರಪಡಿಸಲಾಗುತ್ತಿದೆ. ಇದೇ ದಿನ ಕ್ಷೀರೋದ್ಯಮದ ಸಾಧಕರನ್ನು ಗೌರವಿಸುವ ಕಾರ್ಯವೂ ನಡೆಯುತ್ತಿದೆ.
ಉತ್ತಮ ಉಪಕಸುಬು
ಕೆಲವರು ಹೈನುಗಾರಿಕೆಯನ್ನು ಉದ್ಯಮವಾಗಿ ನಡೆಸುತ್ತಿದ್ದರೆ, ಗ್ರಾಮೀಣ ಭಾಗದ ಹೆಚ್ಚಿನ ಕಡೆ ಇದೊಂದು ಉತ್ತಮ ಉಪಕಸುಬು. ಕೃಷಿ ಸಹಿತ ಇತರ ಕಾರ್ಯದೊಂದಿಗೆ ಅದಕ್ಕೆ ಪೂರಕವಾಗಿ ಹೈನುಗಾರಿಕೆ ನಡೆಸುವವರು ಬಹಳಷ್ಟು ಜನರಿದ್ದಾರೆ.
ಹಾಲು ಸೇವನೆ: ಪರಿಣಾಮಗಳು
ಹಲ್ಲು ಮತ್ತು ಮೂಳೆಗಳ ಬಲವರ್ಧನೆಗೆ, ಚೈತನ್ಯಕ್ಕೆ, ನರಗಳ ಕಾರ್ಯಕ್ಕೆ, ಬೆಳವಣಿಗೆಗೆ, ರೋಗ ನಿರೋಧಕ ಶಕ್ತಿಗೆ, ಕೆಂಪು ರಕ್ತಕಣಗಳನ್ನು ಹೆಚ್ಚಿಸುವಲ್ಲಿ ಶುದ್ಧ ಹಾಲು ಪ್ರಮುಖ ಪಾತ್ರ ವಹಿಸುತ್ತದೆ. ಅಲ್ಲದೇ, ಎಲ್ಲ ವಯಸ್ಸಿನವರ ದೇಹದ ಆರೋಗ್ಯಕ್ಕೆ ಹಾಲು ಮತ್ತು ಅದರ ಉತ್ಪನ್ನಗಳು ಸಹಕಾರಿ ಆಗಿವೆ. ಈ ಎಲ್ಲ ಅಂಶಗಳನ್ನು ಹಾಲು ದಿನಾಚರಣೆಯಲ್ಲಿ ಮನದಟ್ಟು ಮಾಡಿಕೊಡಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Stock Market: ಷೇರುಪೇಟೆ ಸೂಚ್ಯಂಕ 500ಕ್ಕೂ ಅಧಿಕ ಅಂಕ ಕುಸಿತ; 23,400ಕ್ಕೆ ಇಳಿದ ನಿಫ್ಟಿ
Jio domain ಗಲಾಟೆ ನಡುವೆಯೇ “ಜಿಯೋಸ್ಟಾರ್’ ಹೊಸ ವೆಬ್‌ಸೈಟ್ ಪ್ರತ್ಯಕ್ಷ!
Haldiram ಭುಜಿಯಾವಾಲಾದಲ್ಲಿ ₹235 ಕೋಟಿ ಹೂಡಿಕೆ ಮಾಡಿದ ಭಾರತ್ ವ್ಯಾಲ್ಯು ಫಂಡ್
Gold Rates:ಡಾಲರ್ ಬೆಲೆ ಏರಿಕೆ-18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?
Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.